ಪ್ಲಾಸ್ಟಿಕ್‌ ಮುಕ್ತ ಜಾಗೃತಿ ಮೂಡಿಸಿದ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು

| Published : Oct 27 2024, 02:37 AM IST

ಪ್ಲಾಸ್ಟಿಕ್‌ ಮುಕ್ತ ಜಾಗೃತಿ ಮೂಡಿಸಿದ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭಾರತಕ್ಕೆ ಅಣಿಗೊಳಿಸುವ, ಜಾಗೃತಿ ಮೂಡಿಸುವ ೧೬ ದಿನಗಳ ನಿರಂತರ ಸ್ವಚ್ಛತಾ ಕಾರ್ಯದ ಮೂಲಕ ಹಾನಗಲ್ಲ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಶೇಷ ಕಾಳಜಿ ತೋರಿದ್ದು ಮಠ ಮಂದಿರ, ಕಲಾಮಂದಿರಗಳ ಸ್ವಚ್ಛತೆಗೆ ಮುಂದಾಗಿದ್ದಾರೆ.

ಹಾನಗಲ್ಲ: ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭಾರತಕ್ಕೆ ಅಣಿಗೊಳಿಸುವ, ಜಾಗೃತಿ ಮೂಡಿಸುವ ೧೬ ದಿನಗಳ ನಿರಂತರ ಸ್ವಚ್ಛತಾ ಕಾರ್ಯದ ಮೂಲಕ ಹಾನಗಲ್ಲ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಶೇಷ ಕಾಳಜಿ ತೋರಿದ್ದು ಮಠ ಮಂದಿರ, ಕಲಾಮಂದಿರಗಳ ಸ್ವಚ್ಛತೆಗೆ ಮುಂದಾಗಿದ್ದಾರೆ.

ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಡಿ ಪ್ರಶಿಕ್ಷಣಾರ್ಥಿಗಳು ಶಿಕ್ಷಣ ಮಹಾವಿದ್ಯಾಲಯದ ಬಳಿಯೇ ಇರುವ ಬಯಲು ರಂಗ ಮಂದಿರವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆಗೆ ಮುಂದಾಗಿ, ಪ್ಲಾಸ್ಟಿಕ್ ಫ್ರೀ ಘೋಷಣೆಯೊಂದಿಗೆ ಪಟ್ಟಣದ ಬೀದಿಗಳಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸಿ, ಜಾಗೃತಿ ಹಾಡುಗಳನ್ನು ಹಾಡಿ ಗಮನ ಸೆಳೆದಿದ್ದಾರೆ. ಶುದ್ಧ ಹಸಿರು ಭೂಮಿ ಆರೋಗ್ಯದ ತವರು, ನೀರು ಉಳಿಸಿ ಜೀವ ಉಳಿಸಿ ಎಂಬ ಸಂದೇಶ ಸಾರುವ ಹಾಡು ನಾಟಕಗಳು ಗಮನ ಸೆಳೆದಿವೆ. ನಮ್ಮ ಊರು ನಮ್ಮ ಸ್ವಚ್ಛತೆ. ನಮ್ಮ ಸುತ್ತ ಪರಿಸರ ಸುಖಿ ಪರಿಸರವಾಗಲು ಸ್ವಚ್ಛತೆಯೇ ಆದ್ಯತೆ ಎಂಬ ಧ್ಯೇಯವನ್ನು ಸಾರಿದ್ದಾರೆ. ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಆನಿಕರೆಯ ಸುತ್ತ ಇರುವ ಕಸ ಪ್ಲಾಸ್ಟಿಕ್ ಆರಿಸಿ ವಿಲೇವಾರಿ ಮಾಡಿದ್ದಾರೆ. ಬಿಲ್ಲೇಶ್ವರ ದೇವಾಲಯ, ಕುಮಾರೇಶ್ವರ ವಿರಕ್ತಮಠದ ಆವರಣದ ಕಿತ್ತೂರು ಚೆನ್ನಮ್ಮ ಪುತ್ಥಳಿ ಆವರಣ, ಜಗಜ್ಯೋತಿ ಬಸವೇಶ್ವರ ಪುತ್ಥಳಿ ಆವರಣ, ಬಸ್ ನಿಲ್ದಾಣವನ್ನೂ ಸ್ವಚ್ಛಗೊಳಿಸಿ ಹಸಿ ಕಸ ಒಣ ಕಸ ಬೇರ್ಪಡಿಸಿ ಪುರಸಭೆಯ ಕಸವಿಲೇವಾರಿ ಘಟಕಕ್ಕೆ ರವಾನಿಸಿದ್ದಾರೆ.ನೂರಾರು ಗಿಡಮೂಲಿಕೆ ಪ್ರದರ್ಶನ ಮಾಡುವುದರ ಮೂಲಕ ಹಾಗೂ ಸಿದ್ಧಗಿಡಮೂಲಿಕೆ ಔಷಧಗಳಿಂದ ಹಲವಾರು ಸಾಂಕ್ರಾಮಿಕ ರೋಗಗಳಿಗೆ ಸಿದ್ಧ ಔಷಧಗಳು, ವಿವಿಧ ಸಸ್ಯಗಳ ವೈವಿಧ್ಯತೆ ಹಾಗೂ ಅವುಗಳ ಔಷಧಿಯ ಗುಣದ ಕುರಿತು ಮಂಜು ಆಯುರ್ವೇದ ಸೇವಾ ಸಂಸ್ಥೆ ಸಂಗೂರಿನ ವೈದ್ಯ ತಿಪ್ಪಣ್ಣ ಸಾಲಿಖಾನ್ ಪ್ರಶಿಕ್ಷಣಾರ್ಥಿಗಳಿಗೆ ಉಪನ್ಯಾಸವನ್ನು ಇದೇ ಸಂದರ್ಭದಲ್ಲಿ ನೀಡಿದರು.ನಿಮ್ಮ ಭವಿಷ್ಯವನ್ನು ಕಸದ ಬುಟ್ಟಿಗೆ ಹಾಕಿಕೊಳ್ಳಬೇಡಿ, ಸ್ವಚ್ಚವಾದ ಸ್ಥಳವು ಸುರಕ್ಷಿತ ಸ್ಥಳವಾಗಿದೆ. ನಿಮ್ಮ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಡಿ, ನಮ್ಮ ಸ್ವಚ್ಛತೆಯಿಂದಲೇ ನಮ್ಮ ನಾಡು ಜಗಕೆ ಹೆಸರುವಾಸಿಯಾಗುತ್ತದೆ ಎಂಬ ನಾಣ್ನುಡಿಯೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮವು ಎನ್.ಎಸ್.ಎಸ್ ಸಂಯೋಜಕರಾದ ಡಾ. ವಿಶ್ವನಾಥ ಬೊಂದಾಡೆ ಹಾಗೂ ಪ್ರಾಚಾರ್ಯ ಡಾ.ಸದಾಶಿವಪ್ಪ ಎನ್. ಅವರ ಮಾರ್ಗದರ್ಶನದಲ್ಲಿ ಮತ್ತು ಸಿಬ್ಬಂದಿ ವರ್ಗದವರಾದ ಡಾ. ರಾಘವೇಂದ್ರ ಮಾಡಳ್ಳಿ, ಡಾ. ಪ್ರಕಾಶ ಹುಲ್ಲೂರ, ಡಾ. ಹರೀಶ ತಿರಕಪ್ಪ, ಡಾ. ಜಿತೇಂದ್ರ ಜಿ.ಟಿ., ಡಾ. ಪ್ರಕಾಶ.ಜಿ.ವಿ., ಡಾ. ರುದ್ರೇಶ. ಬಿ. ಎಸ್., ಪ್ರೊ. ದಿನೇಶ ಆರ್., ಮಹೇಶ ಅಕ್ಕಿವಳ್ಳಿ, ಎಂ.ಎಂ. ನಿಂಗೋಜಿ, ಎಸ್.ಸಿ.ವಿರಕ್ತಮಠ, ಮಂಜಪ್ಪಾ ಪರಶಿಕ್ಯಾತಿ, ಜಗದೀಶ ನಿಂಬಕ್ಕನವರ, ಮಾಲತೇಶ ಜಡೆದ, ಎಲ್.ಎಫ್. ಹಾನಗಲ್ಲ ಉಪಸ್ಥಿತಿಯಲ್ಲಿ ಅಚ್ಚುಕಟ್ಟಾಗಿ ನೆರವೇರಿತು.