ಹೊಸರಿತ್ತಿಯಲ್ಲಿ ಸುಬುಧೇಂದ್ರ ತೀರ್ಥ ವಿದ್ಯಾಸಂಸ್ಥೆ ಲೋಕಾರ್ಪಣೆ

| Published : Jun 30 2025, 12:34 AM IST

ಸಾರಾಂಶ

ಜಿಲ್ಲೆಯಲ್ಲಿ ಹಲವಾರು ಯತಿವರ್ಯರು, ಸಾಧು ಸಂತರು, ವೀರಶೈವ ಸಮಾಜದ ಅನೇಕ ಶ್ರೀಗಳು ಜನಿಸಿ ಹೋಗಿದ್ದಾರೆ.

ಹಾವೇರಿ: ತಾಲೂಕಿನ ಹೊಸರಿತ್ತಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಸುಬುಧೇಂದ್ರ ತೀರ್ಥ ವಿದ್ಯಾಸಂಸ್ಥೆಯನ್ನು ಮಂತ್ರಾಲಯದ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆಗೊಳಿಸಿದರು.ಬಳಿಕ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಯತಿವರ್ಯರು, ಸಾಧು ಸಂತರು, ವೀರಶೈವ ಸಮಾಜದ ಅನೇಕ ಶ್ರೀಗಳು ಜನಿಸಿ ಹೋಗಿದ್ದಾರೆ. ಹೊಸರಿತ್ತಿಯ ಸಿದ್ದಲಿಂಗೇಶ ಅಂಕಲಕೋಟಿ ತಮ್ಮ ಸ್ವಂತ ಜಮೀನಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಶಿಕ್ಷಣ ನೀಡಲು ಸಂಸ್ಥೆಯನ್ನು ನಿರ್ಮಿಸಿದ್ದಾರೆ. ಈ ಭಾಗದ ಮಕ್ಕಳು ವಿದ್ಯಾಸಂಸ್ಥೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು. ಸರಸ್ವತಿ ದೇವಿಯ ಅನುಗ್ರಹ ಪಡೆದುಕೊಂಡು, ಮುಂದಿನ ದಿನಗಳಲ್ಲಿ ಸಾರ್ಥಕತೆ ಮತ್ತು ಸಫಲತೆಯನ್ನು ಕಾಣಬೇಕೆಂದು ಆಶಿಸಿದರು.ಈ ವೇಳೆ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಶ ಅಂಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಹಾವೆಮುಲ್ ನಿರ್ದೇಶಕ ಬಸವೇಶ್ವರಗೌಡ ಪಾಟೀಲ, ಹಂದಿಗನೂರ ಗ್ರಾಪಂ ಸದಸ್ಯ ರವಿ ಪಾಟೀಲ, ವೀರಪ್ಪಜ್ಜ ಕಲ್ಲೇದೇವರ, ಕೆ.ಸಿ. ಕೋರಿ, ಐ.ಜಿ. ಕೋರಿ, ಚನ್ನವೀರಯ್ಯ ಹಾವೇರಿಮಠ, ರಾಣಿಬೆನ್ನೂರು ಶಹರ ಠಾಣೆಯ ಪಿಎಸ್‌ಐ ವಿಜಯಕುಮಾರ ಬಳಿಗಾರ, ರವಿ, ಗಾಯತ್ರಿ ಪಾಟೀಲ, ವಿ.ಎಸ್. ಯಾವಗಲ್, ರಾಮಣ್ಣ ಬಡಕರಿಯಪ್ಪನವರ, ಸುಮತಿ ಅಂಕಲಕೋಟಿ, ಮಹೇಶ ಕಲ್ಲೇದೇವರ, ಮಂಜುಳಾ ಪಾಟೀಲ ಇತರರು ಇದ್ದರು. ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಪಾಕ್ಷಿಕ ದಿನ

ಹಾವೇರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗಿ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ಪಾಕ್ಷಿಕ ದಿನ ಕಾರ್ಯಕ್ರಮ ಜೂ. 30ರಂದು ಬೆಳಗ್ಗೆ 10 ಗಂಟೆಗೆ ನಗರದ ಹೊಸಮಠದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಲಿದೆ.

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶೈಲಜಾ ಎಚ್.ವಿ. ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಂಜುನಾಥ ವಡ್ಡರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ ಇತರರು ಪಾಲ್ಗೊಳ್ಳಲಿದ್ದಾರೆ.ಮನೋವೈದ್ಯ ಡಾ. ವಿಜಯಕುಮಾರ ಬಿ. ಅವರು ಮಾದಕ ವಸ್ತುಗಳ ದುಷ್ಪರಿಣಾಮ ಮತ್ತು ಮಾನಸಿಕ ರೋಗದ ಲಕ್ಷಣಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.