ವಿದ್ಯಾರ್ಥಿಗಳು ಹಿರಿಯರ ಆದರ್ಶ ಪಾಲಿಸಿ

| Published : Aug 18 2024, 01:53 AM IST

ಸಾರಾಂಶ

ವೇದಿಕೆಯ ಮಹಿಳಾ ಸದಸ್ಯನೀಯರು ಸರ್ಕಾರಿ ಶಾಲೆಗಳಿಗೆ ಆಗಮಿಸಿ ಮಕ್ಕಳಿಗೆ ಸಿಹಿ ಭೋಜನದೊಂದಿಗೆ ಕಲಿಕಾ ಸಾಮಗ್ರಿ ವಿತರಿಸಿ ಜ್ಞಾನ ಬಿತ್ತುವ ವಚನ ಸಾಹಿತ್ಯ ತಿಳಿಸಿ ಹೇಳುವ ಕಾರ್ಯ ಪ್ರತಿ ವರ್ಷ ನಡೆಯುತ್ತಿರುವ ಅಭಿನಂದನೀಯ

ಗದಗ: ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ಹಿರಿಯರ ಅನುಭವಿಕರ ನುಡಿ, ಶರಣರ ವಚನ ಓದಿ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ನಡೆಯಬೇಕೆಂದು ಚಿಂತಕಿ ಸುಶೀಲಾ ಕೋಟಿ ಹೇಳಿದರು.

ಅವರು ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. 10ರಲ್ಲಿ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ನಡೆದ ಅಮೃತ ಭೋಜನ ಜ್ಞಾನಸಿಂಚನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿ, ಓದುವ ಹವ್ಯಾಸ ರೂಢಿಸಿಕೊಳ್ಳಿ. ವಚನಗಳಲ್ಲಿಯ ತಿಳಿವಳಿಕೆ ಓದಿ,ಅರ್ಥೈಯಿಸಿಕೊಂಡು ಉತ್ತಮ ಮಕ್ಕಳಾಗಬೇಕು ಎಂದರು.

ಬಿಆರ್‌ಪಿ ಪ್ರಕಾಶ ಮಂಗಳೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕದಳಿಶ್ರೀ ವೇದಿಕೆಯಿಂದ ಸರ್ಕಾರಿ ಶಾಲೆಗಳಲ್ಲಿ ಶ್ರಾವಣ ಮಾಸದ್ಯಂತ ಹಮ್ಮಿಕೊಳ್ಳುವ ಅಮೃತಭೋಜನ ಜ್ಞಾನಸಿಂಚನ ಕಾರ್ಯಕ್ರಮವು ವಿಶಿಷ್ಠವಾಗಿದ್ದು, ವೇದಿಕೆಯ ಮಹಿಳಾ ಸದಸ್ಯನೀಯರು ಸರ್ಕಾರಿ ಶಾಲೆಗಳಿಗೆ ಆಗಮಿಸಿ ಮಕ್ಕಳಿಗೆ ಸಿಹಿ ಭೋಜನದೊಂದಿಗೆ ಕಲಿಕಾ ಸಾಮಗ್ರಿ ವಿತರಿಸಿ ಜ್ಞಾನ ಬಿತ್ತುವ ವಚನ ಸಾಹಿತ್ಯ ತಿಳಿಸಿ ಹೇಳುವ ಕಾರ್ಯ ಪ್ರತಿ ವರ್ಷ ನಡೆಯುತ್ತಿರುವ ಅಭಿನಂದನೀಯ ಎಂದರು.

ಈ ವೇಳೆ ಶರಣ ಸಂಸ್ಕೃತಿಯ ಚಿಂತಕಿ ಸುಮಾ ಪಾಟೀಲ, ಸಾಗರಿಕಾ ಅಕ್ಕಿ, ಹೇಮಾ ಪೊಂಗಾಲಿಯಾ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮನ್ವಯ ಅಧಿಕಾರಿ ಎಸ್.ಪಿ. ಪ್ರಭಯ್ಯನಮಠ ಹಾಗೂ ಶರಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ.ರಾಧಿಕಾ ಕುಲಕರ್ಣಿ ಹಾಗೂ ದಾನಿಗಳು ಕೊಡ ಮಾಡಿದ ಕಲಿಕಾ ಸಾಮಗ್ರಿ ಮಕ್ಕಳಿಗೆ ವಿತರಿಸಲಾಯಿತು.

ಎಲ್.ಎಂ. ಗುಜ್ಜಾಯಿ, ಎ.ಎಸ್. ಸಿಂಗಟಾಲಕೇರಿ, ಎಸ್.ಎಸ್. ಗುತ್ತಿ, ಎನ್.ಎಸ್. ಕೋಟ್ನೇಕಲ್ಲ, ಡಿ.ಡಿ. ಹಳ್ಯಾಳ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಜಿ.ಎಸ್. ಜತ್ತಿ ಹಾಗೂ ಎಸ್.ಆರ್. ಕುಲಕರ್ಣಿ ಪ್ರಾರ್ಥಿಸಿದರು.ಸಂಪನ್ಮೂಲ ವ್ಯಕ್ತಿ ರವಿ ಹೆಬ್ಬಳಿ ಸ್ವಾಗತಿಸಿದರು. ವಿ.ಟಿ. ದಾಸರಿ ಪರಿಚಯಿಸಿದರು. ಕೆ.ಎಸ್. ಬೇಲೇರಿ ನಿರೂಪಿಸಿದರು. ಮುಖ್ಯೋಪಾಧ್ಯಾಯ ಎಫ್.ಎ. ನಮಾಜಿ ವಂದಿಸಿದರು.