ಪುರಸಭೆಗೆ ದಾಖಲೆ ಕೊಟ್ಟು ಇ-ಖಾತಾ ಮಾಡಿಸಿಕೊಳ್ಳಿ:ಶಾಸಕ ಗಣೇಶ್‌ ಸಲಹೆ

| Published : Feb 23 2025, 12:32 AM IST

ಪುರಸಭೆಗೆ ದಾಖಲೆ ಕೊಟ್ಟು ಇ-ಖಾತಾ ಮಾಡಿಸಿಕೊಳ್ಳಿ:ಶಾಸಕ ಗಣೇಶ್‌ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆ ವ್ಯಾಪ್ತಿಯ ವಸತಿ, ವಾಣಿಜ್ಯ ಕಟ್ಟಡಗಳು ಹಾಗೂ ಖಾಲಿ ನಿವೇಶನಗಳ ಆಸ್ತಿಗೆ ಪುರಸಭೆ ಇ-ಖಾತಾ ಅಭಿಯಾನ ಆರಂಭಿಸಿದ್ದು, ಆಸ್ತಿ ಮಾಲೀಕರು ಅಭಿಯಾನದಲ್ಲಿ ಇ-ಖಾತಾ ಮಾಡಿಸಿಕೊಳ್ಳಿ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದ್ದಾರೆ.೨೦೨೫ ಫೆ.೧೧ ರಂತೆ ಸ್ಥಳೀಯ ಸಂಸ್ಥೆಗಳಲ್ಲಿ, ಈಗಾಗಲೇ ಆಸ್ತಿ ರಿಜಿಸ್ಟರ್‌ ನಲ್ಲಿ ದಾಖಲಿಸಿರುವ ಆಸ್ತಿಗಳಿಗೆ ನಮೂನೆ -೩ (ಎಇಜಿಟರ್) ನಮೂನೆ ೩ಎ(ರಿಜಿಸ್ಟರ್‌ ಬಿ) ಗಳನ್ನುಸೃಜಿಸಿ ನೀಡಲು ಸರ್ಕಾರ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪುರಸಭೆ ವ್ಯಾಪ್ತಿಯ ವಸತಿ, ವಾಣಿಜ್ಯ ಕಟ್ಟಡಗಳು ಹಾಗೂ ಖಾಲಿ ನಿವೇಶನಗಳ ಆಸ್ತಿಗೆ ಪುರಸಭೆ ಇ-ಖಾತಾ ಅಭಿಯಾನ ಆರಂಭಿಸಿದ್ದು, ಆಸ್ತಿ ಮಾಲೀಕರು ಅಭಿಯಾನದಲ್ಲಿ ಇ-ಖಾತಾ ಮಾಡಿಸಿಕೊಳ್ಳಿ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದ್ದಾರೆ.

೨೦೨೫ ಫೆ.೧೧ ರಂತೆ ಸ್ಥಳೀಯ ಸಂಸ್ಥೆಗಳಲ್ಲಿ, ಈಗಾಗಲೇ ಆಸ್ತಿ ರಿಜಿಸ್ಟರ್‌ ನಲ್ಲಿ ದಾಖಲಿಸಿರುವ ಆಸ್ತಿಗಳಿಗೆ ನಮೂನೆ -೩ (ಎಇಜಿಟರ್) ನಮೂನೆ ೩ಎ(ರಿಜಿಸ್ಟರ್‌ ಬಿ) ಗಳನ್ನುಸೃಜಿಸಿ ನೀಡಲು ಸರ್ಕಾರ ಆದೇಶಿಸಿದೆ.

ಈ ಕಚೇರಿಯ ಸ್ವೀಕೃತಿ ಮತ್ತು ರವಾನೆ ಶಾಖೆಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಪುರಸಭೆ ಕಚೇರಿಗೆ ಸಲ್ಲಿಸಿ, ಇ-ಖಾತಾ ಅಭಿಯಾನದಲ್ಲಿ ತೊಡಗಿಕೊಳ್ಳಿ ಎಂದು ಹೇಳಿದ್ದಾರೆ.

ಪಾಯಿಂಟ್ಸ್.........

ಎ ರಿಜಿಸ್ಟರ್‌:

೧) ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ಮಂಜೂರಾತಿ ಪತ್ರಗಳು/ಕಂದಾಯ ಇಲಾಖೆಯಿಂದ ೯೪ ಸಿಸಿ ಅಡಿ ನೀಡಲಾದ ಹಕ್ಕುಪತ್ರ.

೨) ಸಕ್ಷಮ ಪ್ರಾಧಿಕಾರದಿಂದ ಅನುಮೋಧನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ.

೩)ಪ್ರಸಕ್ತ ಸಾಲಿನವರೆಗೆ ಋಣ ಭಾರ ಪ್ರಮಾಣ ಪತ್ರ,

೪) ಚಾಲ್ತಿ ಸಾಲಿನವರೆಗೂ ಪಾವತಿಸಿರುವ ಆಸ್ತಿ ತೆರಿಗೆ ರಸೀದಿ.

೫) ಮಾಲೀಕರ ಫೋಟೋ, ಗುರುತಿನ ಚೀಟಿ, ಕಟ್ಟಡದ ಪರವಾನಗಿ ಮತ್ತು ನಕ್ಷೆ

ಬಿ ರಿಜಿಸ್ಟರ್‌:

೧) ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ದಿನಾಂಕ ೧೦-೦೯-೨೦೨೪ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು

೨)ಪ್ರಸಕ್ತ ಸಾಲಿನ ವರೆಗೆ ಋಣ ಭಾರ ಪ್ರಮಾಣ ಪತ್ರ.

೩) ಚಾಲ್ತಿ ಸಾಲಿನವರೆವಿಗೂ ಪಾವತಿಸಿರುವ ಆಸ್ತಿ ತೆರಿಗೆ ರಸೀದಿ.

೪) ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪತ್ರಿ.

೫)ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನ ಬಿಡುಗಡೆ ಪತ್ರ.

೬)ಕೆಇಬಿ ಬಿಲ್‌,ಸರ್ಕಾರದಿಂದ ಮಂಜೂರಾದ ಹಕ್ಕುಪತ್ರ ಮತ್ತು ನಿವೇಶನ ಹಂಚಿಕೆಯಾಗಿರುವ ಪ್ರತಿ, ಕಟ್ಟಡದ ಪರವಾನಿಗೆ ಮತ್ತು ನಕ್ಷೆಗಳನ್ನು ಪುರಸಭೆ ಕಚೇರಿಗೆ ಸಲ್ಲಿಸಿ ಅಭಿಯಾನದ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.