ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ದಿಕ್ಕುತಪ್ಪಬಾರದು

| Published : Oct 29 2025, 01:15 AM IST

ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ದಿಕ್ಕುತಪ್ಪಬಾರದು
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಜನತೆ ಭವ್ಯ ಭಾರತದ ಉಜ್ವಲ ಪ್ರಜೆಗಳಾದ್ದರಿಂದ ಅವರು ಎಂದಿಗೂ ದಿಕ್ಕುತಪ್ಪಿ ನಡೆಯಬಾರದು ಎಂಬ ಉದ್ದೇಶ ಹಾಗೂ ಭವಿಷ್ಯದ ದೃಷ್ಠಿಯಿಂದ ನಶಾಮುಕ್ತ ಭಾರತ ಅಭಿಯಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಹಿರಿಯರ ಮಾರ್ಗದರ್ಶನವನ್ನು ಅರ್ಥೈಸಿಕೊಂಡು, ಯಾವುದೇ ಚಟಕ್ಕೂ ಬಲಿಯಾಗದೇ ಯುವಜನತೆ ಮುನ್ನಡೆಯಬೇಕಿದೆ ಎಂದು ಪ್ರಾಂಶುಪಾಲ ದೇವರಾಜ್ ಸಲಹೆ ನೀಡಿದರು. ವಿದ್ಯಾರ್ಥಿನಿಯರು ಈ ರೀತಿಯ ಯಾವುದೇ ಕಾರ್ಯಗಳತ್ತ ಸಾಗುವುದಿಲ್ಲ ಮತ್ತು ಇತರರು ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಬೇಡ ಎಂದು ತಿಳಿ ಹೇಳುವ ಮನಸ್ಥಿತಿಯನ್ನು ನಿರ್ಮಿಸಿಕೊಳ್ಳಬೇಕು ಎಂದರು. ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಅರಿವಿನ ಘೋಷಣೆಗಳನ್ನು ಕೂಗುತ್ತ ಪ್ರಮುಖ ರಸ್ತೆಗಳಲ್ಲಿ ಸಾಗಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಯುವ ಜನತೆ ಭವ್ಯ ಭಾರತದ ಉಜ್ವಲ ಪ್ರಜೆಗಳಾದ್ದರಿಂದ ಅವರು ಎಂದಿಗೂ ದಿಕ್ಕುತಪ್ಪಿ ನಡೆಯಬಾರದು ಎಂಬ ಉದ್ದೇಶ ಹಾಗೂ ಭವಿಷ್ಯದ ದೃಷ್ಠಿಯಿಂದ ನಶಾಮುಕ್ತ ಭಾರತ ಅಭಿಯಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಹಿರಿಯರ ಮಾರ್ಗದರ್ಶನವನ್ನು ಅರ್ಥೈಸಿಕೊಂಡು, ಯಾವುದೇ ಚಟಕ್ಕೂ ಬಲಿಯಾಗದೇ ಯುವಜನತೆ ಮುನ್ನಡೆಯಬೇಕಿದೆ ಎಂದು ಪ್ರಾಂಶುಪಾಲ ದೇವರಾಜ್ ಸಲಹೆ ನೀಡಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಪ್ರಯುಕ್ತ ಆಯೋಜನೆ ಮಾಡಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಮತ್ತು ಅರಿವಿನ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿನಿಯರು ಈ ರೀತಿಯ ಯಾವುದೇ ಕಾರ್ಯಗಳತ್ತ ಸಾಗುವುದಿಲ್ಲ ಮತ್ತು ಇತರರು ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಬೇಡ ಎಂದು ತಿಳಿ ಹೇಳುವ ಮನಸ್ಥಿತಿಯನ್ನು ನಿರ್ಮಿಸಿಕೊಳ್ಳಬೇಕು ಎಂದರು. ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಅರಿವಿನ ಘೋಷಣೆಗಳನ್ನು ಕೂಗುತ್ತ ಪ್ರಮುಖ ರಸ್ತೆಗಳಲ್ಲಿ ಸಾಗಿದರು.

ಉಪನ್ಯಾಸಕರಾದ ಸುದರ್ಶನ್, ನಿರ್ಮಲಾ, ಪವಿತ್ರ, ಮಮತಾ, ಅವಿನಾಶ್, ಶ್ರೀನಿವಾಸ್, ವೀಣಾ, ಕಾಂತರಾಜು, ರಾಘವೇಂದ್ರ, ಶಾಂತರಾಜು, ವಾಣಿ, ಶ್ರೀಲಕ್ಷ್ಮಿ, ನಟರಾಜ್ ಹಾಗೂ ಅಪೂರ್ವ ಇದ್ದರು.