ಹಿರೇಕೆರೂರು: ಬಾಳಂಬೀಡ ಗ್ರಾಮದ ಕೌರವ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಬಿ.ಸಿ. ಪಾಟೀಲ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಸಿ.ಪಾಟೀಲ, ನಮ್ಮ ಕೌರವ ಶಿಕ್ಷಣ ಸಂಸ್ಥೆ ಈ ಸಾಲಿನ ಎಸ್ಸೆಸ್ಸೆಲ್ಸಿ 27 ವಿದ್ಯಾರ್ಥಿಗಳು ಉತ್ತೀರ್ಣರಾಗಿ 100ಕ್ಕೆ 100 ಫಲಿತಾಂಶ ತಂದುಕೊಡುವ ಮೂಲಕ ಸಂಸ್ಥೆಯ ಹಿರಿಮೆ ಹೆಚ್ಚಿಸಿದ್ದಾರೆ. 11 ವಿದ್ಯಾರ್ಥಿಗಳು 4 ವಿಷಯಗಳಲ್ಲಿ ಪ್ರತಿಶತ ಅಂಕಗಳನ್ನು ಗಳಿಸಿದ್ದು ಸಂತಸ ತಂದಿದೆ. ವಿದ್ಯಾರ್ಥಿಗಳು ಗುರು ಹಿರಿಯರ ಮಾರ್ಗದರ್ಶನದಲ್ಲಿ ಸತತ ಪರಿಶ್ರಮದಿಂದ ವ್ಯಾಸಂಗ ಮಾಡಿ ಜ್ಞಾನ ಸಂಪಾದನೆ ಮಾಡಿಕೊಳ್ಳುವ ಜತೆಗೆ ಉತ್ತಮ ಸಂಸ್ಕಾರ ರೂಢಿಸಿಕೊಂಡು ಮಾದರಿ ವ್ಯಕ್ತಿತ್ವ ನಿಮ್ಮದಾಗಿಸಿಕೊಳ್ಳಬೇಕು. ಉನತ್ನ ಕನಸುಗಳನ್ನು ಕಟ್ಟಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಿ ಉನ್ನತ ಸ್ಥಾನ ಮಾನಗಳನ್ನು ಹೊಂದಿ ಕಲಿತ ಶಾಲೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದರು.ಅತೀ ಹೆಚ್ಚು ಅಂಕಗಳಿಸಿದ ಮಾನ್ಯ ಕಣಕುಪ್ಪಿ ಶೇ. 97.6, ರಕ್ಷಿತಾ ರಾಮಗಿರಿ ಶೇ.96.8, ಶಾಹಿನ್ ಬಾನು. ಎಫ್. ಬಿ. ಶೇ.96.48, ಪ್ರೇಮಾ ಚನ್ನಗೌಡರ ಶೇ. 96, ಬೃಂದಾ ಸಿ.ಎ. ಶೇ. 94.08, ಅಪೂರ್ವ ನಲವಾಲದ ಶೇ.93.44, ಸ್ಪಂದನಾ ಕರೆಗೌಡ್ರ ಶೇ. 88.32, ಯೋಗೇಶ ಶಿವಪ್ಪಳವರ ಶೇ.87.68, ಕಲ್ಯಾಣಕುಮಾರ್ ಹಕ್ಕಳಿ ಶೇ.87.52, ಖುಷಿ. ಡಿ.ಟಿ. ಶೇ.85.92, ಲಕ್ಷ್ಮೀ ಪಾಟೀಲ್ ಶೇ.84.48 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಮುಖ್ಯಶಿಕ್ಷಕ ಮಂಜುನಾಥ ವಂಟಕರ, ದುರಗೇಶ ತಿರಕಪ್ಪನವರ, ರೇಖಾ ನಲವಾಲದ, ಮಹದೇವ ಕಣಕುಪ್ಪಿ, ಚಂದ್ರಪ್ಪ ಅಮಾತಿ, ಸಂಜೀವ ಹಕ್ಕಳ್ಳಿ ಸೇರಿದಂತೆ ಪಾಲಕರು ವಿದ್ಯಾರ್ಥಿಗಳಿದ್ದರು.
ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ
ಬಾಳಂಬೀಡ ಗ್ರಾಮದ ಕೌರವ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಬಿ.ಸಿ. ಪಾಟೀಲ ಸನ್ಮಾನಿಸಿ ಗೌರವಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.