ಸಾರಾಂಶ
ಕನ್ನಡಪ್ರಭವಾರ್ತೆ ಪುತ್ತೂರುನಗರಸಭಾ ಸದಸ್ಯರಿಬ್ಬರ ನಿಧನದಿಂದಾಗಿ ತೆರವುಗೊಂಡಿದ್ದ ಪುತ್ತೂರು ನಗರಸಭೆಯ ಎರಡು ವಾರ್ಡ್‌ಗಳಿಗೆ ಡಿ. ೨೭ರಂದು ಉಪ ಚುನಾವಣೆ ನಡೆಲಿದ್ದು, ಚುನಾವಣೆಯ ಕಾವು ಬಿರುಸುಗೊಂಡಿದೆ. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಜೊತೆಗೆ ಈ ಬಾರಿ ಪುತ್ತಿಲ ಪರಿವಾರದ ಅಭ್ಯರ್ಥಿಗಳೂ ಸ್ಪರ್ಧೆಗೆ ಅಣಿಯಾಗಿದ್ದಾರೆ. ಈಗಾಗಲೇ ೬ ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪುತ್ತಿಲ ಪರಿವಾರದಿಂದ ವಾರ್ಡ್ ಸಂಖ್ಯೆ ೧ರ ಅಭ್ಯರ್ಥಿಯಾಗಿ ಅನ್ನಪೂರ್ಣ ಎಸ್.ಕೆ. ರಾವ್ ಮತ್ತು ವಾರ್ಡ್ ಸಂಖ್ಯೆ ೧೧ ರ ಅಭ್ಯರ್ಥಿ ಚಿಂತನ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ವಾರ್ಡ್ ಸಂಖ್ಯೆ ೧ರ ಅಭ್ಯರ್ಥಿಯಾಗಿ ಸುನೀತಾ ಮತ್ತು ವಾರ್ಡ್ ೧೧ರ ಅಭ್ಯರ್ಥಿಯಾಗಿ ರಮೇಶ್ ರೈ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ಪ್ರಮುಖ ನಾಯಕರು, ಕಾರ್ಯಕರ್ತರೊಂದಿಗೆ ನಗರಸಭೆಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ಅಭ್ಯರ್ಥಿಗಳೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಡಾ. ಸುರೇಶ್ ಪುತ್ತೂರಾಯ, ಬಿಜೆಪಿ ಪ್ರಮುಖರು, ಕಾರ್ಯಕರ್ತರು ಕಾಲ್ನಡಿಗೆ ಮೂಲಕ ನಗರಸಭೆ ಚುನಾವಣಾ ಕಚೇರಿಗೆ ತೆರಳಿದರು. ಕಾಂಗ್ರೆಸ್‌ನಿಂದ ವಾರ್ಡ್ ಸಂಖ್ಯೆ ೧ರ ಅಭ್ಯರ್ಥಿಯಾಗಿ ದಿನೇಶ್ ಸೇವಿರೆ ಮತ್ತು ವಾರ್ಡ್ ಸಂಖ್ಯೆ ೧೧ರ ಅಭ್ಯರ್ಥಿಯಾಗಿ ದಾಮೋದರ ಭಂಡರ‍್ಕರ್ ಶುಕ್ರವಾರ ಪಕ್ಷದ ಮುಖಂಡರ ಜೊತೆಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.