ಇಲ್ಲಿನ ದಂಡೆಭಾಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಹಿರಿಯ ಮತ್ತು ಕಿರಿಯ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ನೆಲಗುಣಿಯ ಪ್ರತಿಷ್ಠಿತ ಮಾಡರ್ನ್ ಎಜ್ಯುಕೇಶನ್ ಮಾಡರ್ನ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಗೋಕರ್ಣ
ಇಲ್ಲಿನ ದಂಡೆಭಾಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಹಿರಿಯ ಮತ್ತು ಕಿರಿಯ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ನೆಲಗುಣಿಯ ಪ್ರತಿಷ್ಠಿತ ಮಾಡರ್ನ್ ಎಜ್ಯುಕೇಶನ್ ಮಾಡರ್ನ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ.ಕಿರಿಯರ ವಿಭಾಗದಲ್ಲಿ ಹನಿ ನಾಯಕ ಕನ್ನಡ ಕಂಠಪಾಠ ಹಾಗೂ ಆಶುಭಾಷಣದಲ್ಲಿ ಪ್ರಥಮ, ಮಾಂತೇಶ್ ಗೌಡ ಚಿತ್ರಕಲೆಯಲ್ಲಿ ಪ್ರಥಮ, ಆರನಾ ನಾಯಕ ಕಥೆ ಹೇಳುವುದರಲ್ಲಿ ಪ್ರಥಮ, ಧನ್ಯ ನಾಯ್ಕ ಛದ್ಮವೇಷದಲ್ಲಿ ಪ್ರಥಮ ಸ್ಥಾನ, ಸನ್ನಿಧಿ ಅಂಬೇಡ್ಕರ್ ಧಾರ್ಮಿಕ ಪಠಣ-ಸಂಸ್ಕೃತದಲ್ಲಿ ಪ್ರಥಮ ಸ್ಥಾನ, ಮಹಮ್ಮದ್ ಸುಹೇಲ್ ಧಾರ್ಮಿಕ ಪಠಣ ಅರೇಬಿಕ್ ಪ್ರಥಮ ಸ್ಥಾನ,ಆರಾಧ್ಯ ನಾಯ್ಕ್ ಕ್ಲೇಯ್ ಮಾಡಲಿಂಗ ತೃತೀಯ ಸ್ಥಾನ, ಸಾನಿಧ್ಯ ನಾಯಕ್ ಭಕ್ತಿಗೀತೆ ತೃತೀಯ ಸ್ಥಾನ ಗಳಿಸಿದ್ದಾರೆ.
ಹಿರಿಯರ ವಿಭಾಗದಲ್ಲಿ ಪುಣ್ಯರಾವ್ ಭಕ್ತಿಗೀತೆ ಹಾಗೂ ದೇಶಭಕ್ತಿ ಗೀತೆಯಲ್ಲಿ ಪ್ರಥಮ, ಮದಿಹಾ ಷಾ ಧಾರ್ಮಿಕ ಪಠಣ ಅರೇಬಿಕ್ ಪ್ರಥಮ ಸ್ಥಾನ ಮತ್ತು ಹಿಂದಿ ಕಂಠಪಾಠ ದ್ವಿತೀಯ, ಪ್ರಲ್ಹಾ ದ ಕಾಯ್ಕಿಣಿ ಕ್ಲೇಯ್ ಮಾಡಲಿಂಗ್ ನಲ್ಲಿ ಪ್ರಥಮ, ಪ್ರಜ್ಞಾ ಶೇಟ್ ಚಿತ್ರಕಲೆಯಲ್ಲಿ ದ್ವಿತೀಯ, ಧನ್ವಿ ಚಿತ್ತಾಲ್ ಕಥೆ ಹೇಳುವ ಸ್ಪರ್ಧೆಯಲ್ಲಿ ತೃತೀಯ, ಆರಾಧ್ಯ ಗೊನ್ನಾಗರ್ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ, ಸಾದ್ವಿ ನಾಯ್ಕ್ ಅಭಿನಯ ಗೀತೆಯಲ್ಲಿ ಪ್ರಥಮ ಹಾಗೂ ಕನ್ನಡ ಕಂಠ ಪಾಠ ದ್ವಿತೀಯ, ಚಿಂತನಾ ಪಟಗಾರ ಕವನ ವಾಚನ ಪ್ರಥಮ ಸ್ಥಾನ ಪಡೆದಿದ್ದಾರೆ.ನೆಲ್ಲಿಕೇರಿ ಮಹಾಸತಿ ದೇವಿಯ ವರ್ಧಂತಿ ಸಂಪನ್ನಕುಮಟಾದ ನೆಲ್ಲಿಕೇರಿ ಶ್ರೀಮಹಾಸತಿದೇವಿ ಮಂದಿರದಲ್ಲಿ ೪೭ನೇ ಪ್ರತಿಷ್ಠಾ ವರ್ಧಂತಿ ಉತ್ಸವ ಪ್ರಯುಕ್ತ ಎರಡು ದಿನ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆದವು. ನ. ೨೪ರಂದು ಗಣಪತಿ ಪೂಜೆಯೊಂದಿಗೆ ಆರಂಭಗೊಂಡ ವರ್ಧಂತಿ ಕಾರ್ಯಕ್ರಮದಲ್ಲಿ ಗಣಪತಿ ಹವನ, ನವಗ್ರಹ, ಮೃತ್ಯುಂಜಯ, ಪ್ರಾಯಶ್ಚಿತ್ತ, ಶಾಂತಿ, ಶಕ್ತಿ, ತತ್ವ, ಕಲಾ, ಪ್ರಾಣಪ್ರತಿಷ್ಠಾದಿ ಹವನಗಳು, ದುರ್ಗಾ ಹವನದ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಿತು.
ನ.೨೫ರಂದು ಸಪ್ತಶತಿ ಪಾರಾಯಣ, ನವಚಂಡೀ ಹವನ, ದುರ್ಗಾಪೂಜೆ, ಕುಂಭಾಭಿಷೇಕ ಬಲಿ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಇದೇ ಸಂದರ್ಭ ಮಹಾಸತಿ ಸಭಾಭವನಕ್ಕೆ ನೂತನವಾಗಿ ಅಳವಡಿಸಲಾದ ಲಿಫ್ಟ್ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಲಾಯಿತು.ಕಾರ್ಯಕ್ರಮದುದ್ದಕ್ಕೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಹಾಸತಿ ದೇವಿಗೆ ಶಕ್ತಯಾನುಸಾರ ವಿವಿಧ ಸೇವೆ ಸಮರ್ಪಿಸಿದರು. ಮಹಿಳೆಯರು, ಮುತ್ತೈದೆಯರು ಬಾಗಿನ ಸಮರ್ಪಿಸಿದರು. ಸರ್ವಾಲಂಕಾರದಲ್ಲಿ ಶೋಭಿತಳಾದ ಮಹಾಸತಿಯ ಮಹಾಮಂಗಳಾರತಿಯನ್ನು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಕಣ್ತುಂಬಿಕೊಂಡರು. ಸಂಜೆ ಭಜನಾದಿ ಕಾರ್ಯಕ್ರಮ ಜರುಗಿತು.