ಸಾರಾಂಶ
ವರ್ಷದ ಬಸವರಾಜು ಅವರನ್ನು ಸಮಾಲೋಚಿಸಿದ ತಕ್ಷಣ ಆಂಜೋಗ್ರಾಮ್ ಮೂಲಕ ಹೃದಯದ ಪ್ರಮುಖ ರಕ್ತನಾಳದ ಶೇ.೧೦೦ರಷ್ಟು ಬ್ಲಾಕ್ ಆಗಿರುವುದು ತಿಳಿದು ಬಂದಿದೆ. ನಂತರ ಡಾ.ಮದಕರಿನಾಯಕರವರು ರೋಗಿಯ ಸಂಬಂಧಿಕರಿಗೆ ಮುಂದಿನ ಚಿಕಿತ್ಸೆಯ ಬಗ್ಗೆ ತಿಳಿವಳಿಕೆ ನೀಡಿ ಏಂಜಿಯೋಪ್ಲಾಸ್ಟಿ ಹಾಗೂ ಹೃದಯದ ಕೆಲಸವನ್ನು ನಿಯಂತ್ರಿಸಲು ಹೆಚ್ಚಿನ ಚಿಕಿತ್ಸೆ ನೀಡಿ ಯಶಸ್ವಿ ಚಿಕಿತ್ಸೆಯಿಂದ ರೋಗಿಯನ್ನು ಪ್ರಾಣಾಪಾಯದಿಂದ ಬದುಕುಳಿಸಿದ್ದಾರೆ. ಹಾಗೂ ೯ ದಿನಗಳ ಆಸ್ಪತ್ರೆಯ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಿ ರೋಗಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಹಾಸನ: ನಗರದ ನಿವಾಸಿ ಬಸವರಾಜು(ಹೆಸರು ಬದಲಿಸಿದೆ) ಇವರಿಗೆ ಸಂಜೆ ೮ ಗಂಟೆಯ ಸಮಯದಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಿಪಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಹಾಸನದ ಬಿ.ಎಂ.ರಸ್ತೆ, ಭಾನು ಥಿಯೇಟರ್ ಹತ್ತಿರವಿರುವ ಸ್ಪರ್ಶ್ ಆಸ್ಪತ್ರೆಗೆ ಮಧ್ಯರಾತ್ರಿ ೧೨ ಗಂಟೆಗೆ ರೋಗಿಯನ್ನು ದಾಖಲಿಸಲಾಗುತ್ತದೆ. ಆ ಸಮಯದಲ್ಲಿ ರೋಗಿಯು ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು, ಜೀವನ್ಮರಣ ಸ್ಥಿತಿ ಹಾಗೂ ಹೃದಯ ವೈಫಲ್ಯದಿಂದ ಬಳಲುತ್ತಿದ್ದರು. ಅವರನ್ನು ಬದುಕುಳಿಸುವುದರಲ್ಲಿ ಸ್ಪರ್ಶ್ ಆಸ್ಪತ್ರೆಯ ವೈದ್ಯ ಡಾ. ಮದಕರಿನಾಯಕರವರು ಯಶಸ್ವಿಯಾಗಿದ್ದು, ರೋಗಿಯು ಆಸ್ಪತ್ರೆಯಲ್ಲಿ ಮರುಜನ್ಮ ಪಡೆದಂತಾಗಿದೆ.
೩೬ ವರ್ಷದ ಬಸವರಾಜು ಅವರನ್ನು ಸಮಾಲೋಚಿಸಿದ ತಕ್ಷಣ ಆಂಜೋಗ್ರಾಮ್ ಮೂಲಕ ಹೃದಯದ ಪ್ರಮುಖ ರಕ್ತನಾಳದ ಶೇ.೧೦೦ರಷ್ಟು ಬ್ಲಾಕ್ ಆಗಿರುವುದು ತಿಳಿದು ಬಂದಿದೆ. ನಂತರ ಡಾ.ಮದಕರಿನಾಯಕರವರು ರೋಗಿಯ ಸಂಬಂಧಿಕರಿಗೆ ಮುಂದಿನ ಚಿಕಿತ್ಸೆಯ ಬಗ್ಗೆ ತಿಳಿವಳಿಕೆ ನೀಡಿ ಏಂಜಿಯೋಪ್ಲಾಸ್ಟಿ ಹಾಗೂ ಹೃದಯದ ಕೆಲಸವನ್ನು ನಿಯಂತ್ರಿಸಲು ಹೆಚ್ಚಿನ ಚಿಕಿತ್ಸೆ IಂಃP ಇಂಟ್ರಾ ಅಯೋರ್ಟಿಕ್ ಬಲೂನ್ ಪಂಪಿಂಗ್ ಅಳವಡಿಸಿ ಯಶಸ್ವಿ ಚಿಕಿತ್ಸೆಯಿಂದ ರೋಗಿಯನ್ನು ಪ್ರಾಣಾಪಾಯದಿಂದ ಬದುಕುಳಿಸಿದ್ದಾರೆ. ಹಾಗೂ ೯ ದಿನಗಳ ಆಸ್ಪತ್ರೆಯ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಿ ರೋಗಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.ಫೋಟೋ: ಡಾ. ಮದಕರಿ ನಾಯಕ.