ನರಸಿಂಹರಾಜಪುರವಿದ್ಯಾರ್ಥಿಗಳು ಕನ್ನಡ ದಿನ ಪತ್ರಿಕೆ ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದು ಕೊಪ್ಪ ಯಡಗೆರೆ ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ರಾಮಣ್ಣ ಭಂಡಾರಿ ಕರೆ ನೀಡಿದರು.

ಕುದುರೆಗುಂಡಿ ಕೆಪಿಎಸ್ ಪ್ರೌಢ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರವಿ

ದ್ಯಾರ್ಥಿಗಳು ಕನ್ನಡ ದಿನ ಪತ್ರಿಕೆ ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದು ಕೊಪ್ಪ ಯಡಗೆರೆ ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ರಾಮಣ್ಣ ಭಂಡಾರಿ ಕರೆ ನೀಡಿದರು.

ಗುರುವಾರ ತಾಲೂಕಿನ ಗಡಿಭಾಗದ ಕುದುರೆಗುಂಡಿಯ ಕೆಪಿಎಸ್ ಪ್ರೌಢ ಶಾಲೆಯಲ್ಲಿ ಕೊಪ್ಪ ಯಡಗೆರೆ ಸೌಹಾರ್ದ ಸಹಕಾರ ಸಂಘದ ಪ್ರಾಯೋಜಕತ್ವದಲ್ಲಿ ಕನ್ನಡ ಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿ ದಿನಪತ್ರಿಕೆ ಓದುವುದರಿಂದ ಸಾಮಾನ್ಯ ಜ್ಞಾನ ಹೆಚ್ಚಾಗಲಿದೆ .ಕಳೆದ 2 ವರ್ಷದಿಂದ ಕೊಪ್ಪ ಯಡಗೆರೆ ಸೌಹಾರ್ದ ಸಹಕಾರ ಸಂಘ ಕುದುರೆಗುಂಡಿ ಪ್ರೌಢ ಶಾಲೆಗೆ ಯುವ ಆವೃತ್ತಿ ನೀಡುತ್ತಾ ಬಂದಿದೆ. ನಾವು ಉಚಿತವಾಗಿ ನೀಡಿದ ಕನ್ನಡ ಪ್ರಭ ಯುವ ಆವೃತ್ತಿಯನ್ನು ಪ್ರತಿ ದಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಓದಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ಪತ್ರಿಕೆಯ ಎನ್.ಆರ್.ಪುರ ತಾಲೂಕು ವರದಿಗಾರ ಯಡಗೆರೆ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್.ಎಸ್.ಎಲ್.ಸಿ. ಮಕ್ಕಳಿಗೆ ಅನುಕೂಲವಾಗುವ ದೃಷ್ಠಿಯಿಂದ ಕನ್ನಡಪ್ರಭ ಪತ್ರಿಕೆಯು ಯುವ ಆವೃತ್ತಿಯನ್ನು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ. ಯುವ ಆವೃತ್ತಿಯಲ್ಲಿ ಎಸ್.ಎಸ್.ಎಲ್.ಸಿ ಗೆ ಸಂಬಂಧಪಟ್ಟಂತೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮಾರ್ಗ ಸೂಚಿಗಳಿವೆ. ಪ್ರತಿ ನಿತ್ಯ ದಿನಪತ್ರಿಕೆ ಓದುತ್ತಾ ಬಂದರೆ ಪ್ರಚಲಿತ ವಿಷಯ, ರಾಜ್ಯ, ದೇಶ , ವಿದೇಶಗಳ ಸುದ್ದಿ ತಿಳಿಯಲಿದೆ.ಟಿ.ವಿ. ಮೊಬೈಲ್ ಬಂದಿದ್ದರೂ ಈಗಲೂ ಕನ್ನಡ ದಿನಪತ್ರಿಕೆಗಳೇ ನಿಕರ ವಾದ ಸುದ್ದಿ ನೀಡುತ್ತಿದೆ ಎಂದರು.

ಕುದುರೆಗುಂಡಿ ಕೆಪಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಧನಂಜಯ ಮೇಧೂರ ಮಾತನಾಡಿ, ಕನ್ನಡಪ್ರಭ ದಿನ ಪತ್ರಿಕೆಯು ಸುದ್ದಿಯ ಜೊತೆಗೆ ಸಮಾಜ ಮುಖಿ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಬೇರೆ,ಬೇರೆ ಅಭಿರುಚಿ ಇರುತ್ತದೆ. ನಿಮ್ಮ ಅಭಿರುಚಿಗೆ ತಕ್ಕಂತೆ ಕನ್ನಡ ದಿನಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಓದಬೇಕು.ಇದರಿಂದ ಭಾಷಾ ಜ್ಞಾನ, ಕೌಸಲ್ಯ ಬೆಳೆಯಲಿದೆ. ದಿನ ಪತ್ರಿಕೆಗಳಲ್ಲಿ ಶಿಕ್ಷಣ, ಸಿನಿಮಾ, ಕ್ರೀಡೆ, ವಾಣಿಜ್ಯ, ವಿಜ್ಞಾನ ಸೇರಿದಂತೆ ಹಲವಾರು ವಿಷಯಗಳಿರುತ್ತದೆ.ಪ್ರತಿ ನಿತ್ಯ ಕನ್ನಡಪ್ರಭ ಯುವ ಆವೃತ್ತಿ ಓದಿದರೆ ಪರೀಕ್ಷೆಯಲ್ಲೂ ಅಂಕ ಹೆಚ್ಚಳವಾಗಲಿದ್ದು ನಮ್ಮ ಶಾಲೆಗೂ ಉತ್ತಮ ಹೆಸರು ಬರಲಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕುದುರೆಗುಂಡಿ ಕೆಪಿಎಸ್ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಪಾಪಣ್ಣ ವಹಿಸಿದ್ದರು .ವೇದಿಕೆಯಲ್ಲಿ ದೈಹಿಕ ಶಿಕ್ಷಕ ಪ್ರಕಾಶ್ ಇದ್ದರು.ಇದೇ ಸಂದರ್ಭದಲ್ಲಿ ಕನ್ನಡಪ್ರಭ ಯುವ ಆವೃತ್ತಿ ಪ್ರಾಯೋಜಕತ್ವ ವಹಿಸಿರುವ ಯಡಗೆರೆ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ರಾಮಣ್ಣ ಭಂಡಾರಿ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಕು.ಶ್ರೇಯಾ ಹಾಗೂ ಪ್ರಣಮ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ವಾಣಿ ಸ್ವಾಗತಿಸಿದರು.ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.