(ಮೂಲ್ಕಿ ಒಡೆಯರ್‌) ‘ಮೂಲ್ಕಿ ಸೀಮೆಯ ಅರಸು ಪರಂಪರೆ’ ಕಿರು ಸಂಶೋಧನಾ ಪ್ರಬಂಧ ಹಸ್ತಾಂತರ

| Published : Feb 27 2024, 01:32 AM IST

(ಮೂಲ್ಕಿ ಒಡೆಯರ್‌) ‘ಮೂಲ್ಕಿ ಸೀಮೆಯ ಅರಸು ಪರಂಪರೆ’ ಕಿರು ಸಂಶೋಧನಾ ಪ್ರಬಂಧ ಹಸ್ತಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ಮೂಲ್ಕಿ ಸೀಮೆಯ ಅರಮನೆಯಲ್ಲಿ ಉಪನ್ಯಾಸಕಿ ಅಕ್ಷತಾ ವಿ ಎಡ್ಮೆಮಾರ್ ತಮ್ಮ ಸ್ನಾತಕೋತರ ಪದವಿಗಾಗಿ ನಡೆಸಿದ ‘ಮೂಲ್ಕಿ ಸೀಮೆಯ ಅರಸು ಪರಂಪರೆ’ ಕಿರು ಸಂಶೋಧನಾ ಪ್ರಬಂಧ ಹಸ್ತಾಂತರ ಕಾರ್ಯಕ್ರಮದಲ್ಲಿ ಮೈಸೂರು ಅರಮನೆಯ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿ ಸೀಮೆಯ ಅರಮನೆ ವಿಶಿಷ್ಟ ಪರಂಪರೆ ಹಾಗೂ ಸಂಸ್ಕೃತಿ ಹೊಂದಿದ್ದು ತಿಳಿದುಕೊಳ್ಳಲು ಬಹಳಷ್ಟಿದೆ, ತುಳುನಾಡಿನ ಸೀಮೆಯ ಅರಸು ಕಂಬಳ ಕ್ರೀಡೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಸೀಮೆಯ ಅರಮನೆಯ ಅರಸರು ತಮ್ಮದೇ ಆದ ವ್ಯಕ್ತಿತ್ವ ಹೊಂದಿದ್ದಾರೆಂದು ಮೈಸೂರು ಅರಮನೆಯ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದ್ದಾರೆ.

ಮೂಲ್ಕಿ ಸೀಮೆಯ ಅರಮನೆಯಲ್ಲಿ ಉಪನ್ಯಾಸಕಿ ಅಕ್ಷತಾ ವಿ ಎಡ್ಮೆಮಾರ್ ತಮ್ಮ ಸ್ನಾತಕೋತರ ಪದವಿಗಾಗಿ ನಡೆಸಿದ ‘ಮೂಲ್ಕಿ ಸೀಮೆಯ ಅರಸು ಪರಂಪರೆ’ ಕಿರು ಸಂಶೋಧನಾ ಪ್ರಬಂಧ ಹಸ್ತಾಂತರ ಕಾರ್ಯಕ್ರಮದಲ್ಲಿ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.ಸೀಮೆಯ ಅರಸ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು.ಸಾಧಕರ ನೆಲೆಯಲ್ಲಿ ಉದ್ಯಮಿ ಸೂರ್ಯ ಕುಮಾರ್ ಹಳೆಯಂಗಡಿ, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ಮೋಹನ್ ದಾಸ್ ಉಳೆಪಾಡಿ, ನಾದಸ್ವರ ವಾದಕ ನಾಗೇಶ್ ಬಪ್ಪನಾಡು, ರಂಗ ಕರ್ಮಿ ಚಂದ್ರಶೇಖರ ಸುವರ್ಣ, ಮೂಲ್ಕಿ ಠಾಣೆಯ ಎಎಸ್ಐ ಸಂಜೀವ, ಸಂದೀಪ್ ಶೆಟ್ಟಿ ಪಡುಪಣಂಬೂರು, ಅನಿಲ್ ಶಾಮ್ ಶೆಟ್ಟಿ ಮೂಡುತೋಟ, ಸುಧೇಶ್ ಕುಮಾರ್, ಹರ್ಷಿತ್ ಸಾಲ್ಯಾನ್, ಬಂಕಿ ನಾಯಕರು, ಶಶೀoದ್ರ ಸಾಲ್ಯಾನ್, ಗಾಯತ್ರಿ ಮಹಿಳಾ ಮಂಡಲದ ಸದಸ್ಯರನ್ನು ಗೌರವಿಸಲಾಯಿತು. ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್, ಮೂಲ್ಕಿ ಅರಮನೆ ವೆಲ್ಫೇರ್ ಟ್ರಸ್ಟ್ ನ ನಿರ್ದೇಶಕ ಗೌತಮ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.ಸುರತ್ಕಲ್ ಗೋವಿಂದ ದಾಸ್ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ರಚಿಸಿದ ಮೈಸೂರು ಮಹಾರಾಜರ ಭಾವಚಿತ್ರವನ್ನು ಹಸ್ತಾಂತರಿಸಲಾಯಿತು. ಹಿತಾಕ್ಷಿ ಉಮೇಶ್ ನಿರೂಪಿಸಿದರು. ಬಳಿಕ ಮೈಸೂರು ಮಹಾರಾಜರು ತುಳುನಾಡಿನ ಯಕ್ಷಗಾನ ಕಾರ್ಯಕ್ರಮವನ್ನು ವೀಕ್ಷಿಸಿದರು.ಸಚಿತ್ರ ಅಂಚೆ ಕಾರ್ಡ್‌ ಬಿಡುಗಡೆ

ವ್ಯಕ್ತಿಯ ಸುಖ-ಭೋಗ, ವೈಭವ, ಆಡಂಬರ ನೋಡಿ ಗೌರವಿಸುವುದಲ್ಲ. ಆತನ ಅಂತರಂಗದ ಸೌಂದರ್ಯ ಗೌರವಿಸಬೇಕು. ಆದರೆ, ಕಾಲದೋಷದಿಂದ ನಾವು ಹೈಟ್ ಮಾತ್ರ ಗಮನಿಸುತ್ತೇವೆ. ಅಂತರಂಗದ ಸೌಂದರ್ಯ ಲೈಟ್‌ನ್ನು ಗುರುತಿಸುವುದಿಲ್ಲ ಎಂದು ಶ್ರೀ ಅಮೋಘ ಕೀರ್ತಿ ಮುನಿಮಹಾರಾಜರು ಹೇಳಿದ್ದಾರೆ.

ಸೋಮವಾರ ವೇಣೂರಿನಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.

ಭಕ್ತಿಯಿಂದ ಮುಕ್ತಿ:ಕರ್ನಾಟಕದ ಮುಖ್ಯ ಅಂಚೆ ಮಹಾಪ್ರಬಂಧಕ ಶಿರ್ತಾಡಿ ರಾಜೇಂದ್ರ ಕುಮಾರ್, ಅಂಚೆ ಇಲಾಖೆ ಮೂಲಕ ರೂಪಿಸಿದ ಬಾಹುಬಲಿ ಸ್ವಾಮಿಯ ಸಚಿತ್ರ ಅಂಚೆ ಕಾರ್ಡನ್ನು ಮೈಸೂರು ಮಹಾರಾಜರು ಬಿಡುಗಡೆಗೊಳಿಸಿದರು.ಮೌಲ್ಯ ಅವರ ಬಾಹುಬಲಿ ಗೀತಾಮೃತ ಗಾನಲಹರಿ ಬಿಡುಗಡೆಗೊಳಸಿ ಅವರನ್ನು ಗೌರವಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಜೈನರು ಕನ್ನಡ ನಾಡು-ನುಡಿ- ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಜೈನ ಸಾಹಿತ್ಯ ಇಲ್ಲದಿದ್ದರೆ ಕನ್ನಡ ಸಾಹಿತ್ಯವೆ ಇಲ್ಲ. ಅನೇಕ ಶ್ರೇಷ್ಠಕೃತಿಗಳನ್ನು ಜೈನ ಕವಿಗಳು ವಿದ್ವಾಂಸರು ಮತ್ತು ಸಾಹಿತಿಗಳು ರಚಿಸಿದ್ದಾರೆ. ಜೈನರ ಶ್ರೇಷ್ಠ ತತ್ವವಾದ ಅಹಿಂಸೆಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಮೈಸೂರು ಅರಮನೆ ಮತ್ತು ಅರಸರಿಗೆ ಜೈನರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.