ಸಾರಾಂಶ
ನಾಯಕ ಮಂಡಳಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ । 190 ವಿದ್ಯಾರ್ಥಿಗಳಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಯಳಂದೂರುವಿದ್ಯಾರ್ಥಿಗಳು ತಾಂತ್ರಿಕ ಚಿಂತನೆಗಳಿಂದ ಯಾವುದೇ ಸಮಸ್ಯೆಗಳು ಎದುರಾದರೂ ಎಲ್ಲಾ ಸಮಸ್ಯೆಗಳನ್ನು ಜಾಣ್ಮೆ ಮತ್ತು ಬುದ್ಧಿವಂತಿಕೆಯಿಂದ ಬಗೆಹರಿಸುವಂತಿರಬೇಕು ಎಂದು ಶಿಕ್ಷಣ ಇಲಾಖೆ ರಾಜ್ಯ ಸಂಪನ್ಮೂಲ ವ್ಯಕ್ತಿ ಕೆಂಪನಪುರ ಸಿದ್ದರಾಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ ತಾಲೂಕು ನಾಯಕ ಮಂಡಳಿ ವತಿಯಿಂದ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಹಾಗೂ ಬಿಎ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.ವಿದ್ಯಾರ್ಥಿಗಳು ಕಲಿಕೆ ವಿಚಾರದಲ್ಲಿ ಯಾವುದೇ ಗೊಂದಲಕ್ಕೀಡಾಗದೆ. ಆತ್ಮಸ್ಥೆರ್ಯದಿಂದ ಉನ್ನತ ಮಟ್ಟದ ಹುದ್ದೆಗಳಾದ ಐಎಎಸ್, ಐಪಿಎಸ್, ಐಎಫ್‌ಎಸ್, ಡಾಕ್ಟರ್, ಎಂಜಿನಿಯರ್, ಚಿತ್ರಕಲೆ, ಐತಿಹಾಸಿಕ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ಉನ್ನತ ಹುದ್ದೆಗಳನ್ನು ಸಮುದಾಯದ ವಿದ್ಯಾರ್ಥಿಗಳು ಅಲಂಕರಿಸಬೇಕಾದರೆ ಮೊದಲು ಪರಿಶ್ರಮದಿಂದ ಓದಬೇಕೆಂದು ಹೇಳಿದರು.
ವಾಲ್ಮೀಕಿ ಮಹರ್ಷಿಗಳು ವಿಶ್ವ ಶೇಷ್ಠ ಗ್ರಂಥ ರಾಮಾಯಣ ಮಹಾಕಾವ್ಯವನ್ನು ಸಂಸ್ಕೃತದಲ್ಲಿ ರಚಿಸಿ ಕೊಡುಗೆ ನೀಡಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣ ಎಂಬ ಹುಲಿ ಹಾಲನ್ನು ಕುಡಿದರೆ ಹುಲಿಯಂತೆ ಘರ್ಜಿಸಬಹುದು. ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣದಿಂದ ಸಂವಿಧಾನ ರಚನೆ ಮಾಡುವ ಮೂಲಕ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ನೀಡುವ ಮೂಲಕ ಶೋಷಿತರ ದ್ವನಿಯಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಬಡವರ ದ್ವನಿಯಾಗಬೇಕೆಂದು ಹೇಳಿದರು.ಮಕ್ಕಳು ಈ ಸಮಾಜದಲ್ಲಿ ಶಿಕ್ಷಿತರಾಗಿ ಹುನ್ನತ ಹುದ್ದೆ ಅಲಂಕರಿಸಿ ಎಂಬ ಮಹಾ ಆಕಾಂಕ್ಷೆಯಿಂದ ಕೂಲಿ ಮಾಡಿ ಓದಿಸುತ್ತಾರೆ. ಆದರೆ, ಮಕ್ಕಳು ಕಾಲೇಜು ದಿನಗಳಲ್ಲಿ ದುಷ್ಚಟಗಳಿಗೆ ಬಲಿಯಾಗಿ ಪೋಷಕರನ್ನು ಕಣ್ಣೀರಾಗಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕಷ್ಟಪಟ್ಟು ಬುದ್ದಿವಂತಿಕೆಯಿಂದ ಓದುವ ಮೂಲಕ ತಂದೆ, ತಾಯಿ, ಪೋಷಕರಿಗೆ ಹೆಸರು ತಂದುಕೊಡುವುದರ ಜತೆಯಲ್ಲಿ ಸಮುದಾಯಕ್ಕೆ ಮಾದರಿಯಾಗಬೇಕೆಂದು ತಿಳಿಸಿದರು.
ತಾಲೂಕು ನಾಯಕ ಮಂಡಳಿ ಅಧ್ಯಕ್ಷ ವೈ.ಎನ್.ಮುರುಳಿಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಕಲಿಕೆಯ ಜತೆಯಲ್ಲಿ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಗುಡಿ ಕೈಗಾರಿಕೆ, ಹೈನುಗಾರಿಕೆ, ಕೃಷಿ ಚಟುವಟಿಕೆ, ಐಟಿ ಬಿಟಿ ಕಂಪನಿಗಳಂತಹ ಸ್ವಂತ ಉದ್ಯಮಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ದೇಶದ ನಿರೋದ್ಯೋಗ ಸಮಸ್ಯೆ ನಿವಾರಣೆಗೆ ಮುಂದಾಗಬೇಕಾಗಿದೆ ಎಂದು ತಿಳಿಸಿದರು.ಪಂಪಂ ಮಾಜಿ ಅಧ್ಯಕ್ಷ ರವಿ, ಸದಸ್ಯರಾದ ಮಂಜುನಾಥ್, ರಂಗನಾಥ್, ಮಹದೇವನಾಯಕ, ಪ್ರಧಾನ ಕಾರ್ಯದರ್ಶಿ ಮದ್ದೂರು ವೆಂಕಟಾಚಲ, ಖಜಾಂಚಿ ವೈ.ಪಿ.ಉಮೇಶ್, ನಾಯಕ ಮಂಡಳಿ ಗೌರವಾಧ್ಯಕ್ಷ ಹೊನ್ನೂರು ರಾಚನಾಯಕ, ಎಂಟು ಬೀದಿ ಯಜಮಾನರಾದ ಮೂರ್ತಿ, ಚಂಗಚಹಳ್ಳಿ ಎಸ್.ಮಹದೇವಸ್ವಾಮಿ, ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಮಹೇಶ್, ಮಣಿಗಾರ್‌ರಂಗನಾಥ್, ನಿವೃತ್ತ ಅಬಕಾರಿ ವೃತ್ತನಿರೀಕ್ಷಕ ಸೂರ್ಯನಾರಾಯಣ್, ಯಜಮಾನರಾದ ಯರಿಯೂರು ಗೋವಿಂದನಾಯಕ, ಬಂಗಾರನಾಯಕ, ಬಳೇಚಂದ್ರು, ಟೈಲರ್ ರಾಜಶೇಖರ್, ಪಪಂ ಮಾಜಿ ಸದಸ್ಯರಾದ ಉಮಾಶಂಕರ್, ಭೀಮಪ್ಪ, ಮಹೇಶ್, ದೇವರಾಜು, ಕೆಸ್ತೂರು ಸ್ವಾಮಿ, ಅಗರ ನಾರಾಯಣಸ್ವಾಮಿ, ಸಂಜೀವನಾಯಕ, ಶಿಕ್ಷಕ ರಂಗನಾಥ್ ಸೇರಿ ಎಲ್ಲಾ ಗ್ರಾಮದ ಯಜಮಾನರು ಭಾಗವಹಿಸಿದ್ದರು.