ಸಾರಾಂಶ
ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜು ಆಫ್ ಎಂಜಿನಿಯರಿಂಗ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ನಮ್ರತಾ ಸಿ ಪ್ರಭು 13 ಚಿನ್ನದ ಪದಕ ಪಡೆದರು. ಬೆಂಗಳೂರಿನ ಆರ್.ವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ನವ್ಯಶ್ರೀ ಗಣಪಿಶೆಟ್ಟಿ 11, ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗದ ಕಾರ್ತಿಕ್ ಎಲ್. 7, ಮೈಸೂರಿನ ಜಿಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಫಾರ್ ವುಮೆನ್‌ನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಕವನಾ ಎ.7 ಪದಕ ಗಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜು ಆಫ್ ಎಂಜಿನಿಯರಿಂಗ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ನಮ್ರತಾ ಸಿ ಪ್ರಭು 13 ಚಿನ್ನದ ಪದಕ ಪಡೆದರು. ಬೆಂಗಳೂರಿನ ಆರ್.ವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ನವ್ಯಶ್ರೀ ಗಣಪಿಶೆಟ್ಟಿ 11, ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗದ ಕಾರ್ತಿಕ್ ಎಲ್. 7, ಮೈಸೂರಿನ ಜಿಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಫಾರ್ ವುಮೆನ್‌ನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಕವನಾ ಎ.7 ಪದಕ ಗಳಿಸಿದ್ದಾರೆ.ಬೆಂಗಳೂರಿನ ದಯಾನಂದ ಸಾಗರ ಅಕಾಡೆಮಿ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಮೋಹಿನಿ ವಿ. 6, ಬೆಂಗಳೂರಿನ ಆರ್‌ಎನ್ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಸ್ಟ್ರುಮೆಂಟೇಷನ್ ವಿಭಾಗದ ಜಾಹ್ನವಿ ಕೆ. 4, ಬೆಂಗಳೂರಿನ ಈಸ್ಟ್ ವೆಸ್ಟ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಏರೋನಾಟಿಕಲ್ ವಿಭಾಗದ ರಕ್ಷಿತಾ ಎಂ. 2 ಪದಕ ಮುಡಿಗೇರಿಸಿಕೊಂಡರು.ಪದವಿ ಪ್ರದಾನ:
ಅಟಾನಾಮಸ್ ಕಾಲೇಜು ಸೇರಿ ಬಿಇ-58,861, ಬಿ.ಟೆಕ್-117, ಬಿ.ಪ್ಲಾನ್-10, ಬಿ.ಆರ್ಚ್-1040, ಬಿಎಸ್ಸಿ(ಹಾನರ್ಸ್)-24 ಹೀಗೆ ಒಟ್ಟು 60,052 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು. ಅದೇರೀತಿ ಪಿಎಚ್ಡಿ 262 ಸಂಶೋಧನಾ ಪದವಿ, ಇಂಟಿಗ್ರೇಟೆಡ್ ಡುಯಲ್ ಡಿಗ್ರಿ 2 ಪದವಿಗಳನ್ನು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು.