ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ವಂಚಿಸಿರುವ ಈ ಪ್ರಕರಣದಲ್ಲಿ ಕಾಲೇಜು ಆಡಳಿತ, ಬಿಸಿಐ ಹಾಗೂ ಹುಬ್ಬಳ್ಳಿ ವಿಶ್ವವಿದ್ಯಾಲಯದೊಳಗಿನ ಅವ್ಯವಹಾರಗಳ ಕುರಿತು ತೀವ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಜನವರಿ ೨೦ರಿಂದ ನಾಲ್ಕನೇ ವರ್ಷದ ೭ನೇ ಸೆಮಿಸ್ಟರ್‌ ಪರೀಕ್ಷೆಗಳು ಆರಂಭವಾಗಲಿದ್ದು, ಮುಂದಿನ ಪರೀಕ್ಷೆಗಳಿಗೂ ಅವಕಾಶ ನೀಡದಿದ್ದರೆ ೨೩ ವಿದ್ಯಾರ್ಥಿಗಳ ಒಂದು ಪೂರ್ಣ ಶೈಕ್ಷಣಿಕ ವರ್ಷವೇ ವ್ಯರ್ಥವಾಗಲಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಆದ್ದರಿಂದ, ಕಾಲೇಜು ಆಡಳಿತ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಹುಬ್ಬಳ್ಳಿ ವಿಶ್ವವಿದ್ಯಾಲಯದಲ್ಲಾಗಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ, ತಕ್ಷಣವೇ ನಮಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ಜಿಲ್ಲಾಡಳಿತವನ್ನು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನಪರೀಕ್ಷಾ ಪ್ರವೇಶ ಪತ್ರ ನೀಡದೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವುದನ್ನು ಖಂಡಿಸಿ ಹಾಗೂ ತಕ್ಷಣ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಹಾಸನ ಸರ್ಕಾರಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಾನೂನು ಕಾಲೇಜು ವಿದ್ಯಾರ್ಥಿ ಕಾಂತರಾಜ್ ಮಾತನಾಡಿ, ಸಾಲಗಾಮೆ ರಸ್ತೆಯಲ್ಲಿರುವ ಸರ್ಕಾರಿ ಕಾನೂನು ಕಾಲೇಜಿನ ನಾಲ್ಕನೇ ವರ್ಷದ ಸೆಮಿಸ್ಟರ್‌ ವಿದ್ಯಾರ್ಥಿಗಳಾದ ನಾವು ಪರೀಕ್ಷೆ ಬರೆಯಲು ಸಿದ್ಧರಾಗಿದ್ದರೂ, ಕಾಲೇಜು ಆಡಳಿತ ಮಂಡಳಿ ನಮಗೆ ಪ್ರವೇಶಪತ್ರ ನೀಡದೇ ತಡೆಹಿಡಿದಿದೆ ಎಂದು ಆರೋಪಿಸಿದರು. ನಾವು ಕಾಲೇಜು ಪ್ರವೇಶ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ್ದೇವೆ. ಆದರೂ ಪ್ರವೇಶ ಪತ್ರ ನೀಡದೇ ನಮ್ಮ ಶೈಕ್ಷಣಿಕ ಭವಿಷ್ಯವನ್ನು ಅಪಾಯಕ್ಕೆ ತಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನವರಿ ೧೯ರಂದು ಕೆಲವು ವಿದ್ಯಾರ್ಥಿಗಳಿಗೆ ಸಂವಿಧಾನ-೧ ವಿಷಯದ ಪರೀಕ್ಷೆ ಇದ್ದು, ಕಾಲೇಜು ಆಡಳಿತ, ಬಾರ್‌ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಹಾಗೂ ಹುಬ್ಬಳ್ಳಿ ವಿಶ್ವವಿದ್ಯಾಲಯದ ಬೇಜಾವಾಬ್ದಾರಿತನದಿಂದ ಪರೀಕ್ಷಾ ಪ್ರವೇಶ ಪತ್ರ ನೀಡದೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಿಲ್ಲ ಎಂದು ದೂರಿದರು.ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ವಂಚಿಸಿರುವ ಈ ಪ್ರಕರಣದಲ್ಲಿ ಕಾಲೇಜು ಆಡಳಿತ, ಬಿಸಿಐ ಹಾಗೂ ಹುಬ್ಬಳ್ಳಿ ವಿಶ್ವವಿದ್ಯಾಲಯದೊಳಗಿನ ಅವ್ಯವಹಾರಗಳ ಕುರಿತು ತೀವ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಜನವರಿ ೨೦ರಿಂದ ನಾಲ್ಕನೇ ವರ್ಷದ ೭ನೇ ಸೆಮಿಸ್ಟರ್‌ ಪರೀಕ್ಷೆಗಳು ಆರಂಭವಾಗಲಿದ್ದು, ಮುಂದಿನ ಪರೀಕ್ಷೆಗಳಿಗೂ ಅವಕಾಶ ನೀಡದಿದ್ದರೆ ೨೩ ವಿದ್ಯಾರ್ಥಿಗಳ ಒಂದು ಪೂರ್ಣ ಶೈಕ್ಷಣಿಕ ವರ್ಷವೇ ವ್ಯರ್ಥವಾಗಲಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಆದ್ದರಿಂದ, ಕಾಲೇಜು ಆಡಳಿತ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಹುಬ್ಬಳ್ಳಿ ವಿಶ್ವವಿದ್ಯಾಲಯದಲ್ಲಾಗಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ, ತಕ್ಷಣವೇ ನಮಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ಜಿಲ್ಲಾಡಳಿತವನ್ನು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ನಿಖಿಲ್ ಭವಿಷ್ಯ, ವರ್ಶಿನಿ, ಅಭಿಷೇಕ್, ಚಂದನ್, ಪೂರ್ಣೇಶ್, ಅರ್ಫ್ಯಾನ್, ಸುಚಿತ್ರ, ರಶ್ಮಿ, ಐಶ್ವರ್ಯ, ಪ್ರಿಯದರ್ಶಿನಿ, ಅಜಯ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.