ವಿದ್ಯಾರ್ಥಿಗಳ ಓದಿನಲ್ಲಿ ತನ್ಮಯತೆ ಇರಲಿ: ಗುರುಬಸವ ಪಟ್ಟದ್ದೇವರು

| Published : Feb 22 2024, 01:46 AM IST

ವಿದ್ಯಾರ್ಥಿಗಳ ಓದಿನಲ್ಲಿ ತನ್ಮಯತೆ ಇರಲಿ: ಗುರುಬಸವ ಪಟ್ಟದ್ದೇವರು
Share this Article
  • FB
  • TW
  • Linkdin
  • Email

ಸಾರಾಂಶ

ಭಾಲ್ಕಿಯ ಜಿ.ಎಚ್. ಶಿವಮಠ ಐಟಿಐ ಕಾಲೇಜಿನಲ್ಲಿ ನಡೆದ ಜಿಎಚ್ ಶಿವಮಠ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ವ್ಯಕ್ತಿಯ ಜೀವನದಲ್ಲಿ ಹಣ, ಸಂಪತ್ತಿಗಿಂತ ಚಾರಿತ್ರ್ಯತೆ ಅತ್ಯಂತ ಶ್ರೇಷ್ಠವಾದದ್ದು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಜಿಎಚ್ ಶಿವಮಠ ಐಟಿಐ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಶರಣ ಜಿ.ಎಚ್.ಶಿವಮಠ ಅವರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಜೀವನದಲ್ಲಿ ಹಣ, ಸಂಪತ್ತು ಕಳೆದು ಕೊಂಡರೆ ಮತ್ತೆ ಸಂಪಾದಿಸಬಹುದು, ಆದರೆ ಚಾರಿತ್ರ್ಯ ಕಳೆದುಕೊಂಡರೆ ಮತ್ತೆ ಗಳಿಸುವುದು ಕಷ್ಟ ಎಂದರು.

ವಿದ್ಯಾರ್ಥಿ ಜೀವನ ದಿಸೆಯಿಂದಲೇ ಶರೀರ, ವ್ಯಕ್ತಿತ್ವ, ಚಾರಿತ್ರ್ಯೆತೆ ಶುದ್ಧವಾಗಿರಿಸಿಕೊಳ್ಳಬೇಕು. ತಮ್ಮ ದಿನಚರಿಯನ್ನು ಉತ್ತಮವಾಗಿ ರೂಪಿಸಿಕೊಂಡು ಉತ್ತಮ ನಿದ್ರೆ, ಯೋಗ, ಶುದ್ಧ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಓದಿನಲ್ಲಿ ತನ್ಮಯತೆ ಇದ್ದರೆ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.

ಜಿ.ಎಚ್.ಶಿವಮಠ ಅವರು ಮಠದ ಪೂಜ್ಯರ ಜತೆಗೆ ಆತ್ಮೀಯ ಸಂಬಂಧ ಹೊಂದಿದ್ದರು. ಮೂಲತಃ ವಿಜಯಪುರ ಜಿಲ್ಲೆಯ ನಿಡಗುಂದಿ ಗ್ರಾಮದವರಾಗಿದ್ದ ಜಿ.ಎಚ್.ಶಿವಮಠ ಅವರು ಹಲವು ವರ್ಷಗಳ ಕಾಲ ಭಾಲ್ಕಿ ಅಂಚೆ ಕಚೇರಿಯಲ್ಲಿ ಅಂಚೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ಪಟ್ಟದ್ದೇವರ ಸಾಮಾಜಿಕ ಕಾರ್ಯಗಳ ಪ್ರಭಾವಕ್ಕೆ ಒಳಾಗದ ಶಿವಮಠ ಅವರು ತಮ್ಮ ಆಸ್ತಿಯನ್ನು ಶ್ರೀಮಠಕ್ಕೆ ಹಸ್ತಾಂತರಿಸಿದರು. ಹೀಗಾಗಿ, ಡಾ.ಬಸವಲಿಂಗ ಪಟ್ಟದ್ದೇವರು ಆಸ್ತಿಯಿಂದ ಬಂದ ಹಣದಲ್ಲಿ ಜಿ.ಎಚ್.ಶಿವಮಠ ಹೆಸರಿನಲ್ಲಿ ಐಟಿಐ ಕಾಲೇಜು ತೆರೆದು ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುತ್ತಿದ್ದಾರೆ ಎಂದು ತಿಳಿಸಿದರು.

ಪ್ರಾಚಾರ್ಯ ದೇವರಾಜ ಕುಂಬಾರ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಸಂಗಮೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ಪ್ರವೀಣ ಹಿರೇಮಠ, ಮುಖ್ಯಗುರುಗಳಾದ ವಿಶ್ವನಾಥ ಪಕ್ಕಾ, ಬಸವರಾಜ ರಂಜೇರೆ, ರಾಜಕುಮಾರ ಕಲಶೆಟ್ಟಿ, ರಾಜಕುಮಾರ ಸ್ವಾಮಿ, ಬಸವರಾಜ ಗೋರನಾಳೆ, ದೇವರಾಜ ಕುಂಬಾರ, ಪ್ರವೀಣ ಹಿರೇಮಠ, ವಿಶ್ವನಾಥ ಪಕ್ಕಾ, ಬಸವರಾಜ ರಂಜೇರೆ ಇದ್ದರು.