ಅನುಮೋದನೆಗಾಗಿ ಪಾಲಿಕೆ ಬಜೆಟ್ ಸರ್ಕಾರಕ್ಕೆ ಸಲ್ಲಿಕೆ

| Published : Mar 03 2024, 01:30 AM IST

ಸಾರಾಂಶ

ಬಿಬಿಎಂಪಿಯ 2024-25ನೇ ಸಾಲಿನ ಆಯವ್ಯಯದ ಅನುಮೋದನೆ ನೀಡುವಂತೆ ಶನಿವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಎರಡ್ಮೂರು ದಿನದಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿಯ 2024-25ನೇ ಸಾಲಿನ ಆಯವ್ಯಯದ ಅನುಮೋದನೆ ನೀಡುವಂತೆ ಶನಿವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಎರಡ್ಮೂರು ದಿನದಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ.

ಕಳೆದ ಗುರುವಾರ ₹12,369 ಕೋಟಿ ಗಾತ್ರದ 2024-25ನೇ ಸಾಲಿನ ಬಿಬಿಎಂಪಿಯ ಆಯವ್ಯಯ ಮಂಡಿಸಲಾಗಿತ್ತು. ಈಗಾಗಲೇ ಆಡಳಿತಾಧಿಕಾರಿಯಿಂದ ಅನುಮೋದನೆಯಾಗಿರುವ ಆಯವ್ಯಯಕ್ಕೆ ಯಾವುದೇ ಪರಿಷ್ಕರಣೆ ಮಾಡದೇ ಶನಿವಾರ ರಾಜ್ಯ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ.

ಲೋಕಸಭಾ ಚುನಾವಣೆ ಮಾರ್ಚ್‌ ಮೊದಲ ವಾರದಲ್ಲಿ ಘೋಷಣೆ ಆಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡ್ಮೂರು ದಿನದಲ್ಲಿ ಪಾಲಿಕೆ ಬಜೆಟ್‌ಗೆ ಅಗತ್ಯವಿದ್ದರೆ ತಿದ್ದುಪಡಿ ಮಾಡಿ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.