ದೇಶವನ್ನು ಶ್ರೇಷ್ಠ ಮಾಡುವುದು ವಿದ್ಯಾರ್ಥಿಗಳು: ಅರಭಾಂವಿ

| Published : Mar 26 2024, 01:16 AM IST

ದೇಶವನ್ನು ಶ್ರೇಷ್ಠ ಮಾಡುವುದು ವಿದ್ಯಾರ್ಥಿಗಳು: ಅರಭಾಂವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕೋಡಿ: ದೇಶವನ್ನು ಶ್ರೇಷ್ಠ ಭಾರತವನ್ನಾಗಿ ಮಾಡುವ ಶಕ್ತಿ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಮುಖ್ಯ ಶಿಕ್ಷಕ ಚಂದ್ರಶೇಖರ ಅರಭಾಂವಿ ಹೇಳಿದರು. ತಾಲೂಕಿನ ಟಾಂಗ್ಯಾನಕೋಡಿ ಶಾಲೆಯ ವ್ಯಾಪ್ತಿಯಲ್ಲಿನ ಮನೆ-ಮನೆಗಳಿಗೆ ತೆರಳಿ 2024-25ನೇ ಸಾಲಿಗೆ ದಾಖಾತಿಗೆ ಅರ್ಹತೆವಿರುವ ಮಕ್ಕಳ ಮನೆಗೆ ತೆರಳಿ ಹೂ ಕೊಡುವ ಮೂಲಕ ಈ ವರ್ಷ ಸರ್ಕಾರಿ ಶಾಲೆಗೆ ಪ್ರವೇಶ ಪಡೆಯುವಂತೆ ಪ್ರೇರಣೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ದೇಶವನ್ನು ಶ್ರೇಷ್ಠ ಭಾರತವನ್ನಾಗಿ ಮಾಡುವ ಶಕ್ತಿ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಮುಖ್ಯ ಶಿಕ್ಷಕ ಚಂದ್ರಶೇಖರ ಅರಭಾಂವಿ ಹೇಳಿದರು. ತಾಲೂಕಿನ ಟಾಂಗ್ಯಾನಕೋಡಿ ಶಾಲೆಯ ವ್ಯಾಪ್ತಿಯಲ್ಲಿನ ಮನೆ-ಮನೆಗಳಿಗೆ ತೆರಳಿ 2024-25ನೇ ಸಾಲಿಗೆ ದಾಖಾತಿಗೆ ಅರ್ಹತೆವಿರುವ ಮಕ್ಕಳ ಮನೆಗೆ ತೆರಳಿ ಹೂ ಕೊಡುವ ಮೂಲಕ ಈ ವರ್ಷ ಸರ್ಕಾರಿ ಶಾಲೆಗೆ ಪ್ರವೇಶ ಪಡೆಯುವಂತೆ ಪ್ರೇರಣೆ ನೀಡಲಾಯಿತು. ಈ ವೇಳೆ ಮಾತನಾಡಿದ ಅವರು, ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ, ಬಾಳೆಹಣ್ಣು, ಶೇಂಗಾ ಚಕ್ಕೆ, ಮೊಟ್ಟೆ, ರಾಗಿ ಮಾಲ್ಟ್ ಹಾಗೂ ಪಠ್ಯಪುಸ್ತಕ ಸಮವಸ್ತ್ರ ಜೊತೆಗೆ ಶೂ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಅಭ್ಯಾಸದಲ್ಲಿಯೂ ಸರ್ಕಾರಿ ಶಾಲೆಗಳು ಯಾವುದೇ ರೀತಿಯ ಖಾಸಗಿ ಶಾಲೆಗೆ ಕೊರತೆ ಇಲ್ಲ ಎಂದರು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಸುನೀಲ ಮಾಳಿ, ಆರ್.ಟಿ.ಕಾಮನಗೋಳ, ಕೆ.ಡಿ.ಜಕ್ಕಪ್ಪಗೋಳ, ಸಂತೊಷ ತರಾಳ, ಎಂ.ಎಂ.ಮಾದರ, ದೀಪಾ ಪೂಜೇರಿ, ಅಂಜನಾ ಬಾಲನಾಯಕ ಇದ್ದರು.ಚಿಕ್ಕೋಡಿ ತಾಲೂಕಿನ ಟಾಂಗ್ಯಾನಕೋಡಿ ಶಾಲೆಯ ವ್ಯಾಪ್ತಿಯಲ್ಲಿನ ಮನೆ-ಮನೆಗಳಿಗೆ ತೆರಳಿ 2024-25ನೇ ಸಾಲಿಗೆ ದಾಖಾತಿಗೆ ಅರ್ಹಲಿರುವ ಮಕ್ಕಳ ಮನೆಗೆ ತೆರಳಿ ಹೂ ಕೊಡವು ಮೂಲಕ ಅವರನ್ನು ಪ್ರವೇಶ ಪಡೆಯುವಂತೆ ಮುಖ್ಯ ಶಿಕ್ಷಕ ಚಂದ್ರಶೇಖರ ಅರಭಾಂವಿ ಕೋರಿದರು. ಸುನೀಲ ಮಾಳಿ,ಆರ್.ಟಿ.ಕಾಮನಗೋಳ, ಕೆ.ಡಿ.ಜಕ್ಕಪ್ಪಗೋಳ,ಸಂತೊಷ ತರಾಳ ಉಪಸ್ಥಿತರಿದ್ದರು.