ಸಾರಾಂಶ
ಹಾನಗಲ್ಲ: ವಿದ್ಯಾರ್ಥಿಗಳು ನಿರಂತರ ಪರಿಶ್ರಮ, ಪ್ರಾಮಾಣಿಕತೆ ಹಾಗೂ ಸಮಯ ಪ್ರಜ್ಞೆಯನ್ನು ಅರಿತು ಅಭ್ಯಸಿಸಿದಾಗ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಹೈಕೋರ್ಟ್ ವಕೀಲ ಸಂದೀಪ್ ಪಾಟೀಲ ತಿಳಿಸಿದರು.
ಹಾನಗಲ್ಲಿನ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ 2025-26ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಹಾಗೂ ವಿವಿಧ ಸಹ-ಪಠ್ಯ ಚಟುವಟಿಕೆ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ, ಒಕ್ಕೂಟದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.ಯಶಸ್ವಿ ವ್ಯಕ್ತಿಯ ಮುಂದೆ ಅವನ ಯಶಸ್ಸು ಮಾತ್ರ ಪ್ರಪಂಚಕ್ಕೆ ಕಂಡರೆ ಅವನ ಹಿಂಬದಿಯಲ್ಲಿ ಅನೇಕ ಸೋಲು-ನೋವುಗಳ ಅನುಭವದ ಕಂತೆಯೇ ಇದ್ದು, ಆ ಸೋಲಿನ ಅನುಭವಗಳೇ ಅವನ ಯಶಸ್ಸಿಗೆ ಕಾರಣವಾಗಿರುತ್ತವೆ. ವಿದ್ಯಾರ್ಥಿ ದಿಸೆಯಲ್ಲಿ ಅನೇಕ ನೋವು ಕಷ್ಟಗಳು ಇರುತ್ತವೆ. ಅದಕ್ಕಾಗಿ ನಮ್ಮ ಜೀವನದಲ್ಲಿ ಲಕ್, ಚಾಲೆಂಜ್ ನಂಬಿಕೊಳ್ಳಬಾರದು. ಅವಕಾಶಗಳನ್ನು ಯಾರೂ ನಮ್ಮ ಮುಂದೆ ತರುವುದಿಲ್ಲ. ಆದರೆ, ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಇದಕ್ಕೆ ನಾವು ಕಾಲೇಜಿನ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅನೇಕ ಕೌಶಲ್ಯಗಳ ಖಣಿಯಾಗಬೇಕು. ಈ ಮೂಲಕ ಜೀವನದ ಯಶಸ್ಸಿನ ಮೆಟ್ಟಿಲೇರಬೇಕು ಎಂದರು.
ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ವಿಶೇಷಾಧಿಕಾರಿ ವೆಂಕಟೇಶ ರಾಠೋಡ ಮಾತನಾಡಿ, ಮಹಾನ್ ವ್ಯಕ್ತಿಗಳ ಆಶಯಗಳ ಸಹಕಾರದಿಂದ ಶ್ರೀ ಗುರು ಕುಮಾರಶಿವಯೋಗಿಗಳ ಹೆಸರಿನಿಂದ ಕಟ್ಟಿದ ಈ ಕಾಲೇಜು ಅನೇಕ ಏಳು-ಬೀಳುಗಳ ಮಧ್ಯೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ ಮಾಡಿ ಉನ್ನತ ಮಟ್ಟ ತಲುಪಿದೆ. ಇಂಥ ಪವಿತ್ರ ಶಿಕ್ಷಣ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳು ಶಿಸ್ತಿನಿಂದ, ಮೊಬೈಲ್-ಅಹಂಕಾರ ತೊರೆದು ಹಿರಿಯರಿಗೆ ಗೌರವ ಕೊಡುವ ಮೂಲಕ ಪಠ್ಯಗಳ ಜೊತೆಗೆ ಸಹಪಠ್ಯ ಚಟುವಟಿಕೆ ಮೈಗೂಡಿಸಿಕೊಂಡು ನಿಮ್ಮ ಜೀವನ ಕಟ್ಟಿಕೊಳ್ಳಿ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಚ್. ಹೊಳಿಯಣ್ಣನವರ ಅಧ್ಯಕ್ಷೀಯ ಮಾತುಗಳನ್ನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಸತತ ಪ್ರಯತ್ನ ಪಡುವುದರಿಂದ ಜೀವನದ ಮಹತ್ವ ಅರ್ಥವಾಗುತ್ತದೆ ಎಂದರು.
ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಪ್ರಕಾಶ ಹೊಳೇರ ಆಶಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಮನೋಹರ ಬಳಿಗಾರ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿಗಳಾದ ರೂಪಾ ಚನ್ನಗೌಡ್ರ ಹಾಗೂ ಮಾನ್ಯಾ ಶೇಠ್ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಶ್ವೇತಾ ಗಡಿಯಣ್ಣನವರ, ನಿಸ್ಸಿಮೇಶ, ಪ್ರೀತಿ ಕುಂಠಿ, ಸುಪ್ರಿಯಾ ಕಾಲೇಜಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ರೂಪಾ ಚನ್ನಗೌಡ್ರ ಪ್ರಾರ್ಥಿಸಿದರು. ಮಹಮ್ಮದ ಸಾಧಿಕ್ ಬಡಗಿ ಸ್ವಾಗತಿಸಿದರು. ಬೋವಿ ಹೊನ್ನಪ್ಪ ವಂದಿಸಿದರು. ಸುಚಿತ್ರಾ ಅಂಬಿಗ ಕಾರ್ಯಕ್ರಮ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))