ಧರ್ಮಸ್ಥಳದಿಂದ ಸರ್ಕಾರಿ ಶಾಲೆ ಕಟ್ಟಡಕ್ಕೆ ಸಹಾಯಧನ

| Published : Mar 03 2024, 01:30 AM IST

ಸಾರಾಂಶ

ಪಟ್ಟಣದ ಆರೂರು ಲಕ್ಷ್ಮಿನಾರಾಯಣ ರಾವ್ ಸ್ಮಾರಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಒದಗಿಸಿಕೊಡುವಂತೆ ಶಾಲಾ ಮುಖ್ಯಸ್ಥರು ಕೊಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧರ್ಮಸ್ಥಳಕ್ಕೆ ಮನವಿ ಸಲ್ಲಿಸಿದ್ದು ಮನವಿಗೆ ಸ್ಪಂದಿಸಿದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರು. ೭೫,೦೦೦ ಹಣ ಬಿಡುಗಡೆಗೊಳಿಸಿ ಮಂಜೂರಾತಿ ಪತ್ರವನ್ನು ಕಚೇರಿಗೆ ಕಳುಹಿಸಿದ್ದರು.

ಕೊಪ್ಪ: ಪಟ್ಟಣದ ಆರೂರು ಲಕ್ಷ್ಮಿನಾರಾಯಣ ರಾವ್ ಸ್ಮಾರಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಒದಗಿಸಿಕೊಡುವಂತೆ ಶಾಲಾ ಮುಖ್ಯಸ್ಥರು ಕೊಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧರ್ಮಸ್ಥಳಕ್ಕೆ ಮನವಿ ಸಲ್ಲಿಸಿದ್ದು ಮನವಿಗೆ ಸ್ಪಂದಿಸಿದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರು. ೭೫,೦೦೦ ಹಣ ಬಿಡುಗಡೆಗೊಳಿಸಿ ಮಂಜೂರಾತಿ ಪತ್ರವನ್ನು ಕಚೇರಿಗೆ ಕಳುಹಿಸಿದ್ದರು.

ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ನಿರಂಜನ್, ಮೇಲ್ವಿಚಾರಕ ರವಿಕುಮಾರ್, ಶಾಲೆಗೆ ತೆರಳಿ, ಮಂಜೂರಾತಿ ಪತ್ರ ಹಸ್ತಾಂತರಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶಬ್ರೀನ್ ತಾಜ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್ ಸಾಗರ್, ಸರ್ಕಾರಿ ಶಾಲಾ ಪುನಶ್ಚೇತನ ಸಮಿತಿ ಅಧ್ಯಕ್ಷೆ ಆಶಾಪೆರಿಸ್, ಜಾನ್ ಪೆರಿಸ್, ಕಿಶೋರ್ ಪೇಜಾವರ್, ಸತ್ಯಜಿತ್ ಶೆಟ್ಟಿ, ಶಿವಾನಂದ, ಪ್ರಭಾರಿ ಮುಖ್ಯ ಶಿಕ್ಷಕ ಮಂಜುನಾಥ್, ಸಹಶಿಕ್ಷಕರು ಹಾಜರಿದ್ದು ಮಂಜೂರಾತಿ ಪತ್ರ ಸ್ವೀಕರಿಸಿದರು.