ಸಾರಾಂಶ
ಮಾದಕ ಪದಾರ್ಥಗಳು, ತಂಬಾಕು ಉತ್ಪನ್ನಗಳು ಮನುಷ್ಯನ ಜೀವನವನ್ನೇ ಕೊಲ್ಲುತ್ತವೆ. ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ಪೂರವಿರಬೇಕು ಎಂದು ಪೊಲೀಸ್ ಉಪ ನಿರೀಕ್ಷಕ ಮೋಹನ್ ರಾಜಣ್ಣ ಹೇಳಿದರು.
ಶೃಂಗೇರಿ: ಮಾದಕ ಪದಾರ್ಥಗಳು, ತಂಬಾಕು ಉತ್ಪನ್ನಗಳು ಮನುಷ್ಯನ ಜೀವನವನ್ನೇ ಕೊಲ್ಲುತ್ತವೆ. ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ಪೂರವಿರಬೇಕು ಎಂದು ಪೊಲೀಸ್ ಉಪ ನಿರೀಕ್ಷಕ ಮೋಹನ್ ರಾಜಣ್ಣ ಹೇಳಿದರು.
ಅವರು ಮೆಣಸೆ ಕೇಂದ್ರಿಯ ಸಂಸ್ಕೃತ ವಿದ್ಯಾಲಯದಲ್ಲಿ ಜಿಲ್ಲಾ ಪೋಲೀಸ್ ಇಲಾಖೆಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನ ಕುರಿತ ಮಾರ್ಗಸೂಚಿ ಕೈಪಿಡಿ ಹಸ್ತಾಂತರಿಸಿ ಮಾತನಾಡಿದರು.ಮಾದಕ ದ್ರವ್ಯಗಳ ದುರ್ಬಳಕೆ ಪ್ರಸ್ತುತ ಕಾಲದಲ್ಲಿ ಅತ್ಯಂತ ಗಂಭೀರ ಸವಾಲುಗಳಲ್ಲಿ ಒಂದಾಗಿದೆ. ಕ್ಷಣಿಕ ಸಂತೋಷ ನೀಡುವ ಇದರಿಂದ ಅತ್ಯಮೂಲ್ಯ ಬದುಕು ನಾಶವಾಗುತ್ತದೆ ಎಂದು ತಿಳಿಸಿದರು.
ನಶೆ, ಅಮಲು ಎಂಬುದು ದೈಹಿಕ ಅವಲಂಬನೆಗೆ ಮಾತ್ರ ಸೀಮಿತವಾಗಿಲ್ಲ. ಅದು ವ್ಯಕ್ತಿಯ ಮಾನಸಿಕ, ಆರ್ಥಿಕ, ಸಾಮಾಜಿಕ, ಅಸಮತೋಲನ ಉಂಟುಮಾಡುವ ಬಹುಮುಖ ದುರಂತವಾಗಿದೆ. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಚಿಂತನೆ, ನೈತಿಕತೆ, ಮಾನವೀಯತೆಯ ಮೇಲೆ ಅಪಾರ ಆಘಾತಕಾರಿ ಪರಿಣಾಮ ಬೀರುತ್ತದೆ. ಆದ್ದರಿಂದ ಯುವ ಜನಾಂಗ ಮಾದಕ ವಸ್ತುಗಳ ಬಳಕೆಯಿಂದ ದೂರವಿದ್ದು, ತಮ್ಮ ಬದುಕನ್ನು ರೂಪಿಸಿಕೊಂಡು ದೇಶದ, ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.ವಿದ್ಯಾರ್ಥಿಗಳ ಸುರಕ್ಷತೆ ಜೊತೆಗೆ ಉತ್ತಮ ಕಲಿಕಾ ವಾತಾವರಣ ರೂಪಿಸಲು ಪ್ರತಿ ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯ ವಿರೋಧಿ ಸಮಿತಿ ರಚಿಸಲಾಗುತ್ತದೆ. ಇದಕ್ಕೆ ಶಾಲಾ ಶಿಕ್ಷಕರು, ಕಾಲೇಜು ಪ್ರಾಧ್ಯಾಪಕರು ಪ್ರೋತ್ಸಾಹಿಸಿ ಸಮಾಜದ ಉನ್ನತೀಕರಣಕ್ಕೆ ಸಹಕರಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಕೇಂದ್ರದ ನಿರ್ದೇಶಕ ಸುಬ್ರಾಯ ವೈ ಭಟ್, ಗುರುರಾಜ್ ಭಟ್, ಗಣೇಶ್ ಈಶ್ವರ್ ಭಟ್ ಮತ್ತಿತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))