ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಬೇಕು-ಬಣಕಾರ

| Published : Jun 13 2024, 12:50 AM IST

ಸಾರಾಂಶ

ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ವ್ಯಾಸಂಗ ಮಾಡಿ ವೈದ್ಯಕೀಯ ಸೇರಿದಂತೆ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸುವತ್ತ ಹೆಚ್ಚು ಗಮನ ನೀಡಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರು: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ವ್ಯಾಸಂಗ ಮಾಡಿ ವೈದ್ಯಕೀಯ ಸೇರಿದಂತೆ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸುವತ್ತ ಹೆಚ್ಚು ಗಮನ ನೀಡಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ತಮ್ಮ ನಿವಾಸದಲ್ಲಿ ಅಡ್ವೋಕೇಟ್ ಬಿ.ಜಿ. ಬಣಕಾರ ಸೋಶಿಯಲ್ ಟ್ರಸ್ಟ್ ಹಾಗೂ ಯು.ಬಿ. ಬಣಕಾರ ಅಭಿಮಾನಿ ಬಳಗದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಹಿರೇಕೆರೂರ ತಾಲೂಕಿನಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ನಗದು ಪ್ರೋತ್ಸಾಹ ನೀಡಿ ಸನ್ಮಾನಿಸಿ ಅವರು ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರಲ್ಲಿ ಮತ್ತಷ್ಟು ಶೈಕ್ಷಣಿಕ ಸಾಧನೆಗೆ ಉತ್ತೇಜನ ಸಿಗಲಿ ಹಾಗೂ ಅವರ ಸಾಧನೆಗೆ ಪ್ರೇರಣೆ ಸಿಗಲಿ ಎಂಬ ಸದುದ್ದೇಶದಿಂದ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಸಮಯ ವ್ಯರ್ಥ ಮಾಡದೇ ಗುರು ಹಿರಿಯರ ಮಾರ್ಗದರ್ಶನ ಪಡೆದು ಉನ್ನತ ವ್ಯಾಸಂಗಕ್ಕೆ ಸಜ್ಜುಗೊಳ್ಳಬೇಕು. ಈಗಿನಿಂದಲೇ ಉನ್ನತ ಕನಸು ಕಟ್ಟಿಕೊಂಡು ಅವುಗಳನ್ನು ಸಾಕಾರಗೊಳಿಸಲು ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ಐಎಎಸ್‌, ಕೆಎಎಸ್ ಸೇರಿದಂತೆ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸುವ ಜತೆಗೆ ಹಾಗೂ ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವಂತಾಗಬೇಕು ಎಂದರು.ನನ್ನ ಅಧಿಕಾರ ಅವಧಿಯಲ್ಲಿ ಶಿಕ್ಷಣ ಕ್ಷೇತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 6 ಕಡೆಗಳಲ್ಲಿ ಪ್ರೌಢಶಾಲೆಗಳ ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಹಾಗೂ ಈಗಾಗಲೇ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತೊಂದರೆಗಳು ಆಗದಂತೆ ಅತಿಥಿ ಶಿಕ್ಷಕರ ನೇಮಕಕ್ಕೂ ಸರಕಾರ ಆದೇಶಿಸಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ಅಡ್ವೋಕೇಟ್ ಬಿ.ಜಿ. ಬಣಕಾರ ಸೋಶಿಯಲ್ ಟ್ರಸ್ಟ್ ಹಾಗೂ ಯು.ಬಿ. ಬಣಕಾರ ಅಭಿಮಾನಿ ಬಳಗದ ವತಿಯಿಂದ ಪ್ರತಿ ವರ್ಷ ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ನಾವು ಅತೀ ಹೆಚ್ಚು ಅಂಕ ಪಡೆದಿದ್ದೇವೆ ಎಂದು ಬಿಗದೇ ಮುಂದಿನ ಶೈಕ್ಷಣಿಕ ಜೀವನದಲ್ಲಿ ಇನ್ನು ಅಧಿಕ ಸಾಧನೆ ಮಾಡುವತ್ತ ಗಮನ ಕೇಂದ್ರೀಕರಿಸುವ ಮೂಲಕ ತಾಲೂಕಿಗೆ ಕೀರ್ತೀ ತರುವಂತಹ ಸಾಧನೆ ಮಾಡಬೇಕು ಎಂದರು.ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ನಾಗಮ್ಮ ಬಿದರಿಕೊಪ್ಪ, ಸಿಂಧು ಕೋಣ್ತೆರ, ವೀಣಾ ಕೊಟ್ಟೂರ, ಸುಕನ್ಯಾ ಸುಂಕಾಫುರ, ಅನುಪಮಾ ಸಣ್ಮನಿ, ಅರ್ಚನಾ ಬೂದೇರ, ಜ್ಯೋತಿ ಮಸಲತ್ತಿ, ಪ್ರಗತಿ ಜಿ.ಡಿ., ರೇಣಕಾ ಗೌಡಗೇರಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸರ್ವಮಂಗಳ ಸಾಹುಕಾರ, ಗಾನಶ್ರೀ ದೇಸಾಯಿ, ಸ್ನೇಹಾ ಮರಿಗೌಡ್ರ, ಗಜೇಂದ್ರ ಪೂಜಾರ, ಅಂಕತಾ ಗಿರಿಯಣ್ಣನವರ, ಸುಧಾ ಮರಿಗೌಡ್ರ, ಬಿಬಿ ಖುಬಾರ ಮಕಾನ್ದಾರ್‌, ಆಸ್ಮಾ ಬುಕ್ಕಿಟ್ಟಗಾರ, ರೇಹನಾಬಾನು ಬೆಳಗಾವಿ ಅವರಿಗೆ ನಗದು ಪ್ರೋತ್ಸಾಹ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಭಾರತ ಸೇವಾದಳದ ರಾಜ್ಯ ಉಪಾಧ್ಯಕ್ಷ ಕೆ.ಡಿ. ದಿವೀಗಿಹಳ್ಳಿ, ಕೆಎಂಎಫ್‌ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಯು.ಬಿ. ಬಣಕಾರ ಅಭಿಮಾನಿ ಬಳಗದ ಅಧ್ಯಕ್ಷ ದತ್ತಾತ್ರೇಯ ರಾಯ್ಕರ್, ಕಾರ್ಯದರ್ಶಿ ಸಿದ್ದನಗೌಡ ನರೇಗೌಡ್ರ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಅಕ್ಷರ ದಾಸೋಹ ಅಧಿಕಾರಿ ಮಾರುತೆಪ್ಪ ಕೆ.ಎಚ್., ಸುಮಿತ್ರಾ ಪಾಟೀಲ, ವಿಜಯಶ್ರೀ ಬಂಗೇರ, ಸುಧಾ ಚಿಂದಿ, ರಜಿಯಾ ಅಸದಿ, ಕವಿತಾ ಹಾರ್ನಳ್ಳಿ, ಸನಾವುಲ್ಲಾ ಮಕಾನದಾರ, ಷಣ್ಮುಖಯ್ಯ ಮಳಿಮಠ, ಭೀಮನಗೌಡ ದೊಡ್ಡಗೌಡ್ರ, ವೀರನಗೌಡ ಬಿದರಿ, ನಾಗಪ್ಪ ಮುತ್ತಗಿ, ಜಗದೀಶ್ ಕಡೇಮನಿ, ರವಿ ಬಸನಗೌಡ್ರ, ಆಂಜನೇಯ ಆರ್.ಎಚ್., ಪ್ರಶಾಂತ ಹೆಡಿಯಾಲ, ರವಿ ನಾಯ್ಕರ್, ಸುರೇಶ ಕಲಾಲ್ ಸೇರಿದಂತೆ ಪಾಲಕರು ಇದ್ದರು.