ಸಾರಾಂಶ
ಚಿಕ್ಕಮಗಳೂರು, ವಿದ್ಯಾರ್ಥಿನಿಯರು ಪದವಿ ಮುಗಿದ ತಕ್ಷಣ ಮನೆಯಲ್ಲಿ ಕುಳಿತುಕೊಂಡರೆ ಜವಾಬ್ದಾರಿ ಮುಗಿಯುವುದಿಲ್ಲ, ಇಲ್ಲಿಂದ ನಿಮ್ಮ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನೆ ರೇಂಜರ್ಸ್-ವೈಆರ್ ಸಿ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿನಿಯರು ಪದವಿ ಮುಗಿದ ತಕ್ಷಣ ಮನೆಯಲ್ಲಿ ಕುಳಿತುಕೊಂಡರೆ ಜವಾಬ್ದಾರಿ ಮುಗಿಯುವುದಿಲ್ಲ, ಇಲ್ಲಿಂದ ನಿಮ್ಮ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ನಗರದ ಕುವೆಂಪು ಕಲಾಮಂದಿರದಲ್ಲಿ ಶ್ರೀ ತರಳಬಾಳು ಜಗದ್ಗುರು ಮಹಿಳಾ ಪ್ರಥಮ ದರ್ಜೆ ಕಾಲೇಜು ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ರೇಂಜರ್ಸ್ ಮತ್ತು ವೈ.ಆರ್.ಸಿ. ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅತಿ ಹೆಚ್ಚು ಅಂಕ ಪಡೆದಾಗ ನಿಮ್ಮ ಭವಿಷ್ಯ ಉಜ್ವಲ ವಾಗುತ್ತದೆ. ಒಳ್ಳೆ ಬಟ್ಟೆ ಹಾಕಿದ ತಕ್ಷಣ ಒಳ್ಳೆಯವರಾಗುವುದಿಲ್ಲ ಒಳ್ಳೆಯ ಮನಸ್ಸು, ಸಂಸ್ಕಾರ ಇದ್ದಾಗ ಮಾತ್ರ ಸುಸಂಸ್ಕೃತ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು.ಬೆಂಕಿ ಇಲ್ಲದೆ ದೀಪ ಹೇಗೆ ಉರಿಯುವುದಿಲ್ಲವೋ ಹಾಗೆಯೇ ಸಮಾಜದಲ್ಲಿ ಆಧ್ಯಾತ್ಮವಿಲ್ಲದೆ ವ್ಯಕ್ತಿ ಬದುಕಲಾರ. ಮನುಷ್ಯನಿಗೆ ಜೀವನದಲ್ಲಿ ಆಧ್ಯಾತ್ಮ ಅಷ್ಟೇ ಮುಖ್ಯ.ಎಂದು ತಿಳಿಸಿದರು.
ಎಸ್‌ಟಿಜೆ ಮಹಿಳಾ ಪದವಿ ಕಾಲೇಜು ಜಿಲ್ಲೆಯಲ್ಲಿಯೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿನಿಯರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ರೂಪಿಸುವ ಮಹತ್ಕಾರ್ಯದಲ್ಲಿ ತೊಡಗಿದೆ ಎಂದು ಶ್ಲಾಘಿಸಿದರು.ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯ ನೀಡಿರುವುದರಿಂದ ಕಾಲೇಜಿಗೆ ಬರುವುದಷ್ಟೇ ಅಲ್ಲ. ರಾಜ್ಯದ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಹೋಗಲು ಸಹಕಾರಿಯಾಗಿದೆ ಎಂದರು.ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಗೆ 2000 ರು.ಗಳನ್ನು ಸರ್ಕಾರ ನೀಡುತ್ತಿದೆ. ಪ್ರತಿಯೊಬ್ಬರಿಗೂ ದೇವರು ಒಂದು ಅವಕಾಶ ಕೊಟ್ಟಿರುತ್ತಾನೆ ವಿದ್ಯಾರ್ಥಿನಿಯರು ಗುರಿಯಿಟ್ಟು ನಡೆದರೆ ಸಾಧನೆಗೆ ಅವಕಾಶ ದೊರೆಯುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನುಎಸ್‌ಟಿಜೆ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೋ.ಜೆ.ಕೆ. ಭಾರತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷ ವಿನಾಯಕ. ಎಸ್ ಸಿಂದಿಗೆರೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಕುಮಾರ್, ಡಾ.ಚಂದ್ರಶೇಖರ್, ಸುರೇಂದ್ರ ನಾಯಕ್, ಚಂದ್ರಶೇಖರ್, ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯ ಜಿ.ವಿ ವಿರೂಪಾಕ್ಷ ಭಾಗವಹಿಸಿದ್ದರು.11 ಕೆಸಿಕೆಎಂ 5
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಎಸ್‌ಟಿಜೆ ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಪ್ರಾಂಶುಪಾಲರಾದ ಪ್ರೋ.ಜೆ.ಕೆ. ಭಾರತಿ, ವಿನಾಯಕ್ ಸಿಂದಿಗೆರೆ, ಸಂತೋಷ್‌ಕುಮಾರ್, ವಿರೂಪಾಕ್ಷ ಇದ್ದರು.