ವಿದ್ಯಾರ್ಥಿಗಳು ರಾಜೀವ್‌ರ ಆದರ್ಶ ಹೊಂದಬೇಕು: ಮಕ್ಕಳ ಸಾಹಿತ್ಯ ಪರಿಷತ್ತಿನ ಚ.ನಾ.ಅಶೋಕ್‌

| Published : Mar 05 2024, 01:40 AM IST / Updated: Mar 05 2024, 01:41 AM IST

ವಿದ್ಯಾರ್ಥಿಗಳು ರಾಜೀವ್‌ರ ಆದರ್ಶ ಹೊಂದಬೇಕು: ಮಕ್ಕಳ ಸಾಹಿತ್ಯ ಪರಿಷತ್ತಿನ ಚ.ನಾ.ಅಶೋಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ರಾಜೀವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ರಾಜೀವ್ ಟೆಕ್ ಸ್ಪಾರ್ಕ್ ವಾರ್ಷಿಕ ದಿನಾಚರಣೆಯನ್ನು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚ.ನಾ ಅಶೋಕ್ ಉದ್ಘಾಟಿಸಿದರು.

ದಿನಾಚರಣೆ । ರಾಜೀವ್ ಟೆಕ್ ಸ್ಪಾರ್ಕ್ ವಾರ್ಷಿಕೋತ್ಸವಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆ ಮತ್ತು ರಾಜ್ಯದಲ್ಲಿ ಪ್ರಖ್ಯಾತಿ ಗಳಿಸಿ ಜನಮಾನಸದಲ್ಲಿ ಇನ್ನೂ ಜೀವಂತವಾಗಿರುವ ಡಾ. ವಿ ರಾಜೀವ್ ರವರನ್ನು ಆದರ್ಶಪ್ರಾಯರಾಗಿ ಇಟ್ಟುಕೊಂಡು ಇಂದಿನ ವಿದ್ಯಾರ್ಥಿಗಳು ಬೆಳೆದು ದೇಶದ ಸತ್ಪ್ರಜೆಗಳಾಗಬೇಕು ಎಂದು ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚ.ನಾ ಅಶೋಕ್ ಸಲಹೆ ನೀಡಿದರು.

ನಗರದ ರಾಜೀವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ರಾಜೀವ್ ಟೆಕ್ ಸ್ಪಾರ್ಕ್ ವಾರ್ಷಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಡಾ. ವಿ. ರಾಜೀವ್ ರವರು ಒಂದು ಕುಗ್ರಾಮದಿಂದ ಬಡ ಕುಟುಂಬವೊಂದರಲ್ಲಿ ಜನಿಸಿ ವ್ಯೆದ್ಯಕೀಯ ಕ್ಷೇತ್ರ, ವ್ಯೆದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಾವಿರಾರು ಮಕ್ಕಳ ಭವಿಷ್ಯವನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದಾರೆ ಎಂದು ಹೇಳಿದರು.

ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಸಾವಿರಾರು ಕುಟುಂಬಗಳು ಜೀವನ ನಡೆಸಲು ರಾಜೀವ್‌ ಅನುಕೂಲ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಹಾಸನ ಜಿಲ್ಲೆಯಲ್ಲಿ ಕ್ರಾಂತಿಯನ್ನೇ ಮಾಡಿ ಸಮಾಜದ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಮುಖ್ಯ ಅತಿಥಿ ರಾಜೀವ್ ಪಾಲಿಟೆಕ್ನಿಕ್ ಕಾಲೇಜಿನ ಅಲ್ಯುಮಿನಿ ಶರತ್ ಬಿ.ಎನ್. ಮಾತನಾಡಿ, ‘ಈ ಕಾಲೇಜು ನನಗೆ ನೀಡಿದ ಗುಣಮಟ್ಟದ ಶಿಕ್ಷಣವೇ ನಾನು ಇಂದು ಜ್ಯೂನಿಯರ್ ಎಂಜಿನಿಯರ್ ಆಗಿ ಸರ್ಕಾರಿ ಸೇವೆ ಮಾಡಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಆಟದ ಸಮಯದಲ್ಲಿ ಆಟ, ಓದಿನ ಸಮಯದಲ್ಲಿ ಓದಬೇಕು. ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ತಾವೂ ಸಹ ತಂದೆ, ತಾಯಿಗಳು ಕಂಡ ಕನಸನ್ನು ನನಸು ಮಾಡಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ ಎನ್ ರತ್ನ ಮಾತನಾಡಿ, ‘ನಮ್ಮ ಸಂಸ್ಥೆ ಉತ್ತಮ ಸೌಲಭ್ಯಗಳನ್ನು ಹೊಂದಿದ್ದು, ವಿದ್ಯಾರ್ಥಿಗಳು ಅತ್ಯುತ್ತಮವಾಗಿ ವಿದ್ಯಾಭ್ಯಾಸ ಮಾಡುವ ಮೂಲಕ ಡಾ. ವಿ ರಾಜೀವ್ ರವರು ಕಂಡ ಕನಸನ್ನು ನನಸು ಮಾಡಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಉಪಾಧ್ಯಕ್ಷ ಡಾ. ರಂಜಿತ್ ರಾಜೀವ್, ೨೦೨೩-೨೪ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಘೋಷಿಸಿದರು. ಈ ಪ್ರಶಸ್ತಿಯನ್ನು ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಹರ್ಷ ಬಿ. ತಮ್ಮದಾಗಿಸಿಕೊಂಡರು. ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿರುವ ಎರಡನೇ ವರ್ಷದ ಎಲೆಕ್ಟ್ರಿಕಲ್ ವಿಭಾಗದ ಲೋಹಿತ್ ಪಟೇಲ್ ಅವರನ್ನು ಕಾಲೇಜಿನ ಪ್ರಾಂಶುಪಾಲ ಡಾ. ಶಂಕರೇಗೌಡ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ನಂತರ ವಿದ್ಯಾರ್ಥಿಗಳು ಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಮಾರಂಭವನ್ನು ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು ಸಾಕ್ಷೀಕರಿಸಿದರು. ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ಇತರ ಅಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು. ರಾಜೀವ್ ಟೆಕ್ ಸ್ಪಾರ್ಕ್ ವಾರ್ಷಿಕ ದಿನಾಚರಣೆಯನ್ನು ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತ, ಮಕ್ಕಳ ಸಾಹಿತ್ಯ ಪರಿಷಿತ್ತಿನ ಅಧ್ಯಕ್ಷ ಚ.ನಾ ಅಶೋಕ್ ಉದ್ಘಾಟಿಸಿದರು. ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ಅಧ್ಯಾಪಕರು, ವಿದ್ಯಾರ್ಥಿಗಳಿದ್ದರು.