ನಿರಂತರ ಪರಿಶ್ರಮದಿಂದ ಮಾತ್ರ ಯಶಸ್ಸು

| Published : Feb 05 2025, 12:33 AM IST

ಸಾರಾಂಶ

ನಿರಂತರ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಶ್ರೀಕ್ಷೇತ್ರ ಹುಣಸಿಕೊಳ್ಳಮಠದ ರಾಚೋಟಿ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ನಿರಂತರ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಶ್ರೀಕ್ಷೇತ್ರ ಹುಣಸಿಕೊಳ್ಳಮಠದ ರಾಚೋಟಿ ಮಹಾಸ್ವಾಮಿಗಳು ನುಡಿದರು.

ಸ್ಥಳೀಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ 2024-25ನೇ ಸಾಲಿನ ಪಾರಿತೋಷಕ ವಿತರಣೆ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಒಂದು ಕಾರ್ಯದಲ್ಲಿ ತೊಡಗಿದ ಮೇಲೆ ಅದರಲ್ಲಿ ಸಂಪೂರ್ಣವಾಗಿ ಪರಿಶ್ರಮ ಹಾಕಿದರೇ ಹೇಗೆ ಉತ್ತಮ ಫಲ ಸಿಗುತ್ತದೆ ಎಂಬುವುದಕ್ಕೆ ದೃಷ್ಟಾಂತದ ಮೂಲಕ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಿದರು. ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್‌ಗೆ ದಾಸರಾಗಿದ್ದು, ಇದರಿಂದಾಗಿ ಅವರಿಗೆ ಶಿಕ್ಷಣದಲ್ಲಿ ಆಸಕ್ತಿ ಕಡಿಮೆಯಾಗಿ ಅವರ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. ಆದಕಾರಣ ಸಮೂಹ ಮಾದ್ಯಮಗಳನ್ನು ಅವಶ್ಯಕ್ಕೆ ತಕ್ಕಂತೆ ಮಾತ್ರ ಉಪಯೋಗಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬಿ.ಬಿ.ಕೊಡ್ಲಿ ಉಪನ್ಯಾಸಕರು 2024-25ನೇ ಸಾಲಿನ ಮಹಾವಿದ್ಯಾಲಯದ ವರದಿವಾಚನ ನೀಡಿ ಕಾಲೇಜಿನ ಪ್ರಗತಿ, ಬೆಳವಣಿಗೆ ಹಾಗೂ ಶೈಕ್ಷಣಿಕ ಸಾಧನೆಯ ಕುರಿತು ವಿವರಿಸಿದರು. ಸಾಂಸ್ಕೃತಿಕ ವಿಭಾಗದ ಪಾರಿತೋಷಕ ವಿತರಣೆಯನ್ನು ದೀಪಾ ತೇಲಿ ನಡೆಸಿಕೊಟ್ಟರು. ಇಕೋ ಕ್ಲಬ್ ಹಾಗೂ ಬಿ.ಐ.ಎಸ್ ಕ್ಲಬ್ ವತಿಯಿಂದ ಜರುಗಿದ ಸ್ಪರ್ಧೆಗಳಲ್ಲಿ ವಿಜೇತರಾರದವರಿಗೆ ಪಾರಿತೋಷಕ ವಿತರಣೆ ಕಾರ್ಯಕ್ರಮವನ್ನು ಎ.ಎ.ಕಿವಂಡಾ ನಡೆಸಿಕೊಟ್ಟರು. ಅದರಂತೆ ವಾರ್ಷಿಕ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ ಕಾರ್ಯಕ್ರಮವನ್ನು ಕ್ರೀಡಾ ಸಂಯೋಜಕ ಬಿ.ಬಿ.ಕೊಡ್ಲಿ ನಡೆಸಿಕೊಟ್ಟರು. ವಿಜೇತರಿಗೆ ಬಹುಮಾನ ವಿತರಣೆ ನಗದು ವಿತರಣೆ ಹಾಗೂ ಪದಕಗಳ ವಿತರಣೆಯನ್ನು ಸಭೆಯಲ್ಲಿದ್ದ ಎಲ್ಲ ಅತಿಥಿ ಗಣ್ಯರು ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವೀರಣ್ಣ ಬಿಸಿರೊಟ್ಟಿ, ಸದಸ್ಯರಾದ ಸಿದ್ದಪ್ಪ ಶಿಳ್ಳಿ, ಪಾರಿಸ ಮಲಾಜಿ, ಅಸ್ಲಂ ಪಕಾಲಿ, ಶಿವಕುಮಾರ ಪೋತದಾರ, ರಾಜು ಮಾರ್ಯಾಳಿ, ಭರಮಾ ದೂಪದಾಳಿ ಮತ್ತಿತರರು ಭಾಗವಹಿಸಿದ್ದರು. ಕುಮಾರಿ. ಗಂಗಮ್ಮ ಮಠಪತಿ ಉಪನ್ಯಾಸಕಿ ಪ್ರಾರ್ಥನೆ ಸಲ್ಲಿಸಿದರು. ಎಸ್.ಎ.ರಾಮನಕಟ್ಟಿ ಸ್ವಾಗತ ಕೋರಿದರು. ಎಸ್.ಆರ್.ತಬರಿ ಕಾರ್ಯಕ್ರಮ ನಿರೂಪಿದರು. ಉಪನ್ಯಾಸಕಿ ಸುಪ್ರಿಯಾ ಮಲಗೌಡನವರ ವಂದಿಸಿದರು.