ವಿದ್ಯಾರ್ಥಿಗಳು ಗಣಿತ ಕಲಿಕೆಗೆ ಹೆಚ್ಚಿನ ಗಮನ ನೀಡಬೇಕು: ಪ್ರವೀಣ ಪೂಜಾರಿ

| Published : Sep 15 2024, 01:50 AM IST

ವಿದ್ಯಾರ್ಥಿಗಳು ಗಣಿತ ಕಲಿಕೆಗೆ ಹೆಚ್ಚಿನ ಗಮನ ನೀಡಬೇಕು: ಪ್ರವೀಣ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಗಣಿತ ಮನುಷ್ಯನ ಬದುಕಿನ ದೈನಂದಿನ ಚಟುವಟಿಕೆಗೆ ಅಗತ್ಯವಾದ ವಿಷಯವಾಗಿದೆ. ವ್ಯವಹಾರ, ಲೆಕ್ಕಾಚಾರಗಳು ಎಲ್ಲದಕ್ಕೂ ಗಣಿತ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ದೈನಂದಿನ ಚಟುವಟಿಕೆ, ಅಧ್ಯಯನಗಳ ದೃಷ್ಟಿಯಿಂದ ಗಣಿತ ಕಲಿಕೆಗೆ ಹೆಚ್ಚಿನ ಗಮನ ನೀಡಬೇಕು ಎಂದು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ ಪೂಜಾರಿ ಸಲಹೆ ನೀಡಿದರು.

ಕಾಂಚೀನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ ಮಟ್ಟದ ಗಣಿತ ಸ್ಪರ್ಧೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಗಣಿತ ಮನುಷ್ಯನ ಬದುಕಿನ ದೈನಂದಿನ ಚಟುವಟಿಕೆಗೆ ಅಗತ್ಯವಾದ ವಿಷಯವಾಗಿದೆ. ವ್ಯವಹಾರ, ಲೆಕ್ಕಾಚಾರಗಳು ಎಲ್ಲದಕ್ಕೂ ಗಣಿತ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ದೈನಂದಿನ ಚಟುವಟಿಕೆ, ಅಧ್ಯಯನಗಳ ದೃಷ್ಟಿಯಿಂದ ಗಣಿತ ಕಲಿಕೆಗೆ ಹೆಚ್ಚಿನ ಗಮನ ನೀಡಬೇಕು ಎಂದು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ ಪೂಜಾರಿ ಸಲಹೆ ನೀಡಿದರು.

ತಾಲೂಕಿನ ಕಾಂಚೀನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಗಣಿತ ಕಲಿಕೆ ರೋಚಕತೆ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಮೂಡಿಸಿ ಕೊಳ್ಳಬೇಕು. ಗಣಿತ ಕೆಲವರಿಗೆ ಕಷ್ಟವೆಂದು ಕಂಡರೂ, ಆಸಕ್ತಿ ವಹಿಸಿ ಕಲಿತರೆ ಬಹಳ ಸುಲಭದ ವಿಷಯವಾಗಿದೆ.

ಗಣಿತದಲ್ಲಿನ ಲೆಕ್ಕಗಳು, ಸಮಸ್ಯೆಗಳು, ಸೂತ್ರಗಳು ಕಲಿಯುತ್ತಾ ಹೋದಷ್ಟು ಕಲಿಕೆ ಬಹಳ ಸುಲಭವಾಗುತ್ತದೆ. ಗಣಿತ ಕ್ಷೇತ್ರಕ್ಕೆ ಪ್ರಾಚೀನ ಭಾರತೀಯ ಕೊಡುಗೆ ಮಹತ್ತರವಾಗಿದೆ ಎಂದರು. ಗಣಿತ ಶಾಸ್ತ್ರಜ್ಞ ಭಾಸ್ಕರಾಚಾರ್ಯ ಗಣಿತ ಕ್ಷೇತ್ರದಲ್ಲಿ ಜಗತ್ತಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬಿ.ಆರ್.ಗಂಗಾಧರಪ್ಪ,ಬಿ.ಆರ್ ಸಿ ಸುಂದರೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶಿಲ್ಲ. ಮುಖ್ಯ ಶಿಕ್ಷಕ ರಾಜೀವ ಮತ್ತಿತತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗಣಿತ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

14 ಶ್ರೀ ಚಿತ್ರ 2-

ಶೃಂಗೇರಿ ತಾಲೂಕಿನ ಕಾಂಚಿನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾಮಕ್ಕಳ ಗಣಿತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.