ಸಾರಾಂಶ
ಕೃಷಿ ಇಲಾಖೆ ವತಿಯಿಂದ ಕೃಷಿಭಾಗ್ಯ ಯೋಜನೆ ಮೂಲಕ 2025 - 26ನೇ ಸಾಲಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ 1.25 ಲಕ್ಷ ರು. ಸಹಾಯಧನ ನೀಡಲಾಗುತ್ತಿದೆ. ರೈತರು ಈ ಯೋಜನೆಯ ಲಾಭ ಪಡೆಯುವಂತೆ ಹೋಬಳಿ ಕೃಷಿ ಅಧಿಕಾರಿ ರಕ್ಷಿತ್ ಎಚ್ ಎಸ್ ತಿಳಿಸಿದರು. ಈ ಯೋಜನೆಯ ಲಾಭ ಪಡೆಯಲು ಕೃಷಿ ಇಲಾಖೆಯ ನಿಬಂಧನೆ ಯಂತೆ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು ಹಾಗೂ ಈಗಾಗಲೇ ಕೃಷಿ ಹೊಂಡ ಪಡೆದಿದ್ದರೆ ಈ ಯೋಜನೆಗೆ ಅನ್ವಯಿಸುವುದಿಲ್ಲ ಹೊಸ ರೈತರಿಗಾಗಿ ಈ ಯೋಜನೆಯನ್ನು ಕೃಷಿ ಇಲಾಖೆ ಜಾರಿಗೆ ತಂದಿದೆ ಎಂದರು.
ಕನ್ನಡಪ್ರಭ ವಾರ್ತೆ ಬಾಗೂರು
ಕೃಷಿ ಇಲಾಖೆ ವತಿಯಿಂದ ಕೃಷಿಭಾಗ್ಯ ಯೋಜನೆ ಮೂಲಕ 2025 - 26ನೇ ಸಾಲಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ 1.25 ಲಕ್ಷ ರು. ಸಹಾಯಧನ ನೀಡಲಾಗುತ್ತಿದೆ. ರೈತರು ಈ ಯೋಜನೆಯ ಲಾಭ ಪಡೆಯುವಂತೆ ಹೋಬಳಿ ಕೃಷಿ ಅಧಿಕಾರಿ ರಕ್ಷಿತ್ ಎಚ್ ಎಸ್ ತಿಳಿಸಿದರು.ಹೋಬಳಿಯ ಬಿ ಕಾಳೇನಹಳ್ಳಿ ಗ್ರಾಮದಲ್ಲಿ ತಾಲೂಕು ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರದ ವತಿಯಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಮೂಲಕ ರೈತರಿಗೆ ಉಚಿತ ಅಲಸಂದೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಅಡಿಯಲ್ಲಿ ತಾಲೂಕು ಕೃಷಿ ಇಲಾಖೆ ಹಾಗೂ ಕ್ಷೇತ್ರದ ಶಾಸಕರ ಮನವಿ ಮೇರೆಗೆ ಹೋಬಳಿಯ ಬಿ ಕಾಳೇನಹಳ್ಳಿ ಗ್ರಾಮವನ್ನು 2025- 26ನೇ ಸಾಲಿನಲ್ಲಿ ಆಯ್ಕೆ ಮಾಡಿಕೊಂಡು ರೈತರಿಗೆ ಉಚಿತವಾಗಿ ಸುಮಾರು 7.50 ಕ್ವಿಂಟಲ್ ಅಲಸಂದೆ ಬಿತ್ತನೆ ಬೀಜವನ್ನು ಗ್ರಾಮದ ಸುಮಾರು 200 ಮನೆಗಳಿಗೆ ವಿತರಣೆ ಮಾಡಲಾಗಿದೆ ಎಂದರು.2025 26ನೇ ಸಾಲಿನ ಕೃಷಿ ಭಾಗ್ಯ ಯೋಜನೆ ಮೂಲಕ ಕೃಷಿ ಹೊಂಡ ನಿರ್ಮಾಣಕ್ಕೆ 1.25 ಲಕ್ಷ ರು. ಸಹಾಯಧನ ನೀಡಲಾಗುತ್ತಿದೆ. ಕೃಷಿ ಹೊಂಡ ನಿರ್ಮಾಣದಲ್ಲಿ ರೈತರಿಗೆ 5 ಎಚ್‌ಪಿ ಡೀಸೆಲ್ ಪಂಪ್ ಟಾರ್ಪಲ್ ಹಾಗೂ ಕೃಷಿ ಹೊಂಡ ಸುತ್ತ ತಂತಿ ಬೇಲಿ ನಿರ್ಮಾಣಕ್ಕೆ ಹೆಚ್ಚಿನ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹೋಬಳಿ ವ್ಯಾಪ್ತಿಯ ಆಸಕ್ತ ರೈತರು ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯ ಲಾಭ ಪಡೆಯಲು ಕೃಷಿ ಇಲಾಖೆಯ ನಿಬಂಧನೆ ಯಂತೆ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು ಹಾಗೂ ಈಗಾಗಲೇ ಕೃಷಿ ಹೊಂಡ ಪಡೆದಿದ್ದರೆ ಈ ಯೋಜನೆಗೆ ಅನ್ವಯಿಸುವುದಿಲ್ಲ ಹೊಸ ರೈತರಿಗಾಗಿ ಈ ಯೋಜನೆಯನ್ನು ಕೃಷಿ ಇಲಾಖೆ ಜಾರಿಗೆ ತಂದಿದೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಮೋಹನ್ ಕುಮಾರ್ ಅವರು ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿಭಾಗ್ಯ ಹಾಗೂ ಹೆಚ್ಚಿನ ಬಿತ್ತನೆ ಬೀಜ ದಾಸ್ತಾನು ಕೊಡಿಸಲು ಹೆಚ್ಚು ಗಮನ ಹರಿಸಿದ್ದಾರೆ ಎಂದು ತಿಳಿಸಿದರು.ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರಗಳಿಂದ ಉತ್ತಮ ಮಳೆಯಾಗುತ್ತಿದ್ದು ಪೂರ್ವ ಹಂಗಾಮಿಗೆ ಬಿತ್ತನೆಗಾಗಿ ಹೆಸರು, ತೊಗರಿ, ಉದ್ದು, ಅಲಸಂದೆ, ಜೋಳ ಸೇರಿದಂತೆ ವಿವಿಧ ಬಿತ್ತನೆ ಬೀಜಗಳನ್ನು ರೈತರಿಗೆ ದರದಲ್ಲಿ ಕೊಡಲಾಗುತ್ತದೆ. ರೈತರು ಕೃಷಿ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಇಳುವರಿ ಪಡೆಯುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೀಲಾ ಮಂಜೇಗೌಡ, ಡೇರಿ ಕಾರ್ಯದರ್ಶಿ ಕೆ ಪಿ ಮಂಜೇಗೌಡ, ಸೇರಿದಂತೆ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ವರ್ಗ ಹಾಜರಿದ್ದರು.