ಸಾರಾಂಶ
ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ, ಪುಸ್ತಕ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆವಿದ್ಯಾರ್ಥಿಗಳಾದ ನೀವೆಲ್ಲರೂ ನಿರಂತರ ಪರಿಶ್ರಮದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಸಲಹೆ ನೀಡಿದರು. ಪಟ್ಟಣದ ಎಸ್.ಜೆ.ಎಂ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಪ್ಲೇಸ್‌ಮೆಂಟ್ ಸೆಲ್, ಕನ್ನಡ ಸಂಸ್ಕೃತಿಕ ವೇದಿಕೆ,ಎನ್.ಎಸ್.ಎಸ್ ಹಾಗೂ ಕನ್ನಡ ಸೇನೆ-ಕರ್ನಾಟಕ ತರೀಕೆರೆ ನಗರ ಘಟಕದ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾವಿದ್ಯಾಲಯಕ್ಕೆ ಭವ್ಯ ಪರಂಪರೆ ಇದೆ. ಸ್ವತಃ ನಾನು ಇದೇ ಮಹಾವಿದ್ಯಾಲಯದಲ್ಲಿ ಪದವಿ ಪಡೆದು ಇಂದು ಸಮಾಜದಲ್ಲಿ ಉತ್ತಮ ಸ್ಥಾನ ಪಡೆದಿದ್ದೇನೆ. ಕನ್ನಡ ಸೇನೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕ ಗಳನ್ನು ಉಚಿತವಾಗಿ ವಿತರಿಸಿರುವುದು ಶ್ಲಾಘನೀಯ ಮತ್ತು ಅನುಕರಣೀಯ. ಇಂತಹ ಅತ್ಯುತ್ತಮ ಕೆಲಸಗಳು ಇನ್ನೂ ಹೆಚ್ಚಿನದಾಗಿ ನಡೆಯಲಿ, ನನ್ನನ್ನು ಒಳಗೊಂಡಂತೆ ಈ ಮಹಾವಿದ್ಯಾಲಯದಲ್ಲಿ ಪದವಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ಹಳೆ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ದಿಗಾಗಿ ಶ್ರಮಿಸಿ ಮಹಾವಿದ್ಯಾಲಯ ವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ನೀಡಿದರು.ಕೀಲು ಮೂಳೆ ತಜ್ಞ ವೈದ್ಯ ಡಾ. ಟಿ.ಎಂ.ದೇವರಾಜ್ ಮಾತನಾಡಿ ಕನ್ನಡ ನಾಡು-ನುಡಿ ಮತ್ತು ಸಮಾಜದ ಬಗ್ಗೆ ಪ್ರೀತಿ ಅಭಿಮಾನ ಹೊಂದಿರಬೇಕು. ಈಗಿನಿಂದಲೇ ಗುರಿ ನಿಗದಿಪಡಿಸಿಕೊಂಡು ಅದಕ್ಕೆ ತಕ್ಕಂತೆ ಪೂರ್ವತಯಾರಿ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಜ್ಞಾನ ಸಂಪಾದಿಸಿಕೊಳ್ಳಿ. 5ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲಾ ಪಠ್ಯ ಪುಸ್ತಕಗಳನ್ನು ಮೊದಲು ಅಭ್ಯಾಸಮಾಡಬೇಕು. ಕನ್ನಡ ಸೇನೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ವಿತರಿಸಿದೆ. ಸ್ಪರ್ಧಾ ಜಗತ್ತಿನಲ್ಲಿ ಯಾವಾಗಲು ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು. ದಿನನಿತ್ಯ ವ್ಯಾಯಾಮ ಮಾಡುವುದರಿಂದ ನಮ್ಮಲ್ಲಿ ಸಕಾರಾತ್ಮಕ ಹಾರ್ಮೋನ್ ಉತ್ಪತ್ತಿಮಾಡಿ ಇಡೀ ದಿನ ನಮ್ಮನ್ನು ಕ್ರೀಯಾಶೀಲರನ್ನಾಗಿ ಮಾಡುತ್ತದೆ. ಉಚಿತ ಆರೋಗ್ಯ ಸೇವೆ ನೀಡುವುದು ಸರ್ಕಾರದ ಕರ್ತವ್ಯ. ಸದ್ಯದಲ್ಲೇ ತರೀಕೆರೆ ಪಟ್ಟಣದಲ್ಲಿ 160 ಹಾಸಿಗೆ ಹೊಂದಿರುವ ತಾಯಿ ಮಗುವಿನ ಆಸ್ಪತ್ರೆ ಪ್ರಾರಂಭವಾಗಲಿದೆ. ಸರ್ಕಾರದ ಆರೋಗ್ಯ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು. ವಕೀಲರು ಮತ್ತು ಕನ್ನಡ ಸೇನೆ ಕರ್ನಾಟಕ ನಗರ ಘಟಕದ ಅಧ್ಯಕ್ಷ ಬಿ.ಪಿ.ವಿಕಾಸ್ ಮಾತನಾಡಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸ ಬೇಕು. ಅದಕ್ಕಾಗಿ ಕನ್ನಡ ಸೇನೆ ತನು ಮನ ಧನಗಳ ಸಹಕಾರ ನೀಡಲು ಸದಾಸಿದ್ಧ. ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ಮೂಲಕ ಅಳಿಲು ಸೇವೆ ಮಾಡಿದ್ದೇವೆ. ಇನ್ನೂ ಹೆಚ್ಚಿನ ಸಹಕಾರ ನೀಡಲು ಸಿದ್ಧರಾಗಿದ್ದೇವೆ. ಅನ್ಯ ಭಾಷೆಗಳನ್ನು ದ್ವೇಶಿಸದೇ ಕನ್ನಡ ಭಾಷೆ ಬೆಳೆಸೋಣ ಉಳಿಸೋಣ ಎಂದರು.ಪ್ರಾಚಾರ್ಯ ಡಾ.ಕೆ.ಜಿ.ಚವಾಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪ ವೃಕ್ಷ ವಾಗುತ್ತದೆ. ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಎಂಬ ಚಂಪಾ ರವರ ಮಾತನ್ನು ಸ್ಮರಿಸುತ್ತಾ ಕನ್ನಡ ಬಳಸಿ, ಬೆಳಸಿ ಮತ್ತು ಉಳಿಸಿ, , ಕನ್ನಡ ಸೇನೆಯ ಸಹಕಾರ ಮಹಾವಿದ್ಯಾಲಯದ ಜೊತೆ ಹಾಗೆಯೇ ಮುಂದುವರಿಯಲಿ ಮುಂದಿನ ದಿನಗಳಲ್ಲಿ ಇಂತಹ ವಿನೂತನ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯುವಂತಾಗಲಿ, ಹಳೆ ವಿದ್ಯಾರ್ಥಿಗಳ ಸಹಕಾರ ಮಹಾವಿದ್ಯಾಲಯಕ್ಕೆ ಸದಾ ಇರಲಿ, ಮಾಜಿ ಶಾಸಕರು ತಮ್ಮ ತಂದೆ ಸ್ಮರಣಾರ್ಥ ಉಚಿತ ಪುಸ್ತಕ ದಾನ ಮಾಡಿದ್ದಕ್ಕಾಗಿ ಅವರು ಅಭಿನಂದಿಸಿ, ಕಾಲೇಜಿನ ಅಭಿವೃದ್ಧಿಗೆ ಅವರ ಸಹಕಾರ ಕೋರಿದರು. ವಿದ್ಯಾರ್ಥಿ ಒಕ್ಕೂಟದ ಚೇರಮನ್.ಶಿವರಾಜಕುಮಾರ ಕೆ. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ.ಜೆ.ರಘು, ಅರುಣ ಪಿ. ಐ.ಕ್ಯೂ.ಎ.ಸಿ. ಕೋ-ಆರ್ಡಿನೇಟರ್ ಡಾ.ಸದಾಶಿವನಾಯ್ಕ ಎ. ಕನ್ನಡ ಸೇನೆ ಗೌರವಾಧ್ಯಕ್ಷ ಟಿ.ಕೆ.ರವಿಶಂಕರ್, ಕನ್ನಡ ಸೇನೆ ನಗರ ಘಟಕ, ಅಧ್ಯಕ್ಷ ಮಂಜುನಾಥ್, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಕನ್ನಡ ಸೇನೆ ತರೀಕೆರೆ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
-16ಕೆಟಿಆರ್.ಕೆ.2ಃ
ತರೀಕೆರೆ ಎಸ್.ಜೆ.ಎಂ.ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ಶಾಸಕ ಡಿ.ಎಸ್.ಸುರೇಶ್ ಉದ್ಘಾಟಿಸಿದರು. ಕನ್ನಡ ಸೇನೆ ಕರ್ನಾಟಕ ನಗರ ಘಟಕದ ಅಧ್ಯಕ್ಷ ಬಿ.ಪಿ.ವಿಕಾಸ್, ಪ್ರಾಚಾರ್ಯ ಡಾ.ಕೆ.ಜಿ.ಚವಾಣ ಮತ್ತಿತರರು ಇದ್ದರು.;Resize=(128,128))
;Resize=(128,128))