ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ

| Published : Dec 08 2024, 01:19 AM IST

ಸಾರಾಂಶ

ದಾವಣಗೆರೆಯ ಜೈನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ನಡೆದ ಶೈಕ್ಷಣಿಕ ವರ್ಷದ ಗ್ರಾಜುಯೇಷನ್ ಕಾರ್ಯಕ್ರಮವನ್ನು ಡಾ.ಸುರೇಶ್ ಎಚ್.ಜಂಗಮಶೆಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಲಿಕೆ ಎಂಬುದು ನಿರಂತರವಾಗಿರಬೇಕು. ಕೆಲಸ ಮಾಡುವ ಮನೋಭಾವ ಮತ್ತು ಕೌಶಲ್ಯ ಬೆಳೆಸಿಕೊಳ್ಳಿ ಎಂದು ಹಾವೇರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸುರೇಶ್ ಎಚ್.ಜಂಗಮಶೆಟ್ಟಿ ಹೇಳಿದರು.ನಗರದ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಶನಿವಾರ ನಡೆದ ಶೈಕ್ಷಣಿಕ ವರ್ಷದ ಗ್ರಾಜುಯೇಷನ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ಅಧ್ಯಯನ ಮಾಡಿದಾಗ ಯಶಸ್ಸು ಹುಡುಕಿಕೊಂಡು ಬರುತ್ತದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ.ಗಣೇಶ್ ಮಾತನಾಡಿ, ಜೈನ್ ಕಾಲೇಜಿನ ದೃಷ್ಠಿ ಧ್ಯೇಯ ಮತ್ತು ಶೈಕ್ಷಣಿಕ ಸಾಧನೆಗಳನ್ನು ತಿಳಿಸಿದರು. ಹಾಗೆಯೆ ದಾವಣಗೆರೆಯು ಶೈಕ್ಷಣಿಕ ಉತ್ಕೃಷ್ಟತೆಯಲ್ಲಿ ಮುಂಚೂಣಿಯಲ್ಲಿದ್ದು, ಇತ್ತೀಚಿಗೆ ಕಾಲೇಜಿಗೆ ನ್ಯಾಕ್ ಎ ಪ್ಲಸ್ ಮಾನ್ಯತೆ ಪಡೆದಿದೆ ಎಂದು ಸ್ಮರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರಿನ ಟೆಕ್‌ಲೀಡ್, ಪ್ಯೂರ್ ಸ್ಟೋರೇಜ್ ವಿಭಾಗದ ಸಂಜೀವ್ ಎಂ.ಬಾಗೇವಾಡಿ ಮಾತನಾಡಿ, ದೇಶದ ಪ್ರಗತಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಬಹುಮುಖ್ಯವಾಗಿದೆ. ಬೆಳೆಯುವುದರ ಜೊತೆಗೆ ಕಾಲೇಜು ಮತ್ತು ಪೋಷಕರಿಗೆ ಗೌರವ ತರುವ ನಾಗರಿಕರಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಮೇರಿಕಾದ ಎಚ್‌ಕ್ಯೂ ಸಾಂಟಾ ಕ್ಲಾರ ಸಿಎ, ಡೀನ್ ಡಾ.ಎನ್.ಮಧುಕೇಶ್ವರ, ಡಾ.ಸಂತೋಷ ಎಂ.ನೇಜಕರ್, ಡಾ.ಬಿ.ಎಂ.ನಂದೀಶ, ಡಾ.ಪಿ.ಎಸ್.ಪ್ರೀತಾ, ವಿವಿಧ ವಿಭಾಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಭಾಗವಹಿಸಿದ್ದರು.