ಯೋಧರಂತೆ ವಿದ್ಯಾರ್ಥಿಗಳು ಸಮಾಜ ಕಾಪಾಡಬೇಕು: ವಿಜಯರಾಮೇಗೌಡ

| Published : Apr 20 2025, 01:55 AM IST

ಯೋಧರಂತೆ ವಿದ್ಯಾರ್ಥಿಗಳು ಸಮಾಜ ಕಾಪಾಡಬೇಕು: ವಿಜಯರಾಮೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ಸ್ವರಾಜ್ಯದ ಕಲ್ಪನೆಯೆ ಅತ್ಯಂತ ಸುಂದರವಾದದ್ದು. ನಗರ ಪ್ರದೇಶದ ಜನರಿಗಿಂತ ಅತಿ ಹೆಚ್ಚು ಸೌಲಭ್ಯ ವಂಚಿತರಾಗಿರುವ ಗ್ರಾಮೀಣ ಜನರ ಬಳಿಗೆ ತೆರಳಿ ಅವರಿಗೆ ಸೇವೆ ಒದಗಿಸಬೇಕು. ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸಲು ಗ್ರಾಮೀಣರ ಜೀವನದ ಬಗೆಗೆ ಗೌರವ ಬರುವ ರೀತಿಯ ಶಿಕ್ಷಣ ಕೊಡಬೇಕಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳು ಸಮಾಜವನ್ನು ಕಾಪಾಡುವ ಗಡಿಕಾಯುವ ಯೋಧರಂತೆ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ, ಮಿತ್ರ ಫೌಂಡೇಷನ್ ಅಧ್ಯಕ್ಷ ಬೂಕನಕೆರೆ ವಿಜಯರಾಮೇಗೌಡ ಕರೆ ನೀಡಿದರು.

ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮಾತನಾಡಿ, ಯೋಧರು ದೇಶದ ಗಡಿ ಕಾಯುತ್ತಿದ್ದರೆ, ಶಿಬಿರದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರು ಕೂಡಾ ಸಮಾಜವನ್ನು ಕಾಯುವ ಯೋಧರಂತೆ ಎಂದರು.

ಮಹಾತ್ಮ ಗಾಂಧಿಯವರ ಮಹಾತ್ವಕಾಂಕ್ಷೆಯ ಎನ್‌ಎಸ್‌ಎಸ್ ಶಿಬಿರವು ದೇಶದಾದ್ಯಂತ ಕೋಟ್ಯಂತರ ನಾಯಕರನ್ನು ಸೃಷ್ಟಿಸಿದೆ. ನಾಯಕತ್ವವು ಸುಖಾ ಸುಮ್ಮನೆ ಬರುವಂತಹದ್ದಲ್ಲ. ಅದಕ್ಕಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡಾ ಗೌರವಿಸುವ ಪ್ರೀತಿಸುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.

ಗ್ರಾಮ ಸ್ವರಾಜ್ಯದ ಕಲ್ಪನೆಯೆ ಅತ್ಯಂತ ಸುಂದರವಾದದ್ದು. ನಗರ ಪ್ರದೇಶದ ಜನರಿಗಿಂತ ಅತಿ ಹೆಚ್ಚು ಸೌಲಭ್ಯ ವಂಚಿತರಾಗಿರುವ ಗ್ರಾಮೀಣ ಜನರ ಬಳಿಗೆ ತೆರಳಿ ಅವರಿಗೆ ಸೇವೆ ಒದಗಿಸಬೇಕು. ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸಲು ಗ್ರಾಮೀಣರ ಜೀವನದ ಬಗೆಗೆ ಗೌರವ ಬರುವ ರೀತಿಯ ಶಿಕ್ಷಣ ಕೊಡಬೇಕಾಗಿದೆ. ಇಂತಹ ಶಿಕ್ಷಣವನ್ನು ಈ ಶಿಬಿರದ ಮೂಲಕ ಕಲಿಯು ಅತ್ಯುತ್ತಮ ಯೋಜನೆಯಾಗಿದೆ ಎಂದರು.

ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳ ಕಾರ್ಯಚಟುವಟಿಕೆಗಳು ಬೂಕನಕೆರೆ ಗ್ರಾಮದಲ್ಲಿ ಸಾಕಾರಗೊಂಡಿವೆ. ಇದಕ್ಕೆ ಗ್ರಾಮದ ಎಲ್ಲಾ ಮುಖಮಡರ ಸಹಕಾರವು ಕೂಡಾ ಮುಖ್ಯವಾಗಿದೆ. ಅದರಲ್ಲಿಯೂ ಸಮಾಜ ಸೇವಕ ವಿಜಯರಾಮೇಗೌಡ ನಮ್ಮ 120ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಟ್ರ್ಯಾಕ್ ಸೂಟ್ ಮತ್ತು ಹ್ಯಾಟ್‌ಗಳಿಗಾಗಿ ಲಕ್ಷಕ್ಕೂ ಹೆಚ್ಚು ಹಣವನ್ನು ವಿನಿಯೋಗಿಸಿದ್ದಾರೆ. ಇವರಿಗೆ ಕಾಲೇಜು ಎಂದೆಂದಿಗೂ ಋಣಿಯಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪತ್ರಾಂಕಿತ ವ್ಯವಸ್ಥಪಕ ಬಿ.ಎ.ಮಂಜುನಾಥ್, ಸಹಾಯಕ ಪ್ರಾಧ್ಯಾಪಕ ಡಾ.ಜಯಕೀರ್ತಿ, ಕೆಡಿಪಿ ಸದಸ್ಯ ಮಲ್ಲಿಕಾರ್ಜುನ್, ವಿಎಸ್‌ಎಸ್‌ಎನ್ ನಿರ್ದೇಶಕ ಅಡಿಕೆ ಸ್ವಾಮಿಗೌಡ, ಮಹೇಶ್, ಗ್ರಂಥಾಲಯ ಅಧಿಕಾರಿ ಮಂಜುನಾಥ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಬೂವನಹಳ್ಳಿ ಪ್ರಕಾಶ್, ಪುಷ್ಪಲತಾ, ಕಿರಣ್, ಆನಂದ್, ಉಪನ್ಯಾಸಕರಾದ ಟಿ.ಜೆ.ದೀಪಾ, ಉಮಾ, ಕಾಲೇಜಿನ ಆಡಳಿತ ವರ್ಗದ ಶಿವರಾಮು, ಮಂಜುನಾಥ್, ಅಭಿಲಾಷ್, ನಂದಿನಿ ಸೇರಿದಂತೆ ಹಲವರಿದ್ದರು.