ವಿದ್ಯಾರ್ಥಿಗಳು ಮಾದಕದ್ರವ್ಯದಿಂದ ದೂರವಿರಲಿ: ರವೀಂದ್ರ ಎಂ.ಬಿ.

| Published : Jun 26 2024, 12:36 AM IST

ವಿದ್ಯಾರ್ಥಿಗಳು ಮಾದಕದ್ರವ್ಯದಿಂದ ದೂರವಿರಲಿ: ರವೀಂದ್ರ ಎಂ.ಬಿ.
Share this Article
  • FB
  • TW
  • Linkdin
  • Email

ಸಾರಾಂಶ

ಹದಿಹರೆಯದಲ್ಲಿ ನೂರಾರು ಆಕರ್ಷಣೆಗಳಿರುತ್ತವೆ. ಅವುಗಳನ್ನು ಮೀರಿ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕು. ಸೈಬರ್‌ ಅಪರಾಧ ಬಗ್ಗೆ ಎಚ್ಚರದಿಂದ ಇರಬೇಕು.

ದಾಂಡೇಲಿ: ವಿದ್ಯಾರ್ಥಿಗಳು ಮಾದಕದ್ರವ್ಯದಿಂದ ದೂರವಿದ್ದು, ಉತ್ತಮ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಬೇಕು. ಅಂದಾಗ ಭಾರತಕ್ಕೆ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ನಗರ ಪೊಲೀಸ್‌ ಠಾಣೆಯ ಪಿಎಸ್‌ಐ ರವೀಂದ್ರ ಎಂ.ಬಿ. ತಿಳಿಸಿದರು.

ಜಿಲ್ಲಾ ಪೊಲೀಸ್ ಇಲಾಖೆ ನಗರ ಪೊಲೀಸ್ ಠಾಣೆ ವತಿಯಿಂದ ಹಳೇ ದಾಂಡೇಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಸೋಮವಾರ ನಡೆದ ಮಾದಕದ್ರವ್ಯ ಸೇವನೆಯ ದುಷ್ಪರಿಣಾಮ ಜಾಗೃತಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹದಿಹರೆಯದಲ್ಲಿ ನೂರಾರು ಆಕರ್ಷಣೆಗಳಿರುತ್ತವೆ. ಅವುಗಳನ್ನು ಮೀರಿ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕು. ಸೈಬರ್‌ ಅಪರಾಧ ಬಗ್ಗೆ ಎಚ್ಚರದಿಂದ ಇರಬೇಕು. ಸಂಚಾರಿ ನಿಯಮ ಪಾಲನೆ ಮತ್ತು ಅಪ್ರಾಪ್ತರು ವಾಹನ ಚಲಾವಣೆಗೆ ಪಾಲಕರು ಅವಕಾಶ ನೀಡಬಾರದು. ಅದರಿಂದ ಆಗುವ ಕಾನೂನಿನ ಶಿಕ್ಷೆಯ ಬಗ್ಗೆ ತಿಳಿ ಹೇಳಿದರು.

ಎಎಸ್‌ಐ ನಾರಾಯಣ ರಾಥೋಡ ಮಾತನಾಡಿ, ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಕಂಡುಬಂದರೆ ಇಲಾಖೆಯ ಗಮನಕ್ಕೆ ತನ್ನಿ. ವಿದ್ಯಾರ್ಥಿನಿಯರಿಗೆ ಮಾನಸಿಕ, ದೈಹಿಕವಾಗಿ ತೊಂದರೆ ನೀಡುತ್ತಿದ್ದರೆ. ಇಲಾಖೆಯ ಸಹಾಯವಾಣಿಗೆ ವಿಷಯ ತಿಳಿಸಿ. ನಿತ್ಯ ಜೀವನದಲ್ಲಿ ಕಾನೂನು ಜ್ಞಾನವನ್ನು ಪಡೆದು ಸಮಾಜದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ನಿಮ್ಮ ಪಾತ್ರವೂ ಮುಖ್ಯ ಎಂದರು.

ಕಾಲೇಜಿನ ಪ್ರಾಚಾರ್ಯೆ ನಾಗರೇಖಾ ಗಾಂವ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹವಾಲ್ದಾರ ಮಂಗಲದಾಸ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು. ಕಾಲೇಜಿನ ವಿಜ್ಞಾನ ವಿಭಾಗ ಉಪನ್ಯಾಸಕಿ ಪೂರ್ಣಿಮಾ ಬೆಳವಡಿ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಮಂಗಲಾ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಪ್ರವೀಣಕುಮಾರ ಸುಲಾಖೆ ನಿರೂಪಿಸಿದರು. ಶಿರಸಿಯಲ್ಲಿ ಪೊಲೀಸರಿಂದ ಪೋಸ್ಟರ್ ಅಭಿಯಾನ

ಶಿರಸಿ: ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ನಗರ ಠಾಣೆ ಪೊಲೀಸರು ವಿನೂತನ ಪೋಸ್ಟರ್ ಅಭಿಯಾನ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದರು.ನಗರದ ಹೊಸ ಬಸ್ ನಿಲ್ದಾಣ, ಬಿಡ್ಕಿಬೈಲ್, ಹೊಸ ಬಸ್ ನಿಲ್ದಾಣ, ಐದು ರಸ್ತೆ, ಹಳೆ ಬಸ್ ನಿಲ್ದಾಣಗಳಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಪೋಸ್ಟರ್‌ಗಳನ್ನು ಬಸ್, ಆಟೋ ಮತ್ತು ಗೋಡೆಗಳಿಗೆ ಅಂಟಿಸುವ ಮೂಲಕ ಸಾರ್ವಜನಿಕರಲ್ಲಿ ವಿನೂತನವಾಗಿ ಅರಿವು ಮೂಡಿಸಲಾಯಿತು.

ಶಿರಸಿ ಡಿಎಸ್ಪಿ ಗಣೇಶ ಕೆ‌.ಎಲ್., ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ. ನೇತೃತ್ವದಲ್ಲಿ ಎಎಸ್ಐಗಳಾದ ಹೊನ್ನಪ್ಪ ಅಗೇರ, ರೋಷನ್ ನೆತ್ರೇಕರ್, ಸಿಬ್ಬಂದಿಗಳಾದ ಹನುಮಂತ ಕಬಾಡಿ, ನಾಗಪ್ಪ ಲಮಾಣಿ, ಅರುಣ ಲಮಾಣಿ ಅಭಿಯಾನದಲ್ಲಿ ಭಾಗವಹಿಸಿದ್ದರು.