ಸಾರಾಂಶ
ರಾಣಿಬೆನ್ನೂರು: ನಮ್ಮ ದೇಶದಲ್ಲಿನ ಮತಾಂಧತೆ, ಜಾತ್ಯಾಂಧತೆ ಮತ್ತು ಗಾಢವಾದ ಮೌಢ್ಯತೆಗಳಿಗೆ ಮುಖ್ಯ ಕಾರಣ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವದ ಕೊರತೆಯೇ ಕಾರಣ ಎಂದು ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ತಿಳಿಸಿದರು.ನಗರದ ಬಿಎಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವೈಜ್ಞಾನಿಕ ಮನೋವೃತ್ತಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮ ಮತ್ತು ದೇವರ ಹೆಸರಿನಲ್ಲಿ ಜಗತ್ತಿನಲ್ಲಿ ಅನೇಕ ಯುದ್ಧಗಳು ಮತ್ತು ರಕ್ತಪಾತವಾಗಿರುವುದು ಇತಿಹಾಸದಲ್ಲಿ ಕಂಡುಬರುತ್ತದೆ. ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಮೌಢ್ಯತೆ ಬೆಳೆಯುತ್ತಿರುವುದು ವಿಷಾದನೀಯ. ಪಟ್ಟಬದ್ಧ ಹಿತಾಸಕ್ತಿಗಳು ಮೌಢ್ಯತೆಯನ್ನು ಎಲ್ಲ ಜಾತಿ, ಮತದ ಜನರಲ್ಲಿ ಬಿತ್ತಿ ಬೆಳೆಯುತ್ತಿದ್ದಾರೆ. ಮೌಢ್ಯತೆ ಎಂಬುದು ದುರ್ಬಲ ಮನಸ್ಸಿನ ಸಂಕೇತ. ಆದ್ದರಿಂದ ಯುವ ಜನಾಂಗ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಪ್ರಜ್ಞಾವಂತ ನಾಗರಿಕರಾಗಬೇಕು ಎಂದರು. ಡಾ. ರಾಜೀವ ಕೆ.ಎಂ., ಪ್ರೊ .ಶ್ರೀಕಾಂತ ಗೌಡಶಿವಣ್ಣನವರ ಮಾತನಾಡಿದರು. ಪ್ರಾ. ಡಾ. ಎಂ.ಎಂ. ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಪ್ರಥಮ ವರ್ಷದ ಬಿಇಡಿ ವಿದ್ಯಾರ್ಥಿನಿಯರು ಮೌಢ್ಯ ಕಿರುನಾಟಕ ಪ್ರದರ್ಶಿಸಿದರು. ಪರಶುರಾಮ ಪವಾರ, ಎ. ಶಂಕರನಾಯ್ಕ, ಉಮಾ ಕಂಬಳಿ, ಲಕ್ಷ್ಮಿ ಹಣಚಿಕ್ಕಿ, ವೀಣಾ ಲಮಾಣಿ, ಸಹನಾ, ಸಬ್ರೀನ್, ಪವನ ಲಮಾಣಿ, ಅನಿತಾ ಲಮಾಣಿ ಮತ್ತಿತರರಿದ್ದರು. ಜನತಾ ಶಿಕ್ಷಣ ಸಂಘದ ಸದಸ್ಯತ್ವಕ್ಕೆ ಅರ್ಜಿಹಾನಗಲ್ಲ: ಪಟ್ಟಣದ ಪ್ರತಿಷ್ಠಿತ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘಕ್ಕೆ ಸದಸ್ಯತ್ವ ಸ್ವೀಕರಿಸಲು ಬಯಸಿ ಮನವಿ ಸಲ್ಲಿಸಿದವರಿಗೆ ಅರ್ಜಿ ಫಾರ್ಮ್ ನೀಡಲು ಸಂಸ್ಥೆ ಕಾಲ ಮಿತಿ ನೀಡಿದ್ದು, ಈ ಅವಧಿಯಲ್ಲಿ ಅರ್ಜಿ ಫಾರ್ಮ್ ಪಡೆದು, ನಿಗದಿತ ಅವಧಿಯಲ್ಲಿ ಶುಲ್ಕ ಭರಿಸಿ ಸದಸ್ಯರಾಗಲು ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರೊ. ಸಿ. ಮಂಜುನಾಥ ಮೂಲಕ ಹಾಗೂ ನಂತರ ಹಲವರು ಸಂಸ್ಥೆಗೆ ಸದಸ್ಯರಾಗಲು ಬಯಸಿದ್ದಾರೆ. ಮನವಿ ಸಲ್ಲಿಸಿದವರು ಸೆ. 2ರಿಂದ ಸೆ.8 ರ ವರೆಗೆ ಕಚೇರಿ ಅವಧಿಯಲ್ಲಿ ತಮ್ಮ ಗುರುತಿನ ಚೀಟಿಯೊಂದಿಗೆ ವೈಯಕ್ತಿಕವಾಗಿ ಆಗಮಿಸಿ ಶುಲ್ಕ ಭರಣಾ ಮಾಡಿ ಸಹಕಾರಿಯ ಮುಖ್ಯ ಕಾರ್ಯ ನಿರ್ವಾಹಕರಿಂದ ಸದಸ್ಯತ್ವದ ಅರ್ಜಿ ಫಾರ್ಮ ಪಡೆದುಕೊಳ್ಳಬಹುದು. ಸೆಪ್ಟೆಂಬರ್ ತಿಂಗಳಿನಲ್ಲಿ ಸಂಘದ ಸರ್ವಸಾಧಾರಣ ಸಭೆ ನಡೆಯಲಿದ್ದು, ನಂತರ ಸೆ. 22ರಿಂದ ಸೆ. 26ರ ಅವಧಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಶುಲ್ಕ ಪಾವತಿಸಿ ಸದಸ್ಯತ್ವದ ಅರ್ಜಿ ಸಲ್ಲಿಸಬಹುದು ಎಂದು ಬಿ.ಎಸ್. ಅಕ್ಕಿವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.