ಸಮುದಾಯದಲ್ಲಿ ಹಲವು ವಿಶೇಷ ಪ್ರತಿಭೆಗಳಿವೆ. ಇದನ್ನು ಉಳಿಸಿಕೊಳ್ಳಲು ಅವಿರತ ಶಿಸ್ತು, ಸಮಯಪ್ರಜ್ಞೆ, ಅಗತ್ಯಕ್ಕೆ ತಕ್ಕಂತೆ ಮಿತ ಮಾತು, ಜಾಣ್ಮೆ ಇರಬೇಕು. ಮಕ್ಕಳಿಗೆ ಉತ್ತೇಜಿಸುವ ಪುರಸ್ಕಾರ ಹೆಚ್ಚು ನಡೆದಲ್ಲಿ ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ.
ಕಿಕ್ಕೇರಿ:
ಸಂಸ್ಕಾರ ಎನ್ನುವುದು ಬ್ರಾಹ್ಮಣಿಕೆಯಾಗಿದೆ. ವ್ಯಕ್ತಿತ್ವ ರೂಪಿಸಿಕೊಂಡು ವಿದ್ವತ್‌ನಿಂದ ಕೀರ್ತಿಶೇಷರಾಗಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಚನ್ನರಾಯಪಟ್ಟಣ ವಿಪ್ರ ನೌಕರ ಸಂಘ ಅಧ್ಯಕ್ಷ ಎಚ್.ಎಂ.ಶ್ರೀಕಂಠ ತಿಳಿಸಿದರು.ಪಟ್ಟಣದ ವಿಪ್ರ ಬಾಂಧವ ಸೇವಾ ಸಮಿತಿ ಸುಬ್ಬರಾಯಛತ್ರದಲ್ಲಿ ವಿಪ್ರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಗದು ಪ್ರೋತ್ಸಾಹ ಸಮಾರಂಭದಲ್ಲಿ ಮಾತನಾಡಿದರು.
ಸಮುದಾಯದಲ್ಲಿ ಹಲವು ವಿಶೇಷ ಪ್ರತಿಭೆಗಳಿವೆ. ಇದನ್ನು ಉಳಿಸಿಕೊಳ್ಳಲು ಅವಿರತ ಶಿಸ್ತು, ಸಮಯಪ್ರಜ್ಞೆ, ಅಗತ್ಯಕ್ಕೆ ತಕ್ಕಂತೆ ಮಿತ ಮಾತು, ಜಾಣ್ಮೆ ಇರಬೇಕು. ಮಕ್ಕಳಿಗೆ ಉತ್ತೇಜಿಸುವ ಪುರಸ್ಕಾರ ಹೆಚ್ಚು ನಡೆದಲ್ಲಿ ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.ಎಸ್ಸೆಸ್ಸೆಲ್ಸಿಯಿಂದ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಡಿಗ್ರಿ, ಮೆಡಿಕಲ್, ಎಂಜಿನಿಯರಿಂಗ್ ಓದುತ್ತಿರುವ ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ಗೌರವಿಸಿ ಉತ್ತೇಜಿಸಲಾಯಿತು. ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳು ತಮ್ಮ ಓದಿನ ಅನುಭವ ಹಂಚಿಕೊಂಡರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗೌರವಿಸಲಾಯಿತು.
ಕೇಶವ ನೇತ್ರಾಲಯದವರಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಮಾನಸ ಗಂಗೋತ್ರಿ ನಿವೃತ್ತ ಪ್ರೊ.ಕೃಷ್ಣಮೂರ್ತಿ, ಡಾ.ವಾಸುದೇವು, ಇಸ್ರೋ ಆಕಾಶ್ ಬಾಲಕೃಷ್ಣ, ಎ.ಎಸ್.ವೆಂಕಟರಮಣ, ನಾಗರಾಜು, ಶತಾಯುಷಿ ಕಿಕ್ಕೇರಿ ನಾಗಪ್ಪ, ಕಿಕ್ಕೇರಿ ಸಮಿತಿ ಕೆ.ಎಸ್. ಚಂದ್ರಶೇಖರಯ್ಯ, ಕೆ.ಬಿ. ವೆಂಕಟೇಶ್, ಮಹಬಲಶರ್ಮ, ಕೆ.ಎಸ್. ಪರಮೇಶ್ವರಯ್ಯ, ಮಧುಶರ್ಮ, ನಾಗರಾಜು ಭಾರ್ಗವ್, ಉಮಾ, ರೇಖಾ, ಶೈಲ ಭಾರ್ಗವ್, ಕೆ.ಎಸ್. ಅನಂತಸ್ವಾಮಿ, ಸುರಭಿಶರ್ಮ, ಶ್ರೀಹರಿ, ಸೀತಾರಾಮ್, ನಾಗೇಂದ್ರ, ಕೆ.ಎಸ್.ಪ್ರಭಾಕರ್ ಇದ್ದರು.ಸೆ.12ರಂದು ಜಿಲ್ಲೆಯ ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಮಂಡ್ಯ: ಜಿಲ್ಲೆಯ 6 ತಾಲೂಕುಗಳಲ್ಲಿ ಸೆ.12 ರಂದು ಬೆಳಗ್ಗೆ 9 ಗಂಟೆಗೆ ಆಯಾ ತಾಲೂಕು ಕ್ರೀಡಾಂಗಣದಲ್ಲಿ ಏಕಕಾಲದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ. ವಿವಿಧ ಕ್ರೀಡೆಗಳಾದ ಅಥ್ಲೆಟಿಕ್ಸ್, ವಾಲಿಬಾಲ್, ಖೋ ಖೋ, ಕಬಡ್ಡಿ, ಫುಟ್ಬಾಲ್ ಥ್ರೋಬಾಲ್, ಯೋಗ ಕ್ರೀಡೆಗಳು ನಡೆಯಲಿವೆ. ತಾಲೂಕು ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಆನ್‌ಲೈನ್ https://www.dasaracmcup.in ಮೂಲಕ ನೋಂದಣಿ ಮಾಡಿಕೊಳ್ಳಬಹುದು. ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸೆ.12 ರಂದು ಬೆಳಗ್ಗೆ 9 ಗಂಟೆಗೆ ಮಂಡ್ಯ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ-9449627810,9449301010,9739972472 ಅನ್ನು ಸಂಪರ್ಕಿಸಬಹುದು. ಮಳವಳ್ಳಿ ತಾಲೂಕಿನ ಕನಕದಾಸ ಕ್ರೀಡಾಂಗಣದಲ್ಲಿ ಭಾಗವಹಿಸುವ ಕ್ರೀಡಾಪಟಗಳು ಮೊ-9964979014, 7090017596, 8310970040 ಅನ್ನು, ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ಭಾಗವಹಿಸುವವರು ಮೊ-9880153684,7353097540ಅನ್ನು ಸಂಪರ್ಕಿಸಬಹುದು.ಪಾಂಡವಪುರ ತಾಲೂಕು ಕ್ರೀಡಾಂಗಣದಲ್ಲಿ ಭಾಗವಹಿಸುವವರು ಮೊ-9945261982, 9740797669 ಅನ್ನು, ನಾಗಮಂಗಲ ತಾಲೂಕು ಕ್ರೀಡಾಂಗಣದಲ್ಲಿ ಭಾಗವಹಿಸುವರು ಮೊ-9980303843,9880663171 ಅನ್ನು, ಕೆ. ಆರ್. ಪೇಟೆ ತಾಲೂಕು ಕ್ರೀಡಾಂಗಣದಲ್ಲಿ ಭಾಗವಹಿಸುವವರು ಮೊ-9916644007ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.