ಕಾರಾಗೃಹಕ್ಕೆ ಭೇಟಿ ನೀಡಿದ ಉಪ್ಪಿನ ಕಾಲೇಜಿನ ವಿದ್ಯಾರ್ಥಿಗಳು

| Published : Nov 05 2025, 03:30 AM IST

ಕಾರಾಗೃಹಕ್ಕೆ ಭೇಟಿ ನೀಡಿದ ಉಪ್ಪಿನ ಕಾಲೇಜಿನ ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ನಗರದ ಶ್ರೀಸಿದ್ದೇಶ್ವರ ಸಂಸ್ಥೆಯ ಎಸ್.ಸಿ.ಉಪ್ಪಿನ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗದಿಂದ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಲಾಯಿತು. ಈ ವೇಳೆ ವಿದ್ಯಾರ್ಥಿಗಳು ಅಪರಾಧಿಗಳನ್ನು ಸಂದರ್ಶನ ಮಾಡಿದರು.

ಜೈಲು ಅಧಿಕಾರಿ ಗೋಪಾಲಕೃಷ್ಣ ಕುಲಕರ್ಣಿ ಮಾತನಾಡಿ, ನಾವು ಸಮಾಜದಲ್ಲಿ ವಿರೋಧಿಸಬೇಕಾಗಿದ್ದು ಅಪರಾಧವನ್ನು ಹೊರತು ಅಪರಾಧಿಗಳನ್ನಲ್ಲ. ಒಂದು ಕ್ಷಣಿಕ ಕೋಪಕ್ಕೆ ವ್ಯಕ್ತಿ ಕಾನೂನನ್ನು ಉಲ್ಲಂಘನೆ ಮಾಡುತ್ತಾನೆ. ಕೋಪದಲ್ಲಿ ಎಲ್ಲರೂ ತಾಳ್ಮೆಯಿಂದ ವರ್ತಿಸಬೇಕು. ಅಪರಾಧಿಗಳ ಮನಸ್ಸನ್ನು ಪರಿವರ್ತಿಸಿ ಶಿಕ್ಷೆಯ ಅವಧಿ ಮುಗಿದ ನಂತರ ಅವರು ಕೂಡ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಬದಕುವಂತೆ ಮಾಡುವದೇ ನಮ್ಮ ಉದ್ದೇಶ. ವಿದ್ಯಾರ್ಥಿಗಳು ಯಾವುದೇ ಸಮಯ ಹಾಗೂ ಸಂದರ್ಭದಲ್ಲಿ ತಪ್ಪು ಮಾಡುವ ನಿರ್ಧಾರ ಮಾಡಬೇಡಿ. ಒಂದು ಕ್ಷಣ ವಿಚಾರಿಸಿ. ತಪ್ಪಾದ ನಂತರದ ಸ್ಥಿತಿಯನ್ನು ನೀವು ಕಣ್ಣಾರೆ ನೋಡಿದ್ದೀರಿ. ಕಾನೂನಿನ ಮುಂದೆ ಎಲ್ಲರೂ ಸಮಾನರು ಕಾನೂನಿನ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಅದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.ವಿದ್ಯಾರ್ಥಿಗಳು ಅನೇಕ ಪ್ರಶ್ನೆಗಳ ಮುಖಾಂತರ ಅನೇಕ ವಿಷಯಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲೆ ಡಾ.ಸುನಿತಾ ಕಟ್ಟಿಮನಿ, ಜಯಲಕ್ಷ್ಮಿ ಅನವಾಲ, ಸಂಗೀತಾ ಸೌದಿ, ಸರೋಜಾ, ಸಂಜಯ ಅಗ್ನಿಹೋತ್ರಿ, ಅಭಿಷೇಕ ಚಿಂಚಲಿ, ಅಜೀತ ಪ್ಯಾಟಿ, ಜಗದೀಶ ಸಾತಿಹಾಳ, ರಮೇಶ ಮೇತ್ರಿ ಉಪಸ್ಥಿತರಿದ್ದರು.