ವಿದ್ಯಾರ್ಥಿಗಳು ಓದಿದ ಕಾಲೇಜಿಗೆ ಉತ್ತಮ ಫಲಿತಾಂಶ ತರಬೇಕು

| Published : Feb 02 2025, 01:00 AM IST

ಸಾರಾಂಶ

ಖಾಸಗಿ ಶಾಲೆಗಳಿಗೂ ಮಿಗಿಲಾದ ಶಿಕ್ಷಣ ನೀಡುವ ಜತೆಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತಾ, ಹೆಚ್ಚು ಅಂಕ ಪಡೆದವರನ್ನು ಸತ್ಕರಿಸಿ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನಿಮ್ಮ ಪ್ರಯತ್ನದಿಂದ ನಾಲ್ಕೂವರೆ ದಶಕಗಳನ್ನು ಕಳೆದಿರುವ ಈ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿ ವಾರ್ಷಿಕ ಫಲಿತಾಂಶ ನೀಡುತ್ತಾ ಸಾಗಿರುವುದು ವಿಶೇಷ ಎಂದು ನಿವೃತ್ತ ಪಾಂಶುಪಾಲ ಎಚ್.ಎಸ್.ಪುಟ್ಟಸೋಮಪ್ಪ ನುಡಿದರು. ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಈ ವರ್ಷವು ಈ ಕಾಲೇಜಿಗೆ ಉತ್ತಮ ಫಲಿತಾಂಶ ತರುವತ್ತ ಹೆಚ್ಚಿನ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಖಾಸಗಿ ಶಾಲೆಗಳಿಗೂ ಮಿಗಿಲಾದ ಶಿಕ್ಷಣ ನೀಡುವ ಜತೆಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತಾ, ಹೆಚ್ಚು ಅಂಕ ಪಡೆದವರನ್ನು ಸತ್ಕರಿಸಿ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನಿಮ್ಮ ಪ್ರಯತ್ನದಿಂದ ನಾಲ್ಕೂವರೆ ದಶಕಗಳನ್ನು ಕಳೆದಿರುವ ಈ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿ ವಾರ್ಷಿಕ ಫಲಿತಾಂಶ ನೀಡುತ್ತಾ ಸಾಗಿರುವುದು ವಿಶೇಷ ಎಂದು ನಿವೃತ್ತ ಪಾಂಶುಪಾಲ ಎಚ್.ಎಸ್.ಪುಟ್ಟಸೋಮಪ್ಪ ನುಡಿದರು. ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ನಮನ ಸಂಗಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಮಾಜಿ ಪ್ರಧಾನಿ ದೇವೇಗೌಡ ಅವರು ಶಾಸಕರಾಗಿದ್ದ ಅವಧಿಯಲ್ಲಿ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜು ಆರಂಭವಾಗಲು ಸಹಕಾರಿ ಆಯಿತೆಂದು ಮಾಜಿ ಪ್ರಧಾನಿ ದೇವೇಗೌಡರ ಸಹಕಾರ ಜತೆಗೆ ವಿದ್ಯಾರ್ಥಿಗಳ ಕಲಿಕೆಯ ತುಡಿತದಿಂದ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಇಷ್ಟು ವರ್ಷಗಳ ಈ ಸಾಧನೆಗೆ ಅಂದಿನಿಂದ ಇಂದಿನವರೆಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವರ್ಗ ಹಾಕಿದ ಶ್ರಮವೇ ಕಾರಣವೆಂದರು.

ಇಂದು ನಡೆಯುತ್ತಿರುವ ನಮನ ಸಂಗಮದಲ್ಲಿ ವರ್ಷದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವರ್ಗಾವಣೆಗೊಂಡಿರುವ ಉಪನ್ಯಾಸಕರಿಗೆ ಗೌರವ ಸರ್ಮಪಣೆ ಹಾಗು ನಿವತ್ತಗೊಂಡ ಉಪನ್ಯಾಸಕ ಗಿರೀಶ್ ಅವರನ್ನು ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಈ ವರ್ಷವು ಈ ಕಾಲೇಜಿಗೆ ಉತ್ತಮ ಫಲಿತಾಂಶ ತರುವತ್ತ ಹೆಚ್ಚಿನ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

೧೯೮೧ ರಲ್ಲಿ ಆರಂಭವಾದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳಲ್ಲಿ ಬಹಳಷ್ಟು ಮಂದಿ ಉನ್ನತ ಸ್ಥಾನದಲ್ಲಿ ಇಂದು ಕರ್ತವ್ಯ ನಿರ್ವಹಿಸುತಿದ್ದಾರೆ ಎಂದು ತಿಳಿಸಿ ವಿದ್ಯಾರ್ಥಿಗಳಾದ ತಾವು ನಿಮ್ಮ ಭವಿಷ್ಯ ರೂಪಿಸಿಕೊಳ್ಳುವ ಸಲುವಾಗಿ ಕಳೆದ ನಾಲ್ಕಾರು ವರ್ಷಗಳಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ನೆರವಾಗುವಂತಹ ಸ್ಪರ್ಧಾ ಶಿಕ್ಷಣವಾದ ಸಿಇಟಿಯಂತ ಮಹತ್ವದ ತರಬೇತಿಯನ್ನು ನೀಡಲಾಗುತ್ತಿದೆ ಇದನ್ನು ಸದುಪಯೋಗ ಪಡಿಸಿ ಕೊಳ್ಳುವಲ್ಲಿ ನೀವುಗಳು ಹೆಚ್ಚಿನ ಶ್ರದ್ದೇ ಮತ್ತು ಶ್ರಮ ಅವಶ್ಯವಿದೆ ಎಂದರು.ವೇದಿಕೆ ಕಾರ್ಯಕ್ರಮದ ಆರಂಭದಲ್ಲಿ ಪ್ರಾಂಶುಪಾಲ ದೇವರಾಜ್ ಅವರು ಕಾಲೇಜು ನಡೆದು ಬಂದ ದಾರಿ ಮತ್ತು ಕಾಲೇಜಿಗೆ ಮೂಲಭೂತ ಸೌರ್ಕಯ ನೀಡಿದ ಶಾಸಕ ರೇವಣ್ಣ ಅವರ ಸಹಕಾರವನ್ನು ಸ್ಮರಿಸಿ ಸರ್ವಾಂಗೀಣಕ್ಕೆ ಕಾರಣರಾದವರನ್ನು ನೆನಪು ಮಾಡಿಕೊಂಡರಲ್ಲದೆ ಪ್ರಸ್ತುತ ಕಾಲೇಜಿನಲ್ಲಿ ೧೧ ಖಾಯಂ ಉಪನ್ಯಾಸಕರು ಹಾಗು ೭ ಮಂದಿ ಅತಿಥಿ ಉಪನ್ಯಾಕರುಗಳು ಇದ್ದು ಎಲ್ಲ ವಿದ್ಯಾರ್ಥಿಗಳಿಗೂ ಸಹ ಎಲ್ಲ ವಿಷಯಗಳ ಬಗ್ಗೆ ಪರಿಪೂರ್ಣ ಉಪನ್ಯಾಸ ನೀಡಿ ವಿದ್ಯಾರ್ಥಿಗಳು ಸವಾಂಗೀಣ ಯಶಸಿಗೆ ತಮ್ಮಗಳ ಶ್ರಮವನ್ನು ವ್ಯಯಿಸಿದ್ದಾರೆ ಎಂದು ಉಪನ್ಯಾಸಕರುಗಳ ಸೇವೆಯನ್ನು ಸ್ಮರಿಸಿದರು.ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್‌ ಕುಮಾರ್ ಅವರು ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಕಲಿಕೆಗೆ ಪೂರಕವಾದ ಕೆಲವು ಸಲಹೆಗಳನ್ನು ನೀಡಿದರು.ಕಾರ್ಯಕ್ರಮದಲ್ಲಿ ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ರಾಮಕೃಷ್ಣ, ನಿವೃತ್ತ ಇತಿಹಾಸ ಉಪನ್ಯಾಸಕ ಗಿರೀಶ್, ವರ್ಗಾವಣೆಗೊಂಡಿರುವ ಉಪನ್ಯಾಸಕರಾದ ಅರ್ಥಶಾಸ್ತ್ರದ ಉಪನ್ಯಾಸಕಿ ತೇಜಸ್ವಿನಿ, ಕನ್ನಡ ಉಪನ್ಯಾಸಕ ಆರ್‌.ಎನ್.ರವಿ ಅವರನ್ನು ಗೌರವಿಸಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತರ್ಕಶಾಸ್ತ್ರ ಉಪನ್ಯಾಸಕಿ ನಿರ್ಮಲ ಅವರು ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಉಪನ್ಯಾಸಕ ಸುದರ್ಶನ್ ಅವರು ಸ್ವಾಗತಿಸಿದರು. ವೀಣಾ ಅವರು ಕಾರ್ಯಕ್ರಮ ನಿರೂಪಿಸಿದರು.