ಸಾರಾಂಶ
Subsidy: Applications invited from farmers
ಯಾದಗಿರಿ: 2024-25ನೇ ಸಾಲಿನ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ (ಜಿ.ಪಂ) ಶಿವಕುಮಾರ್ ತಿಳಿಸಿದ್ದಾರೆ. ಬಾಳೆ, ದಾಳಿಂಬೆ, ಮಾವು, ಸೀಬೆ, ಡ್ರಾಗನ್ ಫ್ರೂಟ್, ದ್ರಾಕ್ಷಿ ಮತ್ತು ಹೂವು ಹಾಗೂ ಹೈಬ್ರೀಡ್ ತರಕಾರಿಗೆ ಸಹಾಯಧನ ನೀಡಲಾಗುವುದು. ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆಸಕ್ತಿ ಹೊಂದಿರಬೇಕು. ತಮಗೆ ಬೇಕಾಗುವ ಘಟಕಗಳಿಗೆ ಸಹಾಯಧನ ಪಡೆಯಲು ಸಂಬಂಧಪಟ್ಟ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಯಾದಗಿರಿ, ಶಹಾಪುರ, ಸುರಪುರ ಕಚೇರಿಗಳಿಗೆ ಸೆ. 22ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (ಜಿಪಂ)ರನ್ನು ಮೊ: 9164570011, ಶಹಾಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (ಜಿಪಂ)ರನ್ನು ಮೊ: 8217490621, ಸುರಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (ಜಿಪಂ)ರನ್ನು ಮೊ: 8217748605 ಮೂಲಕ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.