ವಿದ್ಯಾರ್ಥಿಗಳು ಕೇವಲ ಪಠ್ಯಕ್ಕಷ್ಟೇ ಸೀಮಿತವಾಗದೇ, ತಮ್ಮಲ್ಲಿ ಅಡಗಿರುವ ವಿಭಿನ್ನವಾದ ಜ್ಞಾನ, ಕೌಶಲಗಳನ್ನು ಪ್ರತಿಭಾ ಕಾರಂಜಿಯಂತಹ ವೇದಿಕೆಗಳ ಮೂಲಕ ಪ್ರಚುರಪಡಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರು: ವಿದ್ಯಾರ್ಥಿಗಳು ಕೇವಲ ಪಠ್ಯಕ್ಕಷ್ಟೇ ಸೀಮಿತವಾಗದೇ, ತಮ್ಮಲ್ಲಿ ಅಡಗಿರುವ ವಿಭಿನ್ನವಾದ ಜ್ಞಾನ, ಕೌಶಲಗಳನ್ನು ಪ್ರತಿಭಾ ಕಾರಂಜಿಯಂತಹ ವೇದಿಕೆಗಳ ಮೂಲಕ ಪ್ರಚುರಪಡಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ತಾಲೂಕಿನ ದೂಪದಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಎತ್ತಿನಹಳ್ಳಿ ಎಂ.ಕೆ. ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತೆ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ರೂಪಿಸಿದೆ. ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕಲು ಇದೊಂದು ಉತ್ತಮವೇದಿಕೆಯಾಗಿದೆ. ಸ್ಪರ್ಧಾ ಮನೋಭಾವ ಹೆಚ್ಚಿಸಿ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗಿದೆ ಎಂದರು. ತೀರ್ಪುಗಾರರು ತಾರತಮ್ಯ ನ್ಯಾಯಯುತ ತೀರ್ಪು ಪ್ರಕಟಿಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಸೂಚನೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಸುರೇಶಕುಮಾರ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಪಾಲ್ಗೊಂಡು ವಿಜೇತರಾಗಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ವಿವಿಧ ವೇದಿಕೆಗಳ ಮೂಲಕ ಹೆಸರು ಗಳಿಸಿದ್ದಾರೆ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಬುರಡಿಕಟ್ಟಿ, ಮುಖ್ಯ ಶಿಕ್ಷಕ ಎಸ್.ಬಿ. ಗುಬ್ಬೇರ, ನೇತ್ರಾ ಹೆಗ್ಗೇರಿ, ಲೋಕೇಶ ಹರಿಜನ, ಕೋಟೇಶ ಹರಿಜನ, ಪರಮೇಶಪ್ಪ ಅಂಗಡಿ, ಶಿವರಾಜ ಮಡಿವಾಳರ, ವಿಜಯಕುಮಾರ ಡಿ., ಅರುಣಕುಮಾರ ಎಂ., ಸತೀಶ ಅಂಗಡಿ, ಷಣ್ಮುಖಪ್ಪ ಹೋರಿಹೋಳಿ, ಲಕ್ಷ್ಮೀ ಹೋರಿಹೋಳಿ, ಹೊನ್ನಮ್ಮ ಮಾದರ, ನಿರ್ಮಲಾ ದೊಡ್ಡನಿ, ಶೋಭಾ ತಳವಾರ, ಸುಮಾ ಅಂಗಡಿ, ನೇತ್ರಾ ಪಾಟೀಲ, ಭಾರತಿ ಮಾದರ, ಕಲ್ಪನಾ ಆರಾಧ್ಯಮಠ, ಬಸವರಾಜ ಗೊಡಚಿಕೊಂಡ ರಾಜು ವಿಜಯಕಯಮಾರ ದಾನಮ್ಮನವರ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.