ಸಾರಾಂಶ
ಎಲ್ಲ ಪೊಲೀಸ್ ಠಾಣೆಗಳಲ್ಲೂ ಜನಸ್ನೇಹಿ ವಾತಾವರಣ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೇವೆ. ಪೊಲೀಸ್ ಠಾಣೆಗೆ ಜನರು ಈ ಹಿಂದೆ ಬರಲು ಹೆದರುತ್ತಿದ್ದರು. ಆದರೆ, ಈಗ ಜನ ಭಯ ಇಲ್ಲದೇ ಬರುತ್ತಿದ್ದಾರೆ. ಹೀಗಾಗಿ ಪೊಲೀಸರು ಅಧಿಕಾರಿಗಳು, ಪೊಲೀಸ್ ಠಾಣೆಗಳ ಕಾರ್ಯವ್ಯಾಪ್ತಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದೇವೆ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪೊಲೀಸ್ ಠಾಣೆಗಳ ಕಾರ್ಯ ವ್ಯಾಪ್ತಿ, ಪೊಲೀಸರ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಚಾಲನೆ ನೀಡಿದರು.ಪೊಲೀಸ್ ಅಧಿಕಾರಿಗಳು, ಪೊಲೀಸರ ಕಾರ್ಯವ್ಯಾಪ್ತಿಗಳ ಬಗ್ಗೆ ಮಾಹಿತಿ ನೀಡಲು ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಠಾಣೆಗಳಲ್ಲೂ ಸ್ಟೂಡೆಂಟ್ ಲರ್ನಿಂಗ್ ಪ್ರೋಗ್ರಾಂ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಮಾಳಮಾರುತಿ ಠಾಣೆಯಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಅವರು, ಜಿಲ್ಲಾ ಪೊಲೀಸ್ ಹಾಗೂ ನಗರ ಕಮಿಷನರ್ ಪೊಲೀಸರ ನಡುವೆ ಇರುವ ವ್ಯತ್ಯಾಸ, ಠಾಣೆಯಲ್ಲಿ ಪೊಲೀಸರ ಪ್ರಾಥಮಿಕ ಕೆಲಸ ಏನು? ದೂರು ಬಂದ ಮೇಲೆ ಪೊಲೀಸರು ಮಾಡಬೇಕಾದ ಕೆಲಸ, ಏನೆಲ್ಲಾ ಮಾಡುತ್ತಾರೆ ಎಂಬ ಬಗ್ಗೆ ತಿಳಿಸಿದರು.
ಎಲ್ಲ ಪೊಲೀಸ್ ಠಾಣೆಗಳಲ್ಲೂ ಜನಸ್ನೇಹಿ ವಾತಾವರಣ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೇವೆ. ಪೊಲೀಸ್ ಠಾಣೆಗೆ ಜನರು ಈ ಹಿಂದೆ ಬರಲು ಹೆದರುತ್ತಿದ್ದರು. ಆದರೆ, ಈಗ ಜನ ಭಯ ಇಲ್ಲದೇ ಬರುತ್ತಿದ್ದಾರೆ. ಹೀಗಾಗಿ ಪೊಲೀಸರು ಅಧಿಕಾರಿಗಳು, ಪೊಲೀಸ್ ಠಾಣೆಗಳ ಕಾರ್ಯವ್ಯಾಪ್ತಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಪೊಲೀಸ್ ಕಮಿಷನರ್ ಎಸ್.ಎನ್ ಸಿದ್ದರಾಮಪ್ಪ ತಿಳಿಸಿದರು.ಈ ವೇಳೆ ಡಿಸಿಪಿ ಪಿ.ವ್ಹಿ.ಸ್ನೇಹಾ, ಎಸಿಪಿ ಸದಾಶಿವ ಕಟ್ಟಿಮನಿ, ಎಸಿಪಿ ಸೋಮೇಶಗೌಡ, ಪೊಲೀಸ್ ಇನಸ್ಪಕ್ಟರ್ ಜೆ.ಎಂ.ಕಾಲಿಮಿರ್ಚಿ ಸೇರಿ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.