ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿರಾಜಪೇಟೆಯ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ ಹಾಗೂ ಪೋಷಕ ವೃಂದದಿಂದ 2024- 25 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ವಿರಾಜಪೇಟೆಯ ಮೀನು ಪೇಟೆಯ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದ ಕಲಾಮಂಟಪದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷರಾದ ಸುಮೇಶ್ , ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಬೇಕೆಂದು ಬಯಸುತ್ತಾರೆ. ದೇಶಕ್ಕಾಗಿ ಕೊಡಗಿನವರ ಸೇವೆ ಸೈನ್ಯದಲ್ಲಿಯೂ ಹಾಗೂ ಕ್ರೀಡೆಯಲ್ಲಿಯೂ ಇನ್ನಿತರ ಸಾಮಾಜಿಕ ಕ್ಷೇತ್ರದಲ್ಲಿಯೂ ಅಪಾರವಾಗಿದೆ. ಆದರಿಂದ ಇಂದು ನಾವು ಎಲ್ಲೇ ಹೋದರು ಕೊಡಗಿನವರು ಎಂದರೆ ವಿಶೇಷ ಗೌರವವನ್ನು ನೀಡುತ್ತಾರೆ. ಆದರಿಂದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸದೊಂದಿಗೆ ಈ ದೇಶ ಹಾಗೂ ನಮ್ಮ ಜಿಲ್ಲೆಗೆ ಹೆಸರು ತರುವಂತಹ ಸಾಧನೆಯನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಬಿಂಧು ಮಾತಾನಾಡಿ, ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಾಧನೆ ಮಾಡಬೇಕಾದರೆ ಮನೆಯಲ್ಲಿ ಪಾಲಕರ ಪ್ರೋತ್ಸಾಹ ಬಹಳ ಮಹತರವಾಗಿದ್ದು ನಾವು ಸಹ ಶಿಕ್ಷಕರಾಗಿದ್ದು ನಮ್ಮ ಶಾಲೆಯ ಮಕ್ಕಳನ್ನು ನಮ್ಮ ಮಕ್ಕಳೆಂದೆ ತಿಳಿದು ಪಾಠವನ್ನು ಮಾಡುತ್ತೇವೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ಅಂಕಗಳನ್ನು ಪಡೆದು ಉತ್ತೀರ್ಣರಾಗಲಿ ಎಂದು ಬಯಸುತ್ತೇವೆ ಎಂದು ಹೇಳಿದರು.ಈ ಸಂದರ್ಭ ಅಂತಾರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಅಚ್ಚಕಾಳಿರ ಪಳಂಗಪ್ಪ, ಕಾವೇರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸುಧೇಶ್, ಮತ್ತು ಕಾರ್ಯದರ್ಶಿ ವಿನೋದ್, ಮಹಿಳಾ ಮಲಯಾಳಿ ಅಸೋಸಿಯೇಷನ್ ಅಧ್ಯಕ್ಷರಾದ ಶಿಭಾ ಪೃಥ್ವಿನಾಥ್, ಹಾಗೂ ಸಂತಾನೋ ಶಾಲೆಯ ಶಿಕ್ಷಕರಾದ ಕವಿತಾ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಉಪಾಧ್ಯಕ್ಷರಾದ ಸಜೀವನ್, ಗೌರವಾಧ್ಯಕ್ಷರಾದ ಪದ್ಮನಾಭ, ಚೋಕಂಡ ಸಂಜು ಉಪಸ್ಥಿತರಿದ್ದರು.