ಯಲಬುರ್ಗಾ: ಗ್ರಾಮೀಣ ಪ್ರದೇಶಗಳಲ್ಲಿ ಸುಂದರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಗಾಣಧಾಳ ಗ್ರಾಪಂ ಪಿಡಿಒ ನೀಲಾ ಸೂರ್ಯಕುಮಾರಿ ಹೇಳಿದರು.
ತಾಲೂಕಿನ ಗಾಣಧಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಗುರುವಾರ ಭೇಟಿ ನೀಡಿ ಸುತ್ತಲಿನ ವಾತಾವರಣ ಸ್ವಚ್ಛತವಾಗಿಟ್ಟುಕೊಳ್ಳುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.ಸುಪ್ರೀಂ ಕೋರ್ಟ್ ಆದೇಶದಂತೆ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಎಸೆದರೆ ಗ್ರಾಪಂದಿಂದ ದಂಡ ವಿಧಿಸುವ ಅವಕಾಶ ನೀಡಿದೆ. ಗ್ರಾಪಂನಿಂದ ಓಣಿಯಲ್ಲಿ ಬರುವ ಸ್ವಚ್ಛತಾ ವಾಹನಕ್ಕೆ ನಿವಾಸಿಗಳು ಹಸಿ ಮತ್ತು ಒಣ ಕಸ ಸಂಗ್ರಹಿಸಿ ಹಾಕಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸ್ವಚ್ಛತೆಗೆ ಕಡೆಗೆ ಗಮನಹರಿಸಬೇಕು. ಈ ಬಗ್ಗೆ ಸಮುದಾಯಕ್ಕೆ ಜನಜಾಗೃತಿ ಮೂಡಿಸುವ ಕೆಲಸವಾಗಬೇಕು. ಸುಂದರ ಪರಿಸರ ನಿರ್ಮಾಣದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಶಾಲಾ ಸುತ್ತಲಿನ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದರು.
ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಚ್ಛತೆ,ನೈ ರ್ಮಲ್ಯ, ವಿದ್ಯುದ್ವೀಪ ಮತ್ತು ಕುಡಿಯುವ ನೀರಿನ ಸಮಸ್ಯೆ ಆಗದಂತೆ ನಿಗಾ ವಹಿಸಲಾಗಿದೆ. ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು ಕಂಡು ಬಂದರೆ ದಂಡ ವಿಧಿಸಲಾಗುವುದ ಎಂದರು.ಈ ಸಂದರ್ಭ ಮುಖ್ಯಶಿಕ್ಷಕ ನಿಂಗಪ್ಪ ಚಕ್ರಸಾಲಿ ಹಾಗೂ ವಿದ್ಯಾರ್ಥಿಗಳು ಇದ್ದರು.