ವಿದ್ಯಾರ್ಥಿಗಳು ಗುರು ಹಿರಿಯರಿಗೆ ಭಕ್ತಿ ಸಮರ್ಪಿಸಬೇಕು: ಪ್ರಶಾಂತ್ ಕಿವಿಮಾತು

| Published : Jul 08 2024, 12:36 AM IST

ವಿದ್ಯಾರ್ಥಿಗಳು ಗುರು ಹಿರಿಯರಿಗೆ ಭಕ್ತಿ ಸಮರ್ಪಿಸಬೇಕು: ಪ್ರಶಾಂತ್ ಕಿವಿಮಾತು
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಗೆ ನಿಮ್ಮಿಂದಾಗುವ ಹಾಗೂ ಶಾಲೆಗೆ ಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಬೇಕು. ಹಳೆಯ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸಿ ಶಾಲೆ ಅಭಿವೃದ್ಧಿ ಪಡಿಸಬೇಕು. ವಿದ್ಯಾರ್ಥಿಗಳಿಗೆ ಪಿತೃದೇವೋಭವ, ಮಾತೃದೇವೋಭವ , ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ ಎಂಬ ನೀತಿ ಪಾಠವನ್ನು ಅವರಿಂದಲೇ ಹೇಳಿಸ ಸದಾ ನೀವು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಿಮಗೆ ವಿದ್ಯೆ ಕಲಿಸಿದ ಗುರುಗಳು ಹಾಗೂ ಪೋಷಕರಿಗೂ ಭಕ್ತಿ ಸಮರ್ಪಿಸಿದರೆ ಮಾತ್ರ ಮುಂದಿನ ಜೀವನ ಉತ್ತಮವಾಗಿರಲು ಸಾಧ್ಯ ಎಂದು ಹಲಗೂರು ನಾಗರಿಕ ಹಿತಾರಕ್ಷಣಾ ಸಮಿತಿ ಸದಸ್ಯ ಪ್ರಶಾಂತ್ ಕಿವಿಮಾತು ಹೇಳಿದರು.

ಮಾರಗೌಡನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 584 ವಿದ್ಯಾರ್ಥಿಗಳಿಗೆ ಹಲಗೂರು ನಾಗರಿಕ ಹಿತ ರಕ್ಷಣಾ ಸಮಿತಿ ವತಿಯಿಂದ ಉಚಿತವಾಗಿ ನೋಟ್ ಬುಕ್ ವಿತರಿಸಿ ಮಾತನಾಡಿ, ನೀವು ವ್ಯಾಸಂಗ ಮಾಡಿದ ಶಾಲೆಯನ್ನು ಎಂದಿಗೂ ಮರೆಯಬಾರದು. ಮುಂದಿನ ದಿನಗಳಲ್ಲಿ ನೀವು ಉನ್ನತ ಹುದ್ದೆಯಲ್ಲಿ ಇದ್ದಾಗ ನಿಮ್ಮ ಶಾಲೆಗೆ ನಿಮ್ಮ ಪೋಷಕರನ್ನು ಕರೆತಂದು ನಾನು ವ್ಯಾಸಂಗ ಮಾಡಿದ ಶಾಲೆ ಎಂದು ತಿಳಿಸಬೇಕು ಎಂದರು.

ಶಾಲೆಗೆ ನಿಮ್ಮಿಂದಾಗುವ ಹಾಗೂ ಶಾಲೆಗೆ ಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಬೇಕು. ಹಳೆಯ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸಿ ಶಾಲೆ ಅಭಿವೃದ್ಧಿ ಪಡಿಸಬೇಕು. ವಿದ್ಯಾರ್ಥಿಗಳಿಗೆ ಪಿತೃದೇವೋಭವ, ಮಾತೃದೇವೋಭವ , ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ ಎಂಬ ನೀತಿ ಪಾಠವನ್ನು ಅವರಿಂದಲೇ ಹೇಳಿಸ ಸದಾ ನೀವು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ಟ್ರಸ್ಟಿನ ಖಜಾಂಜಿ ಎಂ.ಅಶೋಕ್ ಕುಮಾರ್ ಮಾತನಾಡಿ, ನಮ್ಮ ಟ್ರಸ್ಟಿನ ವತಿಯಿಂದ ಪ್ರತಿ ವರ್ಷವೂ ಹಲಗೂರು ಹೋಬಳಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಹಾಗೂ ಶಾಲೆಗೆ ಬೇಕಾದ ಸಾಮಾಗ್ರಿಗಳನ್ನು ನೀಡುತ್ತಿದ್ದೇವೆ. ಇದನ್ನು ಸದ್ಬಳಕೆ ಮಾಡಿಕೊಂಡು ಜೀವನವನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಎ.ಎಸ್.ದೇವರಾಜ್, ಎಚ್.ಸಿ.ನಾಗರಾಜು, ದೇವರಾಜು, ಮುಖ್ಯ ಶಿಕ್ಷಕಿ ಶಕುಂತಲಾ, ಶಿಕ್ಷಕರಾದ ರವಿ, ಮಹೇಶ್ ಸೇರಿ ಎಲ್ಲಾ ಶಿಕ್ಷಕರು ಇದ್ದರು.