ಡಾ.ಮಂಜುನಾಥ್ ವಿರುದ್ಧ ಮೂವರಿಂದ ಉಮೇದುವಾರಿಕೆ ಸಲ್ಲಿಕೆ

| Published : Apr 04 2024, 01:01 AM IST / Updated: Apr 04 2024, 07:07 AM IST

ಡಾ.ಮಂಜುನಾಥ್ ವಿರುದ್ಧ ಮೂವರಿಂದ ಉಮೇದುವಾರಿಕೆ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

 ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮಂಜುನಾಥ್ ಹೆಸರಿನ ನಾಲ್ವರು ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.

ರಾಮನಗರ: ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮಂಜುನಾಥ್ ಹೆಸರಿನ ನಾಲ್ವರು ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.

ಬಹುಜನ್ ಭಾರತ ಪಾರ್ಟಿ ಅಭ್ಯರ್ಥಿಯಾಗಿ ಸಿ.ಎನ್ .ಮಂಜುನಾಥ, ಪಕ್ಷೇತರರಾಗಿ ಸಿ.ಮಂಜುನಾಥ್ , ಎನ್.ಮಂಜುನಾಥ್ , ಕೆ.ಮಂಜುನಾಥ್ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಕರುನಾಡ ಪಾರ್ಟಿ ಅಭ್ಯರ್ಥಿಯಾಗಿ ಎಸ್.ಸುರೇಶ್, ಅಖಿಲ ಭಾರತ್ ಹಿಂದೂ ಮಹಾಸಭಾ ಅಭ್ಯರ್ಥಿಯಾಗಿ ಎಚ್.ರಾಜಣ್ಣ, ನವ ಭಾರತ್ ಸೇನಾದಿಂದ ಎನ್.ವಸಂತ್ ರಾವ್ ಜಗತಾಪ್, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಎಲ್‌.ಕುಮಾರ್, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಕೆ.ಎನ್.ಮನಮೋಹನ್ ರಾಜ್, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ಮಹಮದ್ ಮುಸದಿಕ್ ಪಾಷಾ, ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿಯಾಗಿ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ, ಕಂಟ್ರಿ ಸಿಟಿಜನ್ ಪಾರ್ಟಿಯಿಂದ ಜೆ.ವಸಿಸ್ಟ್, ಪಕ್ಷೇತರರಾಗಿ ಟಿ.ರಾಜೇಂದ್ರ ನಾಮಪತ್ರ ಸಲ್ಲಿಸಿದ್ದಾರೆ. 

ಯಾರ ಒತ್ತಡವೂ ಇಲ್ಲ, ಸ್ವಯಿಚ್ಛೆಯಿಂದ ಸ್ಪರ್ಧೆ: ಸಿ.ಎನ್ .ಮಂಜುನಾಥ್

ರಾಮನಗರ: ಕಾಂಗ್ರೆಸ್ ನವರು ನನ್ನನ್ನು ಸ್ಪರ್ಧಿಸುವಂತೆ ಮಾಡಿದ್ದಾರೆ ಎಂಬುದೆಲ್ಲ ಸುಳ್ಳು ಪ್ರಚಾರ. ಯಾರೊ ಮೂರ್ಖರು ಆ ರೀತಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸ್ವಯಿಚ್ಚೆಯಿಂದ ನಾನು ಸ್ಪರ್ಧೆ ಮಾಡುತ್ತಿದ್ದು, ನನಗೆ ಯಾವುದೇ ಒತ್ತಡ ಇಲ್ಲ. ಗೆಲವೊಂದೇ ನನ್ನ ಗುರಿ ಎಂದು ಬಹುಜನ ಭಾರತ್ ಪಾರ್ಟಿ ಅಭ್ಯರ್ಥಿ ಸಿ.ಎನ್ .ಮಂಜುನಾಥ್ ಪ್ರತಿಕ್ರಿಯಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ನನ್ನನ್ನು ಕರೆತಂದು ನಿಲ್ಲಿಸಿದ್ದಾರೆಂದು ಯಾರೊ ಮೂರ್ಖರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಕಾಂಗ್ರೆಸ್ ನವರ ಬಳಿ ನಾನು ಅರ್ಧ ಕಪ್ ಕಾಫಿನೂ ಕುಡಿದಿಲ್ಲ, ಅವರ್ಯಾರು ನಮ್ಮನ್ನು ಭೇಟೀನು ಮಾಡಿಲ್ಲ. ಬೇಕಾದರೆ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದು ನೋಡಲಿ ಎಂದರು.

ನಾನು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನವನು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರು ಚುನಾವಣೆಗಳಲ್ಲಿ ಸ್ಪರ್ಧೆ ಮಾಡಬಹುದು. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಇಂತಹ ವ್ಯಕ್ತಿಗಳೇ ಸ್ಪರ್ಧೆ ಮಾಡಬೇಕೆಂಬ ನಿಯಮಗಳೇನೂ ಇಲ್ಲ. ಹಾಸನ ಸಂಸತ್ ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ ಬೇರೆಯವರು ಸ್ಪರ್ಧೆ ಮಾಡಿದ್ದಾರೆ. ಅಲ್ಲಿ ಅವಕಾಶ ಸಿಗದ ಕಾರಣ ಪಕ್ಷದ ವರಿಷ್ಠರ ಸೂಚನೆಯಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಮೇಲೆ ಯಾರು ಒತ್ತಡ ಹಾಕಿಲ್ಲ. ಅದೆಲ್ಲ ಊಹಾಪೋಹ. ಕಾಂಗ್ರೆಸ್‌ನವರು ನನ್ನನ್ನು ಸ್ಪರ್ಧಿಸುವಂತೆ ಮಾಡಿದ್ದಾರೆ ಎಂಬುದೆಲ್ಲ ಸುಳ್ಳು. ಸ್ವಯಿಚ್ಚೆಯಿಂದ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

ನಾನು ಈ ದೇಶದ ಪ್ರಜೆಯಾಗಿದ್ದು, ನಾನು 30 ವರ್ಷ ಬಡವರ ಸೇವೆ ಮಾಡಿದ್ದೇನೆ. ದಲಿತ ಚಳವಳಿ, ಬಹುಜನ ಸಮಾಜ ಪಾರ್ಟಿಯಲ್ಲಿ ಕೆಲಸ ಮಾಡಿದ್ದೇನೆ. ಚುನಾವಣೆ ಎದುರಿಸಿದ ಅನುಭವವೂ ಇದೆ. ನಗರಸಭೆ, ತಾಪಂ ಸದಸ್ಯನಾಗಿ ಹಾಗೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಯಾರ ವೋಟನ್ನು ಯಾರು ತೆಗೆದುಕೊಂಡು ಹೋಗಿ ಹಾಕಲು ಆಗುವುದಿಲ್ಲ. ನಮ್ಮ ಪಕ್ಷದ ಚಿಹ್ನೆ ನೋಡಿ ನಮಗೆ ವೋಟು ಹಾಕುತ್ತಾರೆ. ಅವರ ಪಕ್ಷದ ಚಿಹ್ನೆ ನೋಡಿ ಅವರಿಗೆ ಮತ ಹಾಕುತ್ತಾರೆ. ನನ್ನ 30 ವರ್ಷದ ಸಾಮಾಜಿಕ ಸೇವೆ ನೋಡಿ ಜನರು ಮತ ಹಾಕುತ್ತಾರೆಂಬ ವಿಶ್ವಾಸವಿದೆ ಎಂದು ಸಿ.ಎನ್ .ಮಂಜುನಾಥ್ ಹೇಳಿದರು.3ಕೆಆರ್ ಎಂಎನ್ 5.ಜೆಪಿಜಿ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಬಹುಜನ್ ಭಾರತ್ ಪಾರ್ಟಿ ಅಭ್ಯರ್ಥಿಯಾಗಿ ಸಿ.ಎನ್ . ಮಂಜುನಾಥ್ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.