ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನದ ಸದುಪಯೋಗ ಪಡೆಯಬೇಕು: ಟಿ.ಡಿ. ರಾಜೇಗೌಡ

| Published : Jan 07 2024, 01:30 AM IST

ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನದ ಸದುಪಯೋಗ ಪಡೆಯಬೇಕು: ಟಿ.ಡಿ. ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪದ ಕಮ್ಮರಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿದ ಶಾಸಕ ರಾಜೇಗೌಡ ಸರ್ಕಾರ ಶಿಕ್ಷಣಕ್ಕೆ ಕೋಟ್ಯಂತರ ರು. ಹಣ ವ್ಯಯಮಾಡುತ್ತಿದೆ. ಪೋಷಕರು ಕಷ್ಟಪಟ್ಟು ನಿಮ್ಮನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಅದಕ್ಕೆಲ್ಲಾ ಸಾರ್ಥಕತೆ ಬರಬೇಕೆಂದರೆ ವಿದ್ಯಾರ್ಥಿಗಳಾದ ನೀವು ಶಿಸ್ತು ಸಂಯಮದೊಂದಿಗೆ ವಿದ್ಯೆ ಕಲಿತು ವಿದ್ಯಾವಂತರಾಗಬೇಕು ಎಂದು ತಿಳಿಸಿದರು.

- ಕಮ್ಮರಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ, ಕಾಲೇಜು ವಾರ್ಷಿಕೋತ್ಸವ

ಕನ್ನಡಪ್ರಭ ವಾರ್ತೆ, ಕೊಪ್ಪ

ಪ್ರಸ್ತುತ ಕಾಲಘಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ನಾಗಾಲೋಟದಲ್ಲಿ ಓಡುತ್ತಿದೆ. ಪದವಿಪೂರ್ವ ಹಂತ ಮುಗಿದ ಮೇಲೆ ಉನ್ನತ ವ್ಯಾಸಂಗಕ್ಕೆ, ಉದ್ಯೋಗಕ್ಕೆ ಆನ್‌ಲೈನ್‌ನಲ್ಲಿ ಮಾಹಿತಿಗಳು ಲಭ್ಯವಿರುತ್ತದೆ. ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ತಾಲೂಕಿನ ಕಮ್ಮರಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಶಿಕ್ಷಣಕ್ಕೆ ಕೋಟ್ಯಂತರ ರು. ಹಣ ವ್ಯಯಮಾಡುತ್ತಿದೆ. ಪೋಷಕರು ಕಷ್ಟಪಟ್ಟು ನಿಮ್ಮನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಅದಕ್ಕೆಲ್ಲಾ ಸಾರ್ಥಕತೆ ಬರಬೇಕೆಂದರೆ ವಿದ್ಯಾರ್ಥಿಗಳಾದ ನೀವು ಶಿಸ್ತು ಸಂಯಮದೊಂದಿಗೆ ವಿದ್ಯೆ ಕಲಿತು ವಿದ್ಯಾವಂತರಾಗಬೇಕು. ತಂದೆ ತಾಯಿ, ಬೋಧಕರು, ಹಿರಿಯರಿಗೆ ಗೌರವ ಕೊಡಬೇಕು. ಆಗ ಮಾತ್ರ ದೇಶದ ಉತ್ತಮ ಪ್ರಜೆಗಳಾಗುತ್ತೀರಿ " ಎಂದು ಕಿವಿಮಾತು ಹೇಳಿದರು.

"ವಿದ್ಯೆ ಇಲ್ಲದವರೂ ಕ್ರೀಡೆ, ಸಂಗೀತ ಮುಂತಾದ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆಗೆ ಅವಕಾಶ ಇದೆ. ನಮ್ಮ ಸರ್ಕಾರದಿಂದ ನಾವು ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ರಸ್ತೆ, ಕ್ರೀಡಾಂಗಣ, ಶೌಚಾಲಯಗಳಿಗೂ ಅನುದಾನ ಕೊಟ್ಟಿದ್ದೇವೆ. ಕಮ್ಮರಡಿ, ಹರಿಹರಪುರ ರಸ್ತೆ ಅಗಲೀಕರಣ, ಸೇತುವೆ ಅಭಿವೃದ್ಧಿ, ಕಮ್ಮರಡಿ ದೇವಾಲಯ, ಬೀದಿದೀಪ ಮುಂತಾದವುಗಳಿಗೆ ಸಾಕಷ್ಟು ಅನುದಾನ ನೀಡಿದ್ದೇವೆ ಮುಂದೆಯೂ ನೀಡುತ್ತೇವೆ " ಎಂದರು.

ಮೈಸೂರಿನಲ್ಲಿ ಸರ್ವೆ ಇಲಾಖೆ ಜೆಡಿಎಲ್ಆರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಚಾವಲ್ಮನೆ ರಮೇಶ್ ಸಿ.ಎಸ್. ಮಾತನಾಡಿ ಕೊರೋನಾ ಮುಂತಾದ ಕಾರಣಗಳಿಂದ ಮಕ್ಕಳನ್ನು ಶಾಲೆಗೆ ಪೋಷಕರು ಮಕ್ಕಳನ್ನು ಕಳುಹಿಸಲು ಭಯ ಪಡುತ್ತಿರು ವುದರಿಂದ ಕಡಿಮೆ ಖರ್ಚಿನಲ್ಲಿ ಡಿಜಿಟಲ್ ಲೈಬ್ರರಿಗಳ ಸೌಲಭ್ಯ ಪಡೆಯಬೇಕು. ಸಿಇಟಿ ಕೋಚಿಂಗ್ ಬಗ್ಗೆ ಶಾಲೆಗಳು ಹೆಚ್ಚಿನ ಆಸ್ಥೆ ವಹಿಸಬೇಕು. ಕಂಪ್ಯೂಟರ್ ಬ್ರಾಂಚ್ ತೆರೆದು ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೂ ಕಂಪ್ಯೂಟರ್ ಜ್ಞಾನ ನೀಡಬೇಕು. ಮಕ್ಕಳಿಗೆ ಕ್ರೀಡಾ ತರಬೇತಿ ನೀಡಬೇಕು. ಪೋಷಕರು ದಿನದ 24 ಗಂಟೆಯೂ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಕಾಲೇಜು ಪ್ರಾಚಾರ್ಯರಾದ ಗಾಯತ್ರಿ ಕೆ.ಎನ್., ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಕೆ.ಭಾಸ್ಕರ್ಯು, ಎಸ್. ಶಿವಪ್ಪ, ಕೆ.ಕೆ.ಸಾಯಿನಾಥ್, ಗ್ರಾಪಂ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ವಾಸುದೇವ ಆಚಾರ್, ಸದಸ್ಯರಾದ ಕುಂಬ್ರಕೋಡು ನಾಗಪ್ಪ, ಕೆ.ಪಿ.ರಾಜಶೇಖರ್, ಲತಾ ಶ್ರೀನಿವಾಸ್, ಪ್ರಶಾಂತ್ ಎಚ್.ಕೆ., ಚಾವಲ್ಮನೆ ಸುರೇಶ್ ನಾಯಕ್, ಶಿಕ್ಷಕರಾದ ನಾಗಶ್ರೀ, ವಿಂಧ್ಯ, ಉಮೇಶ್, ರಾಜು, ನಾಗೇಶ್, ಸತೀಶ್, ಧರಣೇಶ್, ವಿಶ್ವನಾಥ ಜೊಯಿಸ್, ಪದ್ಮಾವತಿ, ಸುರೇಶ್ ಮುಂತಾದವರಿದ್ದರು.