ಸಾರಾಂಶ
ಕನ್ನಡಪ್ರಭ ವಾರ್ತೆ, ಕೊಟ್ಟಿಗೆಹಾರ
ಬಣಕಲ್ ಸಮೀಪದ ಬಗ್ಗಸಗೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಶಿಕ್ಷಣ ವಂಚಿತ ಮಕ್ಕಳು ಟಿ.ಸಿ, ಕೇಳಿ ಪ್ರತಿಭಟಿಸಿದ ಘಟನೆ ನಡೆದಿದೆ.ಶಾಲೆಯಲ್ಲಿ ಸುಮಾರು 76 ಮಕ್ಕಳಿದ್ದು 4 ಶಿಕ್ಷಕರು ಪಾಠ ಹೇಳಿ ಕೊಡುತ್ತಿದ್ದರು. ಆದರೆ, ಕೆಲವು ದಿನಗಳ ಹಿಂದೆ ಇಬ್ಬರು ಶಿಕ್ಷಕರನ್ನು ಸರ್ಕಾರ ವರ್ಗಾವಣೆ ಮಾಡಿದ್ದರಿಂದ ಮಕ್ಕಳಿಗೆ ಶಿಕ್ಷಕರಿಲ್ಲದೇ ತೊಂದರೆ ಉಂಟಾಗಿದೆ ಎಂದು ಹಲವು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಗ್ರಾಮಸ್ಥರಾದ ಬಿ.ಎ.ಕವೀಶ್ ಮಾತನಾಡಿ, ಶಾಲೆಯಲ್ಲಿ ಸುಮಾರು 76 ಮಕ್ಕಳಿದ್ದಾರೆ. ಇಬ್ಬರು ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಲು ಕಷ್ಟ ಸಾಧ್ಯವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಹಲವು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಇದರಿಂದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಕಷ್ಟವಾಗಿದೆ. ಅಧಿಕಾರಿಗಳು ಗಮನ ಹರಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಿತದೃಷ್ಟಿಯಿಂದ ಶೀಘ್ರವಾಗಿ ಶಿಕ್ಷಕರನ್ನು ನೇಮಿಸಬೇಕೆಂದು ಆಗ್ರಹಿಸಿದರು.ಸಮಾಜ ಸೇವಕ ಮೊಹಮ್ಮದ್ ಆರೀಫ್ ಮಾತನಾಡಿ, ಮಕ್ಕಳಿದ್ದರೂ ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳು ಶಿಕ್ಷಣ ವಂಚಿತವಾಗಿವೆ. ಕೆಲವು ಕಡೆ ಮಕ್ಕಳಿಲ್ಲ ಎಂದು ಶಾಲೆಗಳು ಮುಚ್ಚಲ್ಪಟ್ಟರೆ ಹಲವೆಡೆ ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಇದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.
ಶಾಲೆಯಲ್ಲಿ ಶಿಕ್ಷಕರಿಲ್ಲದ ವಿಷಯ ತಿಳಿದು ಕೂಡಲೇ ಬಂಕೇನಹಳ್ಳಿ ಶಾಲೆ ಸಹ ಶಿಕ್ಷಕರು ಹಾಗೂ ಮತ್ತೋರ್ವ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಶಾಲೆಗೆ ನೇಮಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ಶೀಘ್ರವೇ ಸ್ಪಂದಿಸಿದರು ಎಂದು ಫಲ್ಗುಣಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕವೀಶ್ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಜಾಬೀರ್, ಗ್ರಾಪಂ ಅಧ್ಯಕ್ಷೆ ಶಶಿಕಲಾ, ಪಿಡಿಒ ಚಂದ್ರಾವತಿ, ಸದಸ್ಯ ಮನು, ರತೀಶ್, ಹಸನ್ ಇದ್ದರು.ಪೋಟೋ ಫೈಲ್ ನೇಮ್ 26 ಕೆಸಿಕೆಎಂ 5
ಮೂಡಿಗೆರೆ ತಾಲೂಕಿನಬಣಕಲ್ ಸಮೀಪದ ಬಗ್ಗಸಗೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಶಿಕ್ಷಣಕ್ಕೆ ತೊಂದರೆಯಾಗಿದ್ದು ತಮಗೆ ಟಿ.ಸಿ. ನೀಡುವಂತೆ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರಿಗೆ ಪತ್ರ ಸಲ್ಲಿಸಿದರು.