ವಿದ್ಯಾರ್ಥಿಗಳು ಏಕೀಕರಣದ ಇತಿಹಾಸ ತಿಳಿದುಕೊಳ್ಳಿ

| Published : Nov 02 2024, 01:36 AM IST

ಸಾರಾಂಶ

ಅಂದು ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಲು ಹಲವಾರು ಜನ ಮಹನೀಯರು ಅವಿರತವಾಗಿ ಶ್ರಮಿಸಿದ್ದಾರೆ

ನರಗುಂದ: ಕರ್ನಾಟಕ ಏಕೀಕರಣಕ್ಕೆ ಹಲವಾರು ಮಹನೀಯರು ಶ್ರಮಿಸಿದ್ದು, ಅವರ ಇತಿಹಾಸ ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಹಾಗೂ ಉಪನ್ಯಾಸಕ ಪ್ರೊ. ಬಿ.ಸಿ.ಹನಮಂತಗೌಡ್ರ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಚಿಕ್ಕನರಗುಂದ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಏಕೀಕರಣ ಹೋರಾಟಗಾರ ಆಲೂರು ವೆಂಕಟರಾಯರ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಅಂದು ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಲು ಹಲವಾರು ಜನ ಮಹನೀಯರು ಅವಿರತವಾಗಿ ಶ್ರಮಿಸಿದ್ದಾರೆ. ಏಕೀಕರಣ ಹೋರಾಟಗಾರಲ್ಲಿ ಒಬ್ಬರಾದ ಆಲೂರು ವೆಂಕಟರಾಯರು ಏಕೀಕರಣ ಹೋರಾಟದ ಸಂದರ್ಭದಲ್ಲಿ ಪ್ರಕಟಿಸಿದ ಕರ್ನಾಟಕ ಗತವೖಭವ ಮತ್ತು ಕರ್ನಾಟಕತ್ವದ ವಿಕಾಸ ಗ್ರಂಥ ಮಹತ್ವಪೂರ್ಣವಾದವು, ಕರ್ನಾಟಕ ಏಕೀಕರಣಕ್ಕೆ ಆಲೂರವರ ಕೊಡುಗೆ ಅಪಾರ ಎಂದರು.

ಶಿಕ್ಷಕ ಪಿ.ಎ. ಸಾತಣ್ಣವರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಕರ್ನಾಟಕ ಏಕೀಕರಣದ ಇತಿಹಾಸ ಅರಿಯುವುದರೊಂದಿಗೆ ಕನ್ನಡ ನಾಡು-ನುಡಿ, ನೆಲ-ಜಲದ ಕುರಿತು ಅಭಿಮಾನ ತಾಳಬೇಕು ಎಂದರು.

ವಿದ್ಯಾಲಯದ ಪ್ರಾಚಾರ್ಯ ಎಸ್. ವಿ.ದಂಡನಾಯ್ಕರ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ವೈ.ಬಾಚಿ, ಪ್ರೊ.ಜಾಲಿಹಾಳ, ಪ್ರೊ. ಎ.ಬಿ.ಅಸುಂಡಿ, ಚೈತ್ರಾ ಓದೇಕಾರ್, ಸೇರಿದಂತೆ ಮುಂತಾದವರು ಇದ್ದರು.

ಸಂತೋಷ ಕಾಲಶಟ್ಟಿ ಸ್ವಾಗತಿಸಿದರು, ಪ್ರೊ.ಎಫ್.ಎಸ್. ಅಂಗಡಿ ನಿರೂಪಿಸಿ ವಂದಿಸಿದರು.