ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಉಪವಿಭಾಗಾಧಿಕಾರಿ ಬೋಧನೆ

| Published : Jul 17 2024, 12:46 AM IST

ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಉಪವಿಭಾಗಾಧಿಕಾರಿ ಬೋಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಸಿದೀರ್ಘ ಚರ್ಚೆ

ಕನ್ನಡಪ್ರಭ ವಾರ್ತೆ ತರೀಕೆರೆ

ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಬಿಸಿಎಂ ಪೋಸ್ಟ್ ಮೆಟ್ರಿಕ್ ಬಾಲಕರ ನಿಲಯಕ್ಕೆ ಭೇಟಿ ನೀಡಿದ ತರೀಕೆರೆ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅವರು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ಮತ್ತು ತಯಾರಿ ಕುರಿತು ವಿದ್ಯಾರ್ಥಿಗಳಿಗೆ ಎರಡು ಗಂಟೆಗಳ ಕಾಲ ಬೋಧನೆ ಮಾಡಿ, ನಂತರ ಪ್ರಶ್ತೋತರ ನೆಡೆಸಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದರು.

ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನಕ್ಕಾಗಿ ಪ್ರತಿನಿತ್ಯ ವೃತ್ತ ಪತ್ರಿಕೆಗಳನ್ನು ತಪ್ಪದೇ ಓದಬೇಕು, ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ ಎಂದರು.

ಪಿಯುಸಿ ನಂತರ ಅಧ್ಯಯನಕ್ಕೆ ಇರುವ ಪದವಿಗಳ ಬಗ್ಗೆ ಸಲಹೆ ನೀಡಿ, ಉನ್ನತ ಹುದ್ಗೆಗಳಿಗೆ ಆಳವಾದ ಅಧ್ಯಯನ ತುಂಬಾ ಅಗತ್ಯ, ಹಳೇ ಪಠ್ಯಪುಸ್ತಕಗಳು ಮತ್ತು ಪ್ರಶ್ನಪತ್ರಿಕೆಗಳನ್ನು ಕ್ರೋಡಿಕರಿಸಿ, ಆಗಾಗ್ಗೆ ಸ್ವಯಂ ಮೌಲ್ಯ ಮಾಪನ ಮಾಡಿಕೊಳ್ಳಬೇಕು, ಸ್ನೇಹಿತರೊಡನೆ ಅಧ್ಯಯನದ ವಿವಿಧ ವಿಚಾರಗಳನ್ನು ಕುರಿತು ಪರಸ್ಪರ ಚರ್ಚೆ ನೆಡೆಸಬೇಕು, ಕ್ವಿಜ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು, 6 ರಿಂದ 10ನೇ ತರಗತಿ ವರೆಗಿನ ಪಠ್ಯ ಪುಸ್ತಕಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು, ಇದರಿಂದ ಹೆಚ್ಚಿನ ವಿಚಾರಗಳನ್ನು ತಿಳಿಯಲು ಮತ್ತು ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತರಗತಿಗಳಲ್ಲಿನ ನೋಟ್ಸ್ ಗಳಿಗೆ ಸೀಮಿತವಾಗದೆ ಪಠ್ಯ ಪುಸ್ತಕಗಳನ್ನು ಪದೇ ಪದೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಹಾಸ್ಟೆಲ್ ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಕೇಳಿದ ಹಲವಾರು ಪ್ರಶ್ನೆಗಳಿಗೆ ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಅವರು ಉತ್ತರಿಸಿದರು.

ಈ ವೇಳೆ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಅಭಿನಂದಿಸಲಾಯಿತು. ನಂತರ ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ವಿದ್ಯಾರ್ಥಿಗಳೊಂದಿಗೆ ಭೋಜನ ಸವಿದರು.