ಸರ್ವರಲ್ಲೂ ಸರ್ವೋದಯವಾಗಲಿ ಉಪ ವಿಭಾಗಾಧಿಕಾರಿ

| Published : Aug 17 2024, 12:52 AM IST

ಸಾರಾಂಶ

ಪುರಸಭಾ ಕಾರ್ಯಾಲಯದಿಂದ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯದಿನಾಚರಣೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ಕೆ.ಜಿ. ಕಾಂತರಾಜ್ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಸದಸ್ಯರು, ಮುಖ್ಯಾಧಿಕಾರಿ ಪ್ರಶಾಂತ್, ಪುರಸಭೆ ಸಿಬ್ಬಂದಿ ಇದ್ದರು.

ಕನ್ನಡಪ್ರಭ ವಾರ್ತೆ ತರೀಕೆರೆ

ಸರ್ವರಲ್ಲೂ ಸರ್ವೋದಯವಾಗಲಿ ಎಂದು ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಹೇಳಿದ್ದಾರೆ.

ಗುರುವಾರ ಪುರಸಭೆಯಿಂದ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಗರಸಭೆ ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ ಅನೇಕ ಹಿರಿಯರು ಹೋರಾಟದ ಫಲ ಮತ್ತು ಹಗಲಿರಲು ಶ್ರಮಿಸಿ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟಿದ್ದಾರೆ. ನಾವು ಎಲ್ಲರೂ ತಲೆ ಎತ್ತಿ ನಡೆಯಬೇಕು ಎಂದು ಹೇಳಿದರು.

ನಗರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ 78ನೇ ಸ್ವಾತಂತ್ರ್ಯೋತ್ಸವದ ಅಮೃತ ಕಾಲಘಟ್ಟದಲ್ಲಿ ವಿಕಸಿತ ಭಾರತದ ಕನಸನ್ನು ಕಾಣಬಹುದಾಗಿದೆ. ಅನೇಕ ಹಿರಿಯರ ತ್ಯಾಗ ಪರಿಶ್ರಮ ಬಲಿದಾನಗಳ ಪರಿಣಾಮವಾಗಿ ಸ್ವಾತಂತ್ರ್ಯ ದೊರಕಿದೆ. ಇಂದು ಭಾರತದಲ್ಲಿ 78 ವರ್ಷ ಗತಿಸಿದ್ದರೂ ಧರ್ಮ ಸಂಘರ್ಷ, ಗಡಿ ಸಂಘರ್ಷ, ಪ್ರಾಂತ ಸಂಘರ್ಷ ಕಾಡುತ್ತಿದೆ. ನಮ್ಮ ಯೋಧರು ಗಡಿಯಲ್ಲಿ ದೇಶ ಸಂರಕ್ಷಿಸಲು ಹೋರಾಡುತ್ತಿದ್ದಾರೆ, ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು, ಯೋಧರನ್ನು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ, ಹಿರಿಯರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಗಳಿಸಿದ್ದೇವೆ. ದೇಶದ ಆಂತರಿಕ ಕಲಹ ಮತ್ತು ಅಸುರಕ್ಷತೆಯೂ ದೇಶದ ಭದ್ರತೆಗೆ ಸವಾಲಾಗಿದೆ. ಭಯಮುಕ್ತ, ದ್ವೇಷಮುಕ್ತ ತಾರತಮ್ಯ ಮುಕ್ತ ಹೊಸ ಭಾರತ ಕಟ್ಟೋಣ ಎಂದು ಹೇಳಿದರು.

ವಿಶೇಷ ಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು. ಪುರಸಭೆ ಸದಸ್ಯ ವಸಂತಕುಮಾರ್, ಆಶಾ ಅರುಣ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್ ಎಚ್., ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು ಭಾಗವಹಿಸಿದ್ದರು.