ವಿದ್ಯಾರ್ಥಿಗಳು ಸ್ವಯಂ ಆಲೋಚನೆ, ಅರಿವು ಬೆಳೆಸಿಕೊಳ್ಳಿ

| Published : Nov 21 2025, 02:15 AM IST

ವಿದ್ಯಾರ್ಥಿಗಳು ಸ್ವಯಂ ಆಲೋಚನೆ, ಅರಿವು ಬೆಳೆಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರಿಗಿಂತ ವಿದ್ಯಾರ್ಥಿಗಳು ಬಹಳ ಕ್ರಿಯಾಶೀಲಾರಾಗಿರಬೇಕು. ನೆಪ ಹೇಳುತ್ತಾ ಕಾಲ ಕಳೆಯಬಾರದು

ಕೊಪ್ಪಳ: ವಿದ್ಯಾರ್ಥಿನಿಯರು ಸ್ವಯಂ ಆಲೋಚನೆ ಮತ್ತು ಅರಿವು ಬೆಳಸಿಕೊಳ್ಳಬೇಕು ಎಂದು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಭಾರಿ ಪ್ರಾಚಾರ್ಯೆ ಡಾ. ಹುಲಿಗೆಮ್ಮ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ರೆಂಜರ್ಸ್ ( ಸ್ಕೌಟ್ ಮತ್ತು ಗೈಡ್) ವಿದ್ಯಾರ್ಥಿನಿಯರಿಗೆ ಅಭಿಯೋಜನೆ ಮತ್ತು ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಕರಿಗಿಂತ ವಿದ್ಯಾರ್ಥಿಗಳು ಬಹಳ ಕ್ರಿಯಾಶೀಲಾರಾಗಿರಬೇಕು. ನೆಪ ಹೇಳುತ್ತಾ ಕಾಲ ಕಳೆಯಬಾರದು.ಮಹಿಳೆಯರ ಮೇಲೆ ಬಹಳ ಜವಾಬ್ದಾರಿ ಇದೆ.ವಿದ್ಯಾರ್ಥಿಗಳು ಅರಿವು ಮತ್ತು ಸ್ವಯಂ ಆಲೋಚನೆ, ಶಿಸ್ತು, ಸಮಯ ಪ್ರೆಜ್ಞೆ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿನಿಯರಾದ ಲಕ್ಷ್ಮೀ, ದುರಗಮ್ಮ, ಕಮಲ,ಪವಿತ್ರ ಪವರ್, ವೈಷ್ಣವಿ ಸ್ಕೌಟ್ ಮತ್ತು ಗೈಡ್ಸ್ ಅರ್ಥ,ಇತಿಹಾಸ,ನಿಯಮ, ಮಾರ್ಗದರ್ಶನ,ಉದ್ದೇಶ ಕುರಿತು ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣದ ಭೋದಕ ಡಾ.ಪ್ರದೀಪ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಸಮಯ ಪಾಲನೆ, ದೇಶಭಕ್ತಿ, ಹಿರಿಯರಿಗೆ ಗೌರವ ಕೊಡುವುದು ಮತ್ತು ಸೇವೆ ಪಾಲಿಸಬೇಕು. ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ದೇಶದ ಬೆಳವಣಿಗೆ ಕಾರಣವಾಗಬೇಕು ಸಿಕ್ಕ ಅವಕಾಶಗಳು ಮತ್ತು ಸಮಯ ಬಳಸಿಕೊಳ್ಳಬೇಕು. ನೀವು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರದ ಸಹಾಯಕ ಪ್ರಾಧ್ಯಪಕರು ಮತ್ತು ರೆಂಜರ್ಸ್ ಘಟಕದ ನಿಕಟ ಪೂರ್ವ ಸಂಚಾಲಕ ಸುಮಿತ್ರಾ ಎಸ್.ವಿ.ಮಾತನಾಡುತ್ತ ನಮ್ಮ ಕಾಲೇಜಿನ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ ಸಿಕ್ಕಿದೆ. ನೀವು ಸಮರ್ಪಣೆ ಮನೋಭಾವನೆ ಬೆಳಸಿಕೊಳ್ಳಬೇಕು. ಯಾವಾಗಲೂ ಸೇವೆ ಮಾಡುವುದಕ್ಕೆ ಮಾನಸಿಕ ಮತ್ತು ದೈಹಿಕವಾಗಿ ಸಿದ್ದರಾಗಿಬೇಕು. ನೀವು ಕೂಡ ದೇಶದ ಗಡಿ ಕಾಯುವ ಸೈನಿಕರಿದ್ದಂತೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸ್ಕೌಟ್ ಮತ್ತು ಗೈಡ್ ನ ಸಂಚಾಲಕ ಶುಭ ಟಿ.ಈ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಾಲೇಜಿನಲ್ಲಿ ಓದುವ ಸಂದರ್ಭದಲ್ಲಿ ಪಠ್ಯತರ ಚಟುವಟಿಕೆಗಳಲ್ಲಿ ಮತ್ತು ಈ ರೀತಿಯ ಘಟಕಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ಜ್ಞಾನ ವಿಕಾಸವಾಗುತ್ತದೆ. ಜೀವನಕ್ಕೆ ಉಪಯೋಗಕ್ಕೆವಾಗುವ ವಿಷಯ ಕಲಿಯುತ್ತೀರಿ ಎಂದು ತಿಳಿಸಿದರು.