ಪಠ್ಯದಾಚೆಗಿನ ಜ್ಞಾನದಿಂದ ಯಶಸ್ವು ಸಾಧ್ಯ: ಗಂಗಾಧರ ಸ್ವಾಮಿ

| Published : Feb 16 2025, 01:46 AM IST

ಪಠ್ಯದಾಚೆಗಿನ ಜ್ಞಾನದಿಂದ ಯಶಸ್ವು ಸಾಧ್ಯ: ಗಂಗಾಧರ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಓದು ಮಾತ್ರವೇ ಜೀವನದ ಸಾಧನೆಯಲ್ಲ. ಪ್ರಾಯೋಗಿಕ ಜ್ಞಾನ, ಪಠ್ಯ ಹೊರತಾದ ಕಲಿಕೆಯೇ ಜೀವನದ ನಿಜವಾದ ಪಾಠವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಓದು ಮಾತ್ರವೇ ಜೀವನದ ಸಾಧನೆಯಲ್ಲ. ಪ್ರಾಯೋಗಿಕ ಜ್ಞಾನ, ಪಠ್ಯ ಹೊರತಾದ ಕಲಿಕೆಯೇ ಜೀವನದ ನಿಜವಾದ ಪಾಠವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಬಿಜೆಎಂ ಶಾಲೆ ಹಾಗೂ ಜಿಎನ್‌ಬಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಅರಿವಿನ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಉನ್ನತ ಶಿಕ್ಷಣ ಪಡೆದವರೂ ಕೂಡ ಹಲವಾರು ಕ್ಷೇತ್ರದಲ್ಲಿ ಹಿಂದುಳಿದ ನಿದರ್ಶನಗಳಿವೆ. ಬಲ ಮಿದುಳನ್ನು ಹೆಚ್ಚು ಬಳಸಿದಷ್ಟು ಚುರುಕುತನ ಬರಲಿದೆ. ಕಲಿಕೆ ನಿರಂತರವಾಗಿದೆ, ಆದರೆ ಅದು ಗಿಳಿಪಾಠವಾದರೆ, ಪುಸ್ತಕದ ಒಳಗಿದ್ದರೆ ಪ್ರಯೋಜನಕಾರಿಯಾಗದು ಎಂದರು.

ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ, ಸಂಸ್ಕೃತಿ ಮತ್ತು ಸಂಸ್ಕಾರ ಆಧುನಿಕ ಶಿಕ್ಷಣದ ಅಡಿಪಾಯ. ಮಕ್ಕಳು ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಹೆತ್ತವರನ್ನು ಗೌರವಿಸುವ ಪರಿಪಾಠ ಬಿಡಬಾರದು. ಕೆಎಎಸ್, ಐಎಎಸ್ ಮೊದಲಾದ ದೊಡ್ಡ ಹುದ್ದೆಗೆ ಹೋಗದೇ, ಕನಿಷ್ಠ ದರ್ಜೆಯಲ್ಲಿ ಉತ್ತೀರ್ಣರಾದರೂ ಪರವಾಗಿಲ್ಲ, ಸಮಾಜ, ದೇಶಕ್ಕೆ ರಿಮಾರ್ಕ್ ಆಗಬಾರದು. ರಾಷ್ಟ್ರಕ್ಕೆ ಕೊಡುಗೆ ನೀಡು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಎಲ್ಲ ಮಕ್ಕಳಲ್ಲೂ ಬುದ್ಧಿಮತ್ತೆ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ನವಲಗುಂದದ 4 ವರ್ಷದ ಪೋರ ಆರ್ಯವರ್ಧನ್ ಕೋಟಿಗೆ ಸಂಗಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸವಣೂರು ತಾಲೂಕಿನ ತವರ ಮಳ್ಳಿಹಳ್ಳಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಪುಷ್ಪಮಾಲಾ ಆರ್. ಚಂದ್ರಗಿರಿ, ಗದಗಿನ ಜೇಸಿ ಪ್ರೌಢಶಾಲೆಯ ಶಿಕ್ಷಕಿ ದಾನಮ್ಮ ಚಂದ್ರಶೇಖರ ತಗ್ಗಿನಕೇರಿ ಹಾಗೂ ಬಿಜೆಎಂ ಸಾಧನಶ್ರೀ ಪ್ರಶಸ್ತಿ ಪುರಸ್ಕೃತರಾದ ಶಾಲೆ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಎಂ.ಎಸ್.ಸಂತೋಷ ಕುಮಾರ, ಗುಪ್ತದಳದ ಎಸ್‌ಪಿ ವೇದಮೂರ್ತಿ, ವಕೀಲ ಕುಮಾರ ತ್ಯಾವಣಿಗೆ, ಸಂಸ್ಥೆ ಕಾರ್ಯದರ್ಶಿ ಕೆ.ಎಸ್.ಮಂಜುನಾಥ ಅಗಡಿ, ಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪೋಷಕರು, ಮಕ್ಕಳು ಇದ್ದರು.

- - - -11ಕೆಡಿವಿಜಿ35:

ದಾವಣಗೆರೆಯ ಬಿಜೆಎಂ ಶಾಲೆಯ ವಾರ್ಷಿಕೋತ್ಸವದಲ್ಲಿ ಕೂಡಲ ಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಾಲಕ ಆರ್ಯವರ್ಧನ್ ಕೋಟಿ ಗೆ ಸಂಗಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.