ಆನಂದಪುರಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ದೆಹಲಿಗೆ ಹೋಗುವ ಭಾಗ್ಯ ದೊರೆತಿದೆ ಎಂದು ಪ್ರಾಂಶುಪಾಲ ರವಿಶಂಕರ್ ತಿಳಿಸಿದರು.
ಮೇ ತಿಂಗಳ 16 ರಂದು ಬೆಂಗಳೂರಿನಿಂದ ವಿಮಾನದಲ್ಲಿ ದೆಹಲಿಗೆ ।3 ದಿನಗಳ ಕಾಲ ವಿವಿಧ ಸ್ಥಳ ಗಳನ್ನು ವೀಕ್ಷಣೆ
--- ಸಿ ಓ ಪ್ರಕಾಶ್ ರುಕ್ಮಯ್ಯ ಶಾಲೆ ಸಮಗ್ರ ಅಭಿವೃದ್ಧಿಗೆ ಶ್ರಮ
- ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ- ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ಆನಂದಪುರಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ದೆಹಲಿಗೆ ಹೋಗುವ ಭಾಗ್ಯ ದೊರೆತಿದೆ ಎಂದು ಪ್ರಾಂಶುಪಾಲ ರವಿಶಂಕರ್ ತಿಳಿಸಿದರು.
ಗುರುವಾರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಹಾಗೂ 8 ಮತ್ತು 9ನೇ ತರಗತಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿ, ಸರ್ಕಾರಿ ಶಾಲೆ ಎಂದರೆ ಮೂಗು ಮುರಿ ಯುತ್ತಿರುವ ಸಮಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ವಿಮಾನದಲ್ಲಿ ದೆಹಲಿಗೆ ಹೋಗುವ ಭಾಗ್ಯ ದೊರೆತಿರುವುದು ಸಂತಸ ತಂದಿದೆ ಎಂದರು. ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ವಿದ್ಯಾರ್ಥಿ ಬೆಂಗಳೂರು ಪ್ರತಿಷ್ಠಿತ ರೇಕಿಯೋ ಸಂಸ್ಥೆಯ ಸಿ ಓ ಪ್ರಕಾಶ್ ರುಕ್ಮಯ್ಯ ಕಳೆದ 2 ವರ್ಷಗಳಿಂದ ಕರ್ನಾಟಕ ಪಬ್ಲಿಕ್ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಮಾನದ ಮೂಲಕ ದೆಹಲಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದು ಅದರಂತೆ ದೆಹಲಿ ಭೇಟಿಗೆ ಆಯ್ಕೆಯಾದ ಮಕ್ಕಳನ್ನು ಅಭಿನಂದಿಸುತ್ತಿರುವುದಾಗಿ ಹೇಳಿದರು. ಈ ಬಾರಿ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲೂ ಉತ್ತಮ ಫಲಿತಾಂಶ ಬಂದಿದೆ. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಚಂದನ, ಪ್ರೀತಿ, ದೀಪಿಕಾ, ಆಯುಷ್, ಕೌಶಿಕ್, ಹರ್ಷಿತ ಇವರೊಂದಿಗೆ ಶಾಲಾ ಶಿಕ್ಷಕ, ಶಿಕ್ಷಕಿಯರು ಮೇ ತಿಂಗಳ 16 ರಂದು ಬೆಂಗಳೂರಿನಿಂದ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ 3 ದಿನಗಳ ಕಾಲ ವಿವಿಧ ಸ್ಥಳ ಗಳನ್ನು ವೀಕ್ಷಣೆಗೆ ಅವಕಾಶ ನೀಡಿದ್ದು ನಂತರ ಹಿಂತಿರುಗಲಿದ್ದಾರೆ. ಪ್ರಪ್ರಥಮವಾಗಿ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಮಾಡುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿದ್ದೇವೆ ಎಂದರು. ಉಪ ಪ್ರಾಂಶುಪಾಲ ಈಶ್ವರಪ್ಪ ಮಾತನಾಡಿ, ಈ ಬಾರಿ ಕರ್ನಾಟಕ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ ಬಂದಿದೆ. ವಿದ್ಯಾರ್ಥಿ ಗಳು ಕಲಿಕೆಗೆ ಪೂರಕವಾಗುವ ಎಲ್ಲಾ ಸೌಲಭ್ಯಗಳು ಈ ಶಾಲೆಯಲ್ಲಿ ದೊರೆಯುತ್ತಿವೆ. ವಿದ್ಯಾರ್ಥಿಗಳಿಗೆ ಪ್ರಕಾಶ್ ರುಕ್ಮಯ್ಯ ಮಾರ್ಗದರ್ಶನ, ಶಿಕ್ಷಕರ, ಉಪನ್ಯಾಸಕರ ಶ್ರಮದಿಂದ ಶಾಲಾ ಅಭಿವೃದ್ಧಿ ಸಮಿತಿ ಸಹಕಾರದಿಂದ ಉತ್ತಮ ಫಲಿತಾಂಶ ಬಂದಿದ್ದು ಅವರಿಗೆ ಅಭಿನಂದಿಸುತ್ತೇನೆ. ಮುಂದಿನ ವರ್ಷ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೂ ವಿಮಾನದಲ್ಲಿ ದೆಹಲಿಗೆ ಹೋಗುವ ಅವಕಾಶ ದೊರಕುವ ನಿರೀಕ್ಷೆ ಇದೆ ಎಂದರು.ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಎನ್. ಉಮೇಶ್ ಮಾತನಾಡಿ, ಬಿ. ಡಿ ರವಿಕುಮಾರ್, ಜಗನ್ನಾಥ್, ಚಂದ್ರಶೇಖರ್, ದೇವರಾಜ್, ಜಗದೀಶ್ ಹಾಗೂ ವಿದ್ಯಾರ್ಥಿಗಳುಮತ್ತು ಪೋಷಕರು ಉಪಸ್ಥಿತರಿದ್ದರು.-
ಫೋಟೋ 30 ಎ, ಎನ್, ಪಿ 1 ಆನಂದಪುರ ಕರ್ನಾಟಕ ಪಬ್ಲಿಕ್ ಶಾಲಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ವಿಮಾನದಲ್ಲಿ ದೆಹಲಿಗೆ ತೆರಳಲ್ಲಿದ್ದ ಇವರಿಗೆ ಶಾಲಾವತಿಯಿಂದ ಅಭಿನಂದಿಸಲಾಯಿತು.