ವಿದ್ಯೆ ಅಪಹರಿಸಲಾಗಿದ ಸಂಪತ್ತಾಗಿದ್ದು ಸದೃಢ ಮನಸ್ಥಿತಿ ವಿನಯ ಶೀಲತೆಯಿಂದ ತಮ್ಮ ಗುರಿಯ ಕಡೆಗೆ ವಿದ್ಯಾರ್ಥಿಗಳು ಸಾಗಬೇಕು ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ ಶೇಟ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಸೊರಬ
ವಿದ್ಯೆ ಅಪಹರಿಸಲಾಗಿದ ಸಂಪತ್ತಾಗಿದ್ದು ಸದೃಢ ಮನಸ್ಥಿತಿ ವಿನಯ ಶೀಲತೆಯಿಂದ ತಮ್ಮ ಗುರಿಯ ಕಡೆಗೆ ವಿದ್ಯಾರ್ಥಿಗಳು ಸಾಗಬೇಕು ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ ಶೇಟ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ೪ ಜನ ಟಾಪರ್ ವಿದ್ಯಾರ್ಥಿಗಳನ್ನು ವೇದಿಕೆಯ ವತಿಯಿಂದ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ರಾಜ್ಯಾದಾದ್ಯಂತ ವಿದ್ಯಾರ್ಥಿನಿಯರು ಹೆಚ್ಚು ತೇರ್ಗಡೆಗೊಂಡಿದ್ದು ಈ ದಿಶೆಯಲ್ಲಿ ಸೊರಬ ತಾಲೂಕಿನ ಭಾಗ್ಯಶ್ರೀ ಕೃಷ್ಣಮೂರ್ತಿ ಶೇಟ್ ಆನವಟ್ಟಿ, ೫೭೭ (ವಿಜ್ಞಾನ), ಸಂಗೀತ ಬಿ ಆನವಟ್ಟಿ ೫೭೪ (ವಾಣಿಜ್ಯ) ಮತ್ತು ಕಲಾವಿಭಾಗದಲ್ಲಿ ಪ್ರಿಯಾಂಕ ಎಸ್. ಆನವಟ್ಟಿ ೫೭೩, ಜ್ಯೋತಿ ಎಸ್. ನಿಸರಾಣಿ ೫೭೩ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದು, ಪೋಷಕರಿಗೆ ಶಿಕ್ಷಕರುಗಳಿಗೆ ಒಟ್ಟಾರೆ ತಾಲೂಕಿನ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಅಭಿನಂದಿಸಿದರು.ಕಳೆದ ೫ ವರ್ಷಗಳಿಂದ ವೇದಿಕೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರನ್ನು ತಮ್ಮ ವೇದಿಕೆಯ ವತಿಯಿಂದ ಸನ್ಮಾನಿಸುತ್ತಾ ಬಂದಿದ್ದೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಸಾಧನೆ ಮೆಚ್ಚುವಂತಾಗಿದೆ. ಆತ್ಮ ವಿಶ್ವಾಸದಿಂದ ಮುನ್ನುಗಿದರೆ ಯಶಸ್ಸು ಕಟಿಟ್ಟಬುತ್ತಿ ಎಂಬುದನ್ನು ಇವರು ತೋರಿಸಿದ್ದಾರೆ ಎಂದರು.
ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಾವಿತ್ರಿ ಜ್ಯೋತಿ ಬಾಪುಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ಗಂಡು ಹೆಣ್ಣು ಸರಿಸಮಾನತೆಗೆ ಪ್ರಯತ್ನಿಸಿದರು. ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕುವ ಶ್ರದ್ಧಾ ಭಕ್ತಿಯು ವಿದ್ಯಾಭ್ಯಾಸದ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ ಅಲ್ಲದೆ ಓದು, ಕೆಲಸದ ಜೊತೆಗೆ ಜೀವನ ಪರೀಕ್ಷೆಯಲ್ಲಿ ಎಲ್ಲರೂ ತೇರ್ಗಡೆಗೊಳ್ಳಲಿ ಎಂದು ಆಶಿಸಿದರು.ಶಂಕರ ಶೇಟ್ ಕಳೆದ ೫ ವರ್ಷಗಳಿಂದ ಪ್ರತಿಭಾವಂತರಿಗೆ ಸನ್ಮಾನಿಸಿ ಪ್ರೋತ್ರಾಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ಒಂದು ಸುವರ್ಣ ಅವಕಾಶ. ಜೀವನದಲ್ಲಿ ಸಾಧನೆ ಮಾಡಲು ಭಯವಿರಬಾರದು. ಸಾಧನೆ ಸಂಭ್ರಮದ ಖುಷಿ ಮುಂದುವರಿಸಿಕೊಂಡು ಹೋಗಿ ಎಂದರು.
ಸಮಾಜ ಸೇವಕರಾದ ರಾಜು ಹಿರಿಯಾವಲಿ, ವಿಜೇಂದ್ರ ಜಡೆ, ಪಾಣಿ ರಾಜಪ್ಪ, ರಾಘವೇಂದ್ರ ಸಿದ್ದಾಪುರ, ಉಪನ್ಯಾಸಕ ಡಾ| ಉಮೇಶ ಭದ್ರಾಪುರ, ಮಹೇಶ ಕಾರ್ವಿ, ಆರ್ಚನಾ ರಾಘವೇಂದ್ರ, ಪುಷ್ಪಾ, ಭಾರತಿ ಭಂಡಾರಿ, ಸರಸ್ವತಿ ನಾವಡ, ನಾಗರಾಜ ಇತರರು ಇದ್ದರು.